ಕಡೆಗೂ RCB ಫ್ಯಾನ್ಸ್​ಗಳ ಆಸೆ ಈಡೇರಿಸಿದ ಧೋನಿ ಪಡೆ! ಜಿಟಿ ಎದುರು 83 ರನ್​ಗಳ ಜಯ ಸಾಧಿಸಿದ ಸಿಎಸ್​ಕೆ | GT vs CSK

ವಿಜಯವಾಣಿ - 2025-05-25T191945.560
Published on

GT vs CSK: ಇಂದು (ಮೇ.25) ಅಹಮದಾಬಾದ್​ನ ಕ್ರೀಡಾಂಗಣದಲ್ಲಿ ನಡೆದ ಜಿಟಿ ಮತ್ತು ಸಿಎಸ್​ಕೆ ನಡುವಿನ ಐಪಿಎಲ್ ಪಂದ್ಯದಲ್ಲಿ ಟಾಸ್​ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಚೆನ್ನೈ, ಜಿಟಿಗೆ 231 ರನ್​ಗಳ ಗುರಿಯನ್ನು ಬೆನ್ನಟ್ಟುವಂತೆ ಸವಾಲು ಹಾಕಿತು.

ಈ ಗುರಿಯನ್ನು ಬೆನ್ನತ್ತಿದ ಜಿಟಿ ಪಡೆಗೆ ಆರಂಭಿಕ ಹಂತದಲ್ಲೇ ಆಘಾತ ಎದುರಾಯಿತು. ಶುಭಮನ್​ ಗಿಲ್​ ವಿಕೆಟ್​ ಪತನಗೊಂಡ ಬೆನ್ನಲ್ಲೇ ಗುಜರಾತ್​ ಟೈಟನ್ಸ್ ಪಡೆಯ ಸ್ಟಾರ್​ ಬ್ಯಾಟರ್​ಗಳು ಒಬ್ಬರಂತೆ ಒಬ್ಬರು ವಿಕೆಟ್​ ಕಳೆದುಕೊಂಡರು. ಅಂತಿಮವಾಗಿ 83 ರನ್​ಗಳಿಂದ ಗೆದ್ದು ಬೀಗಿದ ಸಿಎಸ್​ಕೆ, ಪರೋಕ್ಷವಾಗಿ ಆರ್​ಸಿಬಿ ಅಭಿಮಾನಿಗಳ ಆಸೆಗೆ ಸಾಥ್​ ನೀಡಿದೆ.

ಇದೊಂದು ಪಂದ್ಯ ಗುಜರಾತ್​ ಟೈಟನ್ಸ್​ ಅಭಿಮಾನಿಗಳಿಗಿಂತ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಫ್ಯಾನ್ಸ್​ ಬಳಗಕ್ಕೆ ಕುತೂಹಲಕಾರಿ ಪಂದ್ಯವಾಗಿತ್ತು. ಕಾರಣ, ಈ ನಿರ್ಣಾಯಕ ಪಂದ್ಯದಲ್ಲಿ ಗುಜರಾತ್​ ಟೈಟನ್ಸ್ ಸೋತರೆ ಆರ್​ಸಿಬಿಗೆ ಐಪಿಎಲ್​ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಗಿಟ್ಟಿಸಿಕೊಳ್ಳುವ ಅವಕಾಶ ಇನ್ನೂ ಜೀವಂತವಾಗಲಿದೆ. ಇದು ಆರ್​ಸಿಬಿ ಫ್ಯಾನ್ಸ್​ಗಳ ಹಪಾಹಪಿಯಾಗಿತ್ತು. ಸಿಎಸ್​ಕೆ ಹೇಗಾದರೂ ಮಾಡಿ ಜಿಟಿ ತಂಡವನ್ನು ಮಣಿಸಲಿ ಎಂದು ಕುಳಿತಲ್ಲೇ ಬೇಡಿಕೊಳ್ಳುತ್ತಿದ್ದಾರೆ. ಅಂತೆಯೇ ಸಿಎಸ್​ಕೆ 83 ರನ್​ಗಳ ಜಯ ಸಾಧಿಸಿ, ಆರ್​ಸಿಬಿ ಅಭಿಮಾನಿಗಳ ಆಸೆಯನ್ನು ಗೆಲುವಿನ ಜೊತೆಯಲ್ಲೇ ಈಡೇರಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net