

ನವದೆಹಲಿ: ರನ್‌ಮಳೆಗೆ ಸಾಕ್ಷಿಯಾದ ಹಣಾಹಣಿಯಲ್ಲಿ ಕೈರಾನ್ ಪೊಲ್ಲಾರ್ಡ್ (87ರನ್, 34 ಎಸೆತ, 6 ಬೌಂಡರಿ, 8 ಸಿಕ್ಸರ್) ಸಿಡಿಲಬ್ಬರದ ಬ್ಯಾಟಿಂಗ್ ನೆರವಿನಿಂದ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ಐಪಿಎಲ್ ಇತಿಹಾಸದಲ್ಲೇ 2ನೇ ಅತಿದೊಡ್ಡ ಮೊತ್ತ ಬೆನ್ನಟ್ಟಿದ ಸಾಧನೆ ಮಾಡಿತು. ಅರುಣ್ ಜೇಟ್ಲಿ ಮೈದಾನದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ 4 ವಿಕೆಟ್‌ಗಳಿಂದ ಸಿಎಸ್‌ಕೆ ತಂಡವನ್ನು ಮಣಿಸಿತು. ಸತತ 5 ಗೆಲುವಿನಿಂದ ಬೀಗುತ್ತಿದ್ದ ಸಿಎಸ್‌ಕೆ ತಂಡದ ನಾಗಾಲೋಟಕ್ಕೆ ಬ್ರೇಕ್ ಬಿದ್ದಿತು.
ಟಾಸ್ ಜಯಿಸಿದ ಮೊದಲು ಬ್ಯಾಟಿಂಗ್ ಮಾಡಿದ ಸಿಎಸ್‌ಕೆ 4 ವಿಕೆಟ್‌ಗೆ 218 ರನ್ ಪೇರಿಸಿದರೆ, ಪ್ರತಿಯಾಗಿ ಮುಂಬೈ ಇಂಡಿಯನ್ಸ್ 6 ವಿಕೆಟ್‌ಗೆ 219 ರನ್ ಗಳಿಸಿ ಜಯ ದಾಖಲಿಸಿತು.
ಸಿಎಸ್‌ಕೆ: 4 ವಿಕೆಟ್‌ಗೆ 218 (ಪ್ಲೆಸಿಸ್ 50, ಮೊಯಿನ್ ಅಲಿ 58, ಅಂಬಟಿ ರಾಯುಡು 72*, ಜಡೇಜಾ 22*, ಕೈರಾನ್ ಪೊಲ್ಲಾರ್ಡ್ 12ಕ್ಕೆ 2), ಮುಂಬೈ : 4 ವಿಕೆಟ್ ಗೆ 219 (ಕ್ವಿಂಟನ್ ಡಿ ಕಾಕ್ 38, ರೋಹಿತ್ ಶರ್ಮ 35, ಪೊಲ್ಲಾರ್ಡ್ 87, ಕೃನಾಲ್ ಪಾಂಡ್ಯ 32, ಸ್ಯಾಮ್ ಕರ‌್ರನ್ 34ಕ್ಕೆ 3, ಶಾರ್ದೂಲ್ ಠಾಕೂರ್ 56ಕ್ಕೆ 1, ಜಡೇಜಾ 29ಕ್ಕೆ 1).