ಶಿವಂ ದುಬೆ, ಜೈಸ್ವಾಲ್ ಸ್ಫೋಟಕ ಬ್ಯಾಟಿಂಗ್, ಸಿಎಸ್‌ಕೆ ಎದುರು ಭರ್ಜರಿ ಗೆಲುವು ಕಂಡ ರಾಯಲ್ಸ್

royals and csk for web
Published on

ಅಬುಧಾಬಿ: ರನ್ ಮಳೆಗೆ ಸಾಕ್ಷಿಯಾದ ಹಣಾಹಣಿಯಲ್ಲಿ ಬಲಿಷ್ಠ ಚೆನ್ನೈ ಸೂಪರ್‌ಕಿಂಗ್ಸ್‌ಗೆ ತಿರುಗೇಟು ನೀಡಿದ ರಾಜಸ್ಥಾನ ರಾಯಲ್ಸ್ ತಂಡ ಐಪಿಎಲ್-14ರ ಎರಡನೇ ಭಾಗದ ಪಂದ್ಯದಲ್ಲಿ 7 ವಿಕೆಟ್‌ಗಳಿಂದ ಜಯ ದಾಖಲಿಸಿ ಪ್ಲೇಆಫ್ ಆಸೆಯನ್ನು ಜೀವಂತವಾಗಿ ಇರಿಸಿಕೊಂಡಿತು. ಅರಬ್ ನಾಡಿನ ಚರಣದಲ್ಲಿ ಮೊದಲ ಬಾರಿಗೆ ಎರಡು ತಂಡಗಳಿಂದ 380ಕ್ಕೂ ಹೆಚ್ಚು ರನ್ ದಾಖಲಾಯಿತು. ಲೀಗ್‌ನಲ್ಲಿ 5ನೇ ಜಯ ದಾಖಲಿಸಿದ ರಾಯಲ್ಸ್ ತಂಡ ಅಂಕಪಟ್ಟಿಯಲ್ಲಿ 6ನೇ ಸ್ಥಾನಕ್ಕೇರಿತು. ಮತ್ತೊಂದೆಡೆ, ಯುಎಇಯಲ್ಲಿ ಸತತ 4 ಜಯ ದಾಖಲಿಸಿದ್ದ ಎಂಎಸ್ ಧೋನಿ ಬಳಗಕ್ಕೆ ಮೊದಲ ಸೋಲು ಇದಾಗಿದೆ.

ಮೊದಲು ಬ್ಯಾಟಿಂಗ್ ಮಾಡಿದ ಸಿಎಸ್‌ಕೆ, ಋತುರಾಜ್ ಗಾಯಕ್ವಾಡ್ (101*ರನ್, 60 ಎಸೆತ, 9 ಬೌಂಡರಿ, 5 ಸಿಕ್ಸರ್) ಶತಕದಾಟದ ನೆರವಿನಿಂದ 4 ವಿಕೆಟ್‌ಗೆ 189 ರನ್ ಪೇರಿಸಿತು. ಪ್ರತಿಯಾಗಿ ಯಶಸ್ವಿ ಜೈಸ್ವಾಲ್ (50 ರನ್, 21 ಎಸೆತ, 6 ಬೌಂಡರಿ, 3 ಸಿಕ್ಸರ್) ಹಾಗೂ ಶಿವಂ ದುಬೆ (64*ರನ್, 42 ಎಸೆತ, 4 ಬೌಂಡರಿ, 4 ಸಿಕ್ಸರ್) ಅಬ್ಬರದ ಫಲವಾಗಿ 17.3 ಓವರ್‌ಗಳಲ್ಲಿ 3 ವಿಕೆಟ್‌ಗೆ 190 ರನ್‌ಗಳಿಸಿ ಗೆಲುವಿನ ನಗೆ ಬೀರಿತು.

ಸಿಎಸ್‌ಕೆ: 4 ವಿಕೆಟ್‌ಗೆ 189 (ಋತುರಾಜ್ ಗಾಯಕ್ವಾಡ್ 101*, ಪ್ಲೆಸಿಸ್ 25, ರವೀಂದ್ರ ಜಡೇಜಾ 32, ರಾಹುಲ್ ತೆವಾಟಿಯಾ 39ಕ್ಕೆ 3), ರಾಜಸ್ಥಾನ ರಾಯಲ್ಸ್: 17.3 ಓವರ್‌ಗಳಲ್ಲಿ 3 ವಿಕೆಟ್‌ಗೆ 190 (ಲೆವಿಸ್ 27, ಯಶಸ್ವಿ ಜೈಸ್ವಾಲ್ 50, ಸಂಜು ಸ್ಯಾಮ್ಸನ್ 28, ಶಿವಂ ದುಬೆ 64*, ಗ್ಲೆನ್ ಫಿಲಿಪ್ಸ್ 14*, ಶಾರ್ದೂಲ್ ಠಾಕೂರ್ 30ಕ್ಕೆ2)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net