ಆರ್‌ಸಿಬಿ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿದ ರವೀಂದ್ರ ಜಡೇಜಾ; ಸಿಎಸ್‌ಕೆ ಎದುರು 69 ರನ್ ಸೋಲು

CSK AND RCB FOR WEB
Published on

ಮುಂಬೈ: ಲೀಗ್ ಆರಂಭಗೊಂಡ 17 ದಿನಗಳಿಂದಲೂ ಅಜೇಯ ಸಾಧನೆಯೊಂದಿಗೆ ಮುನ್ನುಗ್ಗುತ್ತಿದ್ದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದ ಓಟಕ್ಕೆ ಬ್ರೇಕ್ ಬಿದ್ದಿದೆ. ವಾಂಖೆಡೆ ಮೈದಾನದಲ್ಲಿ ಭಾನುವಾರ ನಡೆದ ಹಣಾಹಣಿಯಲ್ಲಿ ಮೂರು ಬಾರಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಎದುರು ಕನಿಷ್ಠ ಪೈಪೋಟಿ ನೀಡಲು ವಿಲವಾದ ವಿರಾಟ್ ಕೊಹ್ಲಿ ಪಡೆ 69 ರನ್‌ಗಳಿಂದ ಶರಣಾಯಿತು. ಸತತ 4 ಜಯ ದಾಖಲಿಸಿದ್ದ ಕೊಹ್ಲಿ ಪಡೆ ಐಪಿಎಲ್-14ರಲ್ಲಿ ಮೊದಲ ಸೋಲು ಕಂಡಿತು. ಮತ್ತೊಂದೆಡೆ, ಸತತ ನಾಲ್ಕು ಜಯ ದಾಖಲಿಸಿದ ಸಿಎಸ್‌ಕೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು. ಸಿಎಸ್‌ಕೆ ಆಲ್ರೌಂಡರ್ ರವೀಂದ್ರ ಜಡೇಜಾ (62*ರನ್, 28 ಎಸೆತ, 4 ಬೌಂಡರಿ, 5 ಸಿಕ್ಸರ್, 13ಕ್ಕೆ 3) ಆಲ್ರೌಂಡ್ ನಿರ್ವಹಣೆಯಿಂದ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ಟಾಸ್ ಜಯಿಸಿದ ಸಿಎಸ್‌ಕೆ ನಾಯಕ ಎಂಎಸ್ ಧೋನಿ ಬ್ಯಾಟಿಂಗ್ ಆಯ್ದುಕೊಂಡರು. ಹರ್ಷಲ್ ಪಟೇಲ್ ಎಸೆದ ಇನಿಂಗ್ಸ್‌ನ ಕಡೇ ಓವರ್‌ನಲ್ಲಿ 5 ಸಿಕ್ಸರ್ ಒಳಗೊಂಡಂತೆ ಜಡೇಜಾ ಕಸಿದ 37 ರನ್ ಬೆಂಬಲದೊಂದಿಗೆ ಸಿಎಸ್‌ಕೆ 4 ವಿಕೆಟ್‌ಗೆ 191 ರನ್ ಪೇರಿಸಿತು. ಪ್ರತಿಯಾಗಿ ಆರ್‌ಸಿಬಿ 9 ವಿಕೆಟ್‌ಗೆ 122 ಮೊತ್ತ ಕಲೆಹಾಕಲಷ್ಟೇ ಶಕ್ತವಾಯಿತು.

ಚೆನ್ನೈ ಸೂಪರ್ ಕಿಂಗ್ಸ್: 4 ವಿಕೆಟ್‌ಗೆ 191 (ಋತುರಾಜ್ ಗಾಯಕ್ವಾಡ್ 33, ಪ್ಲೆಸಿಸ್ 50, ಸುರೇಶ್ ರೈನಾ 24, ರವೀಂದ್ರ ಜಡೇಜಾ 62*, ಹರ್ಷಲ್ ಪಟೇಲ್ 51ಕ್ಕೆ 3, ಯಜುವೇಂದ್ರ ಚಾಹಲ್ 24ಕ್ಕೆ 1), ರಾಯಲ್ ಚಾಲೆಂಜರ್ಸ್‌ ಬೆಂಗಳೂರು: 9 ವಿಕೆಟ್‌ಗೆ 122 (ವಿರಾಟ್ ಕೊಹ್ಲಿ 8, ದೇವದತ್ ಪಡಿಕಲ್ 34, ಗ್ಲೆನ್ ಮ್ಯಾಕ್ಸ್‌ವೆಲ್ 22, ರವೀಂದ್ರ ಜಡೇಜಾ 13ಕ್ಕೆ 3, ಇಮ್ರಾನ್ ತಾಹಿರ್ 16ಕ್ಕೆ 2, ಸ್ಯಾಮ್ ಕರ‌್ರನ್ 35ಕ್ಕೆ 1,ಶಾರ್ದೂಲ್ ಠಾಕೂರ್ 11ಕ್ಕೆ 1).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net