ಕೆಎಲ್ ರಾಹುಲ್ ಸ್ಫೋಟಕ ಬ್ಯಾಟಿಂಗ್, ಗೆಲುವಿನೊಂದಿಗೆ ಲೀಗ್ ಅಭಿಯಾನ ಮುಗಿಸಿದ ಪಂಜಾಬ್

kl rahul and cric for web
Published on

ದುಬೈ: ನಾಯಕ ಕೆಎಲ್ ರಾಹುಲ್ (98*ರನ್, 42 ಎಸೆತ, 7 ಬೌಂಡರಿ, 8 ಸಿಕ್ಸರ್) ಸ್ಫೋಟಕ ಬ್ಯಾಟಿಂಗ್ ಹಾಗೂ ಬಿಗಿ ಬೌಲಿಂಗ್ ದಾಳಿ ನೆರವಿನಿಂದ ಪಂಜಾಬ್ ಕಿಂಗ್ಸ್ ತಂಡ 6 ವಿಕೆಟ್‌ಗಳಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮಣಿಸುವ ಮೂಲಕ ಐಪಿಎಲ್-14ರ ಅಭಿಯಾನಕ್ಕೆ ಗೆಲುವಿನ ವಿದಾಯ ಹೇಳಿತು. ಪ್ಲೇಆಫ್ ಹಂತಕ್ಕೇರಲು ವಿಫಲವಾಗಿದ್ದ ಕನ್ನಡಿಗ ರಾಹುಲ್ ಬಳಗಕ್ಕೆ ಈ ಪಂದ್ಯ ಔಪಚಾರಿಕವಾಗಿದ್ದರೂ ಸಮಾಧಾನಕರ ಗೆಲುವು ಕಂಡಿತು. ಮತ್ತೊಂದೆಡೆ, ಎಂಎಸ್ ಧೋನಿ ಬಳಗ ಸೋಲಿನಿಂದಾಗಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ಅವಕಾಶ ತಪ್ಪಿಸಿಕೊಂಡು, 2ನೇ ಸ್ಥಾನದಲ್ಲೆ ಉಳಿಯಿತು.

ದುಬೈ ಕ್ರಿಕೆಟ್ ಸ್ಟೇಡಿಯಂನಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸಿಎಸ್‌ಕೆ, ಫಾಫ್ ಡು ಪ್ಲೆಸಿಸ್ (76ರನ್, 55 ಎಸೆತ, 8 ಬೌಂಡರಿ, 2 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ನಡುವೆಯೂ ಅರ್ಷದೀಪ್ ಸಿಂಗ್ (35ಕ್ಕೆ 2) ಹಾಗೂ ಕ್ರಿಸ್ ಜೋರ್ಡಾನ್ (20ಕ್ಕೆ 2) ಜೋಡಿಯ ಮಾರಕ ದಾಳಿಗೆ ನಲುಗಿ 6 ವಿಕೆಟ್‌ಗೆ 134 ರನ್‌ಗಳಿಸಲಷ್ಟೇ ಶಕ್ತವಾಯಿತು. ಪ್ರತಿಯಾಗಿ ಈ ಸುಲಭ ಗುರಿ ಬೆನ್ನಟ್ಟಿದ ಪಂಜಾಬ್ ತಂಡ, ರಾಹುಲ್ ಬಿರುಸಿನ ಬ್ಯಾಟಿಂಗ್ ಲವಾಗಿ 13 ಓವರ್‌ಗಳಲ್ಲಿ 4 ವಿಕೆಟ್‌ಗೆ 139 ರನ್‌ಗಳಿಸಿ ಜಯದ ನಗೆ ಬೀರಿತು.

ಸಿಎಸ್‌ಕೆ: 6 ವಿಕೆಟ್‌ಗೆ 134 (ಪ್ಲೆಸಿಸ್ 76, ಋತುರಾಜ್ ಗಾಯಕ್ವಾಡ್ 12, ಎಂಎಸ್ ಧೋನಿ 12, ರವೀಂದ್ರ ಜಡೇಜಾ 15*, ಅರ್ಷದೀಪ್ ಸಿಂಗ್ 35ಕ್ಕೆ 2, ಕ್ರಿಸ್ ಜೋರ್ಡಾನ್ 20ಕ್ಕೆ 2), ಪಂಜಾಬ್ ಕಿಂಗ್ಸ್: 13 ಓವರ್‌ಗಳಲ್ಲಿ 4 ವಿಕೆಟ್‌ಗೆ 139 (ಕೆಎಲ್ ರಾಹುಲ್ 98, ಮಯಾಂಕ್ ಅಗರ್ವಾಲ್ 12, ಮಾರ್ಕ್ರಮ್ 13, ಶಾರ್ದೂಲ್ ಠಾಕೂರ್ 28ಕ್ಕೆ 3, ದೀಪಕ್ ಚಹರ್ 48ಕ್ಕೆ 1).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net