

ಮೆಲ್ಬೋರ್ನ್: ಎರಡನೇ ಶ್ರೇಯಾಂಕಿತ ಸ್ಪೇನ್ ತಾರೆ ಕಾರ್ಲೋಸ್ ಅಲ್ಕರಾಜ್ ವರ್ಷದ ಮೊದಲ ಗ್ರಾಂಡ್ ಸ್ಲಾಂ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದ ಎಂಟರ ಘಟ್ಟದಲ್ಲಿ ಹೋರಾಟ ಕೊನೆಗೊಳಿಸಿದ್ದಾರೆ. ಒಲಿಂಪಿಕ್ಸ್ ಚಾಂಪಿಯನ್, ಅಲೆಕ್ಸಾಂಡರ್ ಜ್ವೆರೇವ್ 6-1, 6-3, 6-7,6-4 ರಿಂದ ವಿಂಬಲ್ಡನ್ ಚಾಂಪಿಯನ್ ಅಲ್ಕರಾಜ್‌ಗೆ ಸೋಲುಣಿಸಿದರು. ಹಿಂದಿನ 10 ಮುಖಾಮುಖಿಯಲ್ಲಿ ಸೋಲಿನ ಹಿನ್ನಡೆ ಕಂಡಿದ್ದ ಜ್ವೆರೇವ್ ಮೊದಲೆರಡು ಸೆಟ್‌ನಲ್ಲಿ ಮೇಲುಗೈ ಸಾಧಿಸಿದರು. ಟೈ ಬ್ರೇಕರ್‌ಗೆ ಸಾಗಿದ ಮೂರನೇ ಹಾಗೂ ನಿರ್ಣಾಯಕ ಸೆಟ್‌ನಲ್ಲಿ ಪ್ರಾಬಲ್ಯ ಸಾಧಿಸಿದ ಅಲ್ಕರಾಜ್ ಹೋರಾಟ ಜೀವಂತವಿರಿಸಿದರು. 3 ಗಂಟೆ 5 ನಿಮಿಷಗಳ ಸೆಣಸಾಟದಲ್ಲಿ ಏಕಪಕ್ಷಿಯವಾಗಿ ಗೆಲುವು ದಾಖಲಿಸಿದ ಜ್ವೆರೇವ್ 7ನೇ ಗ್ರಾಂಡ್ ಸ್ಲಾಂ ಸೆಮೀಸ್‌ಗೇರಿದರು.
ರಷ್ಯಾದ ಡೇನಿಲ್ ಮೆಡ್ವೆಡೇವ್ 7-6(4), 2-6, 6-3,5-7,6-4 ಸುದೀರ್ಘ ಹೋರಾಟದಲ್ಲಿ 9ನೇ ಶ್ರೇಯಾಂಕಿತ ಹುಬರ್ಟ್ ಹರ್ಕಾಜ್ ವಿರುದ್ಧ ಗೆಲುವು ದಾಖಲಿಸಿದರು. ಇದರೊಂದಿಗೆ ಮೂರನೇ ಬಾರಿ ಸೆಮಿೈನಲ್‌ಗೇರಿದ ಸಾಧನೆ ಮಾಡಿದರು. ಮೂರನೇ ಶ್ರೇಯಾಂಕಿತ ಮೆಡ್ವೆಡೇವ್ 4 ಗಂಟೆ 30 ನಿಮಿಷ ನಡೆದ ಸುದೀರ್ಘ ಪಂದ್ಯದಲ್ಲಿ ಗೆಲುವು ದಾಖಲಿಸಿದರು. ಎರಡನೇ ಸುತ್ತಿನ ಪಂದ್ಯದಲ್ಲಿ ಮೆಡ್ವೆಡೇವ್ ಬೆಳಗ್ಗೆ 4 ಗಂಟೆಯವರೆಗೂ ಹೋರಾಟ ನಡೆಸಿದ್ದರು.
ನೊಸ್ಕೋವಾ ಪರಾಭವ: ಮಹಿಳೆಯರ ವಿಭಾಗದಲ್ಲಿ ಅರ್ಹತಾ ಸುತ್ತಿನ ಆಟಗಾರ್ತಿ ಡಯಾನಾ ಯಾಸ್ಟ್ರೆಮ್ಸ್ಕಾ 6-3,6-4 ರಿಂದ ಲಿಂಡಾ ನೊಸ್ಕೋವಾ ಎದುರು ಜಯ ದಾಖಲಿಸಿದರು. ಇದರೊಂದಿಗೆ 1978ರ ನಂತರ ಗ್ರಾಂಡ್ ಸ್ಲಾಂ ಸೆಮೀಸ್ ಪ್ರವೇಶಿಸಿದ ಎರಡನೇ ಅರ್ಹತಾ ಸುತ್ತಿನ ಆಟಗಾರ್ತಿ ಎನಿಸಿದರು. ಇನ್ನೊಂದು ಎಂಟರ ಘಟ್ಟದ ಪಂದ್ಯದಲ್ಲಿ ಚೀನಾದ 21 ವರ್ಷದ ಕಿನ್ವೆನ್ ಝೆಂಗ್ 6-7, 6-3, 6-1ರಿಂದ ರಷ್ಯಾದ ಅನ್ನಾ ಕಾಲಿನ್ಸ್ಕಾಯಾ ವಿರುದ್ಧ ಗೆದ್ದು ಬೀಗಿದರು. ಮೂಲಕ ಉಪಾಂತ್ಯಕ್ಕೇರಿದ ಚೀನಾದ ಕಿರಿಯ ಆಟಗಾರ್ತಿ ಎನಿಸಿದರು.