ಚೆಪಾಕ್​ನಲ್ಲಿ CSKಗೆ ಮತ್ತೆ ಮುಖಭಂಗ; ನೈಟ್​ ರೈಡರ್ಸ್​ಗೆ 8 ವಿಕೆಟ್​ ಜಯ

dk - 2025-04-11T224340.791
Published on

ಚೈನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ಶುಕ್ರವಾರ ಚೈನ್ನೈ ಸೂಪರ್​ ಕಿಂಗ್ಸ್​(ಸಿಎಸ್​ಕೆ) ವಿರುದ್ಧ ನಡೆದ ಪಂದ್ಯದಲ್ಲಿ ಕಲ್ಕತ್ತ ನೈಟ್​ ರೈಡರ್ಸ್​(ಕೆಕೆಆರ್) ತಂಡ 8 ವಿಕೆಟ್​ಗಳ ಜಯ ಸಾಧಿಸಿತು.

103 ರನ್‌ಗಳ ಸಾಧಾರಣ ಗುರಿಯನ್ನು ಬೆನ್ನಟ್ಟಿದ ಕೆಕೆಆರ್ ತಂಡ 10.1 ಓವರ್​ನಲ್ಲಿ 2 ವಿಕೆಟ್​ ನಷ್ಟಕ್ಕೆ 107 ರನ್​ ಹೊಡಿಯುವ ಮೂಲಕ ಭರ್ಜರಿ ಗೆಲುವು ಸಾಧಿಸಿತು.

ಇದು ಐಪಿಎಲ್‌ನಲ್ಲಿ ಸಿಎಸ್‌ಕೆ ಗಳಿಸಿದ ಮೂರನೇ ಕನಿಷ್ಠ ಮೊತ್ತ ಮತ್ತು ಈ ಆವೃತ್ತಿಯಲ್ಲಿ ಇದುವರೆಗಿನ ಅತ್ಯಂತ ಕಡಿಮೆ ಮೊತ್ತವಾಗಿದೆ. ಅನುಭವಿ ಸ್ಪಿನ್ನರ್ ಸುನಿಲ್ ನರೈನ್ (3/13) ಮೂರು ವಿಕೆಟ್‌ಗಳನ್ನು ಕಬಳಿಸಿಸುವ ಮೂಲಕ ಉತ್ತಮ ಪ್ರದರ್ಶನ ತೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net