

ದುಬೈ: ನಾಲ್ಕನೇ ಬಾರಿ ಐಪಿಎಲ್ ಟ್ರೋಫಿ ಜಯಿಸಿದ ಬಳಿಕ ಚೆನ್ನೈ ಸೂಪರ್ಕಿಂಗ್ಸ್ ತಂಡದ ಆಟಗಾರರು ಕುಟುಂಬದ ಸದಸ್ಯರ ಜತೆಗೂಡಿ ಸಂಭ್ರಮಿಸಿದರು. ಕಳೆದ ವರ್ಷ ಕನಿಷ್ಠ ಪ್ಲೇಆ್ಗೇರಲು ವಿಲವಾಗಿದ್ದ ಎಂಎಸ್ ಧೋನಿ ಪಡೆ ಈ ಬಾರಿ ಫೈನಲ್ನಲ್ಲಿ ಕೋಲ್ಕತ ನೈಟ್ರೈಡರ್ಸ್ ತಂಡವನ್ನು 27 ರನ್ಗಳಿಂದ ಸೋಲಿಸಿ ಪ್ರಶಸ್ತಿ ಜಯಿಸಿತು.
ಸಿಎಸ್ಕೆ ತಂಡದ ಎಲ್ಲ ಆಟಗಾರರ ಪತ್ನಿ/ಗೆಳತಿ ಮತ್ತು ಮಕ್ಕಳು ವಿಜಯೋತ್ಸವದ ವೇಳೆ ಹಾಜರಿದ್ದರು. ಕೆಲವರು ಟ್ರೋಫಿ ಸಂಭ್ರಮಾಚರಣೆಯ ವೇಳೆ ಜತೆಯಾಗಿ ಪೋಸ್ ಕೂಡ ನೀಡಿದರು. ಧೋನಿ ಪತ್ನಿ ಸಾಕ್ಷಿ ಮತ್ತು ಪುತ್ರಿ ಝಿವಾ ಪ್ರಮುಖ ಆಕರ್ಷಣೆಯಾಗಿದ್ದರು.