ಹೊಸ ಚರ್ಚೆ ಶುರು! ಸಂಜು ಸ್ಯಾಮ್ಸನ್‌ ಬರ್ತ್ ​ಡೇಗೆ ಸಿಎಸ್​ಕೆ ವಿಶ್​ CSK

Sanju Samson
Published on

ಚೆನ್ನೈ: ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್, ಮುಂಬರುವ ಐಪಿಎಲ್​ಗೆ ಚೆನ್ನೈ ಸೂಪರ್​ ಕಿಂಗ್ಸ್​​ ತಂಡಕ್ಕೆ ಸೇರ್ಪಡೆಗೊಳ್ಳಲಿದ್ದಾರೆ ಎಂಬ ಊಹಾಪೋಹಗಳ ಮಧ್ಯೆ, ಮಹತ್ವದ ಬೆಳವಣಿಗೆ ಎಂಬಂತೆ, ಇಂದು ಸ್ಯಾಮ್ಸನ್​ ಹುಟ್ಟುಹಬ್ಬದ ನಿಮಿತ್ತ ಸಿಎಸ್​ಕೆ (CSK) ಫ್ರಾಂಚೈಸಿ ತನ್ನ ಸಾಮಾಜಿಕ ಜಾಲತಾಣದ ಮೂಲಕ ಸಂಜುಗೆ ಶುಭಾಷಯ ತಿಳಿಸಿದೆ.

2026 ಐಪಿಎಲ್​ಗೆ ಸಿಎಸ್​ಕೆ ಮಹತ್ವದ ಲೆಕ್ಕಾಚಾರವೊಂದನ್ನು ಹಾಕಿದೆ ಎನ್ನುವುದು ಇತ್ತೀಚೆಗೆ ವರದಿಯಾಗಿತ್ತು. ಈ ಮೂಲಕ ಆರ್‌ಆರ್ ನಾಯಕ ಸ್ಯಾಮ್ಸನ್ ಚೆನ್ನೈ ತಂಡಕ್ಕೆ ಸೇರ್ಪಡೆಗೊಳ್ಳಲಿದ್ದಾರೆ. ಇತ್ತ ಸಿಎಸ್‌ಕೆಯ ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾರನ್ನು ಆರ್​ ಆರ್​ ತಂಡಕ್ಕೆ ವರ್ಗಾಯಿಸುವ ಸಾಧ್ಯತೆ ಇದೆ ಎಂಬ ಚರ್ಚೆಗಳು ಜೋರಾಗಿ ನಡೆದಿವೆ.

ಈ ಯೋಜನೆಯು ಪೂರ್ಣಗೊಳ್ಳುವ ಹಂತಕ್ಕೆ ಬಂದಂತೆ ಕಾಣುತ್ತಿರುವಾಗಲೇ, ಸಿಎಸ್‌ಕೆ ಫ್ರಾಂಚೈಸಿ, ಸಂಜು ನಿನಗೆ ಹೆಚ್ಚಿನ ಶಕ್ತಿ ದೊರೆಯಲಿ ಹುಟ್ಟು ಹಬ್ಬದ ಶುಭಾಷಯಗಳು! ಎಂದು ತಮ್ಮ ಅಧಿಕೃತ ಎಕ್ಸ್ ಬರೆದು ಪೋಸ್ಟ್​ ಮಾಡಿದೆ.

ಈ ತಿಂಗಳ ನವೆಂಬರ್ 15 ರಂದು ಯಾವ ಆಟಗಾರರನ್ನು ಉಳಿಸಿಕೊಳ್ಳುವುದು ಎಂಬ ಮಹತ್ವದ ನಿರ್ಧಾರ ಘೋಷಣೆಯಾಗಲಿದೆ ಎಂಬ ಊಹಾಪೋಹಗಳಿರುವುರಿಂದ, ಈ ಒಪ್ಪಂದದ ಬಗ್ಗೆ ಎರಡೂ ಫ್ರಾಂಚೈಸಿಗಳು ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಿಲ್ಲ.

 ಸಂಜು ಸಿಎಸ್‌ಕೆ ತೆರಳವು ಸಾಧ್ಯತೆ ಇದೆಯಾ ಎಂಬುದಕ್ಕೆ ತಜ್ಞರು ಹೇಳಿದ್ದೇನು?

ಸ್ಯಾಮ್ಸನ್ ಸಿಎಸ್‌ಕೆಗೆ ಸ್ಥಳಾಂತರಗೊಳ್ಳುವುದರ ಬಗ್ಗೆ ಮಾತನಾಡುತ್ತಾ, ವಿಕೇಟ್​ ಕೀಪರ್ ಸಾಮ್ಸನ್​ ಭವಿಷ್ಯದ ನಾಯಕನಾಗಬಹುದು ಎಂದು ಸುಳಿವು ನೀಡಿದರು. ನೋಡಿ, ಈಗ ಧೋನಿ ತಂಡವನ್ನು ನಡೆಸುತ್ತಾರೆ. ಈ ಬಾರಿ ಸಿಎಸ್‌ಕೆ ಸಂಜು ಅವರನ್ನು ತಮ್ಮ ತಂಡಕ್ಕೆ ಬೇಕೆಂದು ಬಯಸಿದರೆ, ಅವರೇ ಭವಿಷ್ಯದ ನಾಯಕ ಕೂಡ ಆಗುತ್ತಾರೆ.

ಸಂಜು ಅವರ ಬ್ಯಾಟಿಂಗ್ ಶೈಲಿ ನೋಡಿದರೆ, ಚೆನ್ನೈನಲ್ಲಿ ರಿಷಭ್ ಪಂತ್ ಅಥವಾ ಕೆಎಲ್​ ರಾಹುಲ್ ಗಿಂತ ಯಶಸ್ವಿ ಬ್ಯಾಟ್​ಮ್ಯಾನ್​​ ಆಗುವ ಸಾಧ್ಯತೆ ಹೆಚ್ಚಿದೆ. ಆದಾಗ್ಯೂ, ಸ್ಯಾಮ್ಸನ್ ಅವರನ್ನು ಈ ಕೂಡಲೇ ಜಾರಿಗೆ ಬರುವಂತೆ ತಂಡದ ನಾಯಕನನ್ನಾಗಿ ಮಾಡಲಾಗುವುದಿಲ್ಲ. ರುತುರಾಜ್ ಗಾಯಕ್ವಾಡ್ ಅವರನ್ನೇ ನಾಯಕನಾಗಿ ಮುಂದುವರಿಸಲಾಗುವುದು ಎಂದು ತಿಳಿಸಿದ್ದಾರೆ.

ಸಂಜು ಸ್ಯಾಮ್ಸನ್ ನಾಯಕತ್ವದ ಬಗ್ಗೆ ಕ್ರಿಕೆಟಿಗ ಅಶ್ವಿನ್​ ಏನು ಹೇಳಿದ್ದಾರೆ?

ಇದು ಸಂಜು ಸ್ಯಾಮ್ಸನ್ ಅವರ ಮೊದಲ ಸೀಸನ್ ಆಗಿರುವುದರಿಂದ ಅವರಿಗೆ ನಾಯಕನ ಪಟ್ಟ ಸಿಗುತ್ತದೆ ಎಂದು ನಾನು ಭಾವಿಸುವುದಿಲ್ಲ. ಹಾಗೆಯೇ ಫ್ರಾಂಚೈಸಿಯವರು ಮೊದಲ ವರ್ಷದಲ್ಲಿಯೇ ಯಾರಿಗಾದರೂ ನಾಯಕತ್ವವನ್ನು ನೀಡುತ್ತಾರೆ ಎಂದರೆ ಅದು ನಂಬಲು ಅಸಾಧ್ಯ. ಆದರೆ, ಒಪ್ಪಂದ ನಡೆದರೆ, ಸ್ಯಾಮ್ಸನ್ ಭವಿಷ್ಯದಲ್ಲಿ ಖಂಡಿತವಾಗಿಯೂ ನಾಯಕನಾಗುತ್ತಾನೆ ಎಂದು ಅಶ್ವಿನ್​ ತಿಳಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net