

ದುಬೈ: ವಿಶ್ವಕಪ್ ವಿಜೇತ ನಾಯಕರಾದ ಎಂಎಸ್ ಧೋನಿ ಮತ್ತು ಇವೊಯಿನ್ ಮಾರ್ಗನ್ ಸಾರಥ್ಯದ ಚೆನ್ನೈ ಸೂಪರ್‌ಕಿಂಗ್ಸ್ ಮತ್ತು ಕೋಲ್ಕತ ನೈಟ್‌ರೈಡರ್ಸ್ ತಂಡಗಳು ಐಪಿಎಲ್ 14ನೇ ಆವೃತ್ತಿಯಲ್ಲಿ ಶುಕ್ರವಾರ ಪ್ರಶಸ್ತಿ ಗೆಲುವಿಗಾಗಿ ಹೋರಾಡಲಿವೆ.
9ನೇ ಬಾರಿ ಫೈನಲ್‌ಗೇರಿರುವ ಸಿಎಸ್‌ಕೆ 4ನೇ ಹಾಗೂ 2018ರ ಬಳಿಕ ಮೊದಲ ಪ್ರಶಸ್ತಿ ಗೆಲುವಿನ ನಿರೀಕ್ಷೆಯಲ್ಲಿದ್ದರೆ, ಕೆಕೆಆರ್ ತಂಡ 3ನೇ ಹಾಗೂ 2014ರ ಬಳಿಕ ಮೊದಲ ಟ್ರೋಫಿ ಜಯಿಸುವ ಹಂಬಲದಲ್ಲಿದೆ.
ಟೂರ್ನಿಯ ಲೀಗ್ ಹಂತದ ಎರಡೂ ಮುಖಾಮುಖಿಗಳಲ್ಲಿ ಗೆದ್ದ ವಿಶ್ವಾಸವನ್ನು ಸಿಎಸ್‌ಕೆ ಹೊಂದಿದ್ದರೆ, ಕೆಕೆಆರ್ ತಂಡ ಯುಎಇ ಚರಣದಲ್ಲಿ ಆಡಿದ 9 ಪಂದ್ಯಗಳಲ್ಲಿ 7ರಲ್ಲಿ ಗೆದ್ದು ಭರ್ಜರಿ ಲಯದಲ್ಲಿದೆ. ಈ ಮುನ್ನ 2012ರ ಫೈನಲ್‌ನಲ್ಲಿ ಉಭಯ ತಂಡಗಳು ಮುಖಾಮುಖಿ ಆದಾಗ ಕೆಕೆಆರ್ ಗೆದ್ದಿತ್ತು.
ಆರಂಭ: ರಾತ್ರಿ 7.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್.