ರಾಜಸ್ಥಾನ ರಾಯಲ್ಸ್‌ಗೆ ಗೆದ್ದರಷ್ಟೇ ಉಳಿಗಾಲ ; ಇಂದು ಸಿಎಸ್‌ಕೆ ಸವಾಲು

csk and royals for web
Published on

ಅಬುಧಾಬಿ: ಟೂರ್ನಿಯ ಇತಿಹಾಸದಲ್ಲಿ ದಾಖಲೆಯ 11ನೇ ಬಾರಿಗೆ ಪ್ಲೇಆ್ ಹಂತಕ್ಕೇರಿದ ವಿಶ್ವಾಸದಲ್ಲಿರುವ ಸಿಎಸ್‌ಕೆ ತಂಡ ದಿನದ ಮತ್ತೊಂದು ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಎದುರಿಸಲಿದೆ. ಪ್ಲೇಆಫ್ ಹಂತಕ್ಕೇರಲು ಕೂದಲೆಳೆ ಅವಕಾಶ ಉಳಿಸಿಕೊಂಡಿರುವ ರಾಜಸ್ಥಾನ ರಾಯಲ್ಸ್ ತಂಡದ ಪಾಲಿಗೆ ಈ ಪಂದ್ಯ ಮಾಡು ಇಲ್ಲವೇ ಮಡಿಯಾಗಿದೆ. ರಾಜಸ್ಥಾನ ರಾಯಲ್ಸ್ ತಂಡ ಗೆದ್ದರಷ್ಟೇ ಪ್ಲೇಆಫ್ ರೇಸ್‌ನಲ್ಲಿ ಉಳಿಯಲಿದೆ. ಸಿಎಸ್‌ಕೆ ಗುರುವಾರ ಸನ್‌ರೈಸರ್ಸ್‌ ತಂಡವನ್ನು ಸೋಲಿಸುವ ಮೂಲಕ 18 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಳ್ಳುವ ಮೂಲಕ ಪ್ಲೇಆಫ್ ಹಂತ ಖಾತ್ರಿಪಡಿಸಿಕೊಂಡಿತು.

ರಾಜಸ್ಥಾನ ಪರಿಸ್ಥಿತಿ ಸಿಎಸ್‌ಕೆ ಪರಸ್ಥಿತಿಗಿಂಥ ವಿಭಿನ್ನವಾಗಿದೆ. ಇದುವರೆಗೆ ಆಡಿರುವ 11 ಪಂದ್ಯಗಳಲ್ಲಿ 4 ಜಯ, 7 ಸೋಲುಗಳೊಂದಿಗೆ 8 ಅಂಕ ಹೊಂದಿರುವ ರಾಜಸ್ಥಾನ ತಂಡ, ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ. ರಾಜಸ್ಥಾನ ಉಳಿದ ಮೂರು ಪಂದ್ಯಗಳಲ್ಲೂ ಗೆದ್ದರೂ ಪ್ಲೇಆಫ್ ಹಂತದ ಕನಸು ಇತರ ಪಂದ್ಯಗಳ ಲಿತಾಂಶದ ಮೇಲೆ ಅವಲಂಭಿಸಿದೆ. ಸಿಎಸ್‌ಕೆ ಎದುರು ಸೋತರೆ ಎರಡನೇ ತಂಡವಾಗಿ ಟೂರ್ನಿಯಿಂದ ಹೊರಬೀಳಲಿದೆ.

ಮುಖಾಮುಖಿ: 24, ಸಿಎಸ್‌ಕೆ: 15, ರಾಜಸ್ಥಾನ: 9

ಹಿಂದಿನ ಮುಖಾಮುಖಿ: ಸಿಎಸ್‌ಕೆ ತಂಡಕ್ಕೆ 45ರನ್ ಜಯ

ಪಂದ್ಯ ಆರಂಭ: ರಾತ್ರಿ 7.30ಕ್ಕೆ

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net