

ಮುಂಬೈ: 18ನೇ ಆವೃತ್ತಿಯ ಐಪಿಎಲ್ಗೆ (IPL) ಸಂಬಂಧಿಸಿದ ಕೆಲಸಗಳು ಈಗಾಗಲೇ ಚುರುಕುಗೊಂಡಿದ್ದು, ಈಗಾಗಲೇ ರಿಟೇನ್ಗೆ (Retain) ಸಂಬಂಧಿಸಿದ ನಿಯಮಗಳನ್ನು (Rules) ಬಿಡುಗಡೆ ಮಾಡಲಾಗಿದ್ದು, ವರ್ಷಾಂತ್ಯದಲ್ಲಿ ಸೌದಿ ಅರೇಬಿಯಾ (Saudi Arabia) ಅಥವಾ ಸಿಂಗಾಪುರದಲ್ಲಿ (Singapore) ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದೆ. ಫ್ರಾಂಚೈಸಿಗಳನ್ನು ಓಲೈಸುವ ನಿಟ್ಟಿನಲ್ಲಿ ಈಗಾಗಲೇ ಬಿಸಿಸಿಐ (BCCI) ಕೆಲವು ನಿಯಮಗಳ್ನು (Rules) ಸಡಿಲಗೊಳಿಸಿ ಮತ್ತಷ್ಟು ರೂಲ್ಸ್ಗೆ ಹೊಸ ರೂಪ ನೀಡಿದ್ದು, ಇದೀಗ ಮತ್ತೊಂದು ವಿಚಾರಕ್ಕೆ ಐಪಿಎಲ್ (IPL) ಕ್ರೀಡಾಭಿಮಾನಿಗಳ ಗಮನ ಸೆಳೆದಿದ್ದು, ಈ ನಡೆ ಪರ-ವಿರೋಧ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.
ಸದ್ಯ ಕೇಳಿ ಬಂದಿರುವ ಮಾಹಿತಿ ಪ್ರಕಾರ ಮುಂಬರುವ ಸೈಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿಗಾಗಿ ಇಂಪ್ಯಾಕ್ಟ್ ಪ್ಲೇಯರ್ (Impact Player) ನಿಯಮವನ್ನು ತೆಗೆದುಹಾಕಲು ಬಿಸಿಸಿಐ (BCCI) ಮುಂದಾಗಿದ್ದು, ಈ ಬಗ್ಗೆ ರಾಜ್ಯ ಕ್ರಿಕೆಟ್ ಮಂಡಳಿಗಳಿಗೆ ಸಂದೇಶವನ್ನು ರವಾನಿಸಿದೆ. ಈ ಹಿಂದೆ SMAT ಅಡಿಯಲ್ಲಿ ಈ ನಿಯಮವನ್ನು ದೇಶೀಯ ಕ್ರಿಕೆಟ್ನಲ್ಲಿ ಪರಿಚಯಿಸಲಾಗಿತ್ತಾದರೂ ಇದನ್ನು ರದ್ದುಪಡಿಸಿಲು ಬಿಸಿಸಿಐ (BCCI) ಮುಂದಾಗಿದ್ದು, ಐಪಿಎಲ್ಗೂ (IPL) ಇದು ಅನ್ವಯವಾಗುವ ಸಾಧ್ಯತೆಯಿದೆ.
16ನೇ ಆವೃತ್ತಿಯಲ್ಲಿ ಪರಿಚಿಯಿಸಲಾದ ಇಂಪ್ಯಾಕ್ಟ್ ಪ್ಲೇಯರ್ (Impact Player) ನಿಯಮವನ್ನು 2027ರವರೆಗೆ ಮುಂದುವರೆಸುವುದಾಗಿ ಬಿಸಿಸಿಐ (BCCI) ಈ ಹಿಂದೆ ಹೇಳಿತ್ತು. ಐಪಿಎಲ್ನ (IPL) ಬಹುಪಾಲು ಫ್ರಾಂಚೈಸಿಗಳು ಈ ನಿಯಮದ ಪರ ಇದ್ದವು. ಏಕೆಂದರೆ ಈ ಬಾರಿಯ ಐಪಿಎಲ್ನಲ್ಲಿ ಇಂಪ್ಯಾಕ್ಟ್ ಪ್ಲೇಯರ್ (IPL Impact Player) ನಿಯಮವು ಸಾಕಷ್ಟು ಪ್ರಭಾವ ಬೀರಿದ್ದು, ರೋಹಿತ್ ಶರ್ಮ (Rohit Sharma) ಸೇರಿದಂತೆ ಕೆಲವು ಆಟಗಾರರು ಈ ನಿಯಮವನ್ನು ಕಟುವಾಗಿ ವಿರೋಧಿಸಿದ್ದರು. ಇಂಪ್ಯಾಕ್ಟ್ ಪ್ಲೇಯರ್ (Impact Player) ನಿಯಮದ ಬಗ್ಗೆ ಇದೀಗ ಬಿಸಿಸಿಐ (BCCI) ಗಂಭೀರವಾಗಿ ಯೋಚಿಸುತ್ತಿದ್ದು, ಈ ಬಗ್ಗೆ ಟೀಮ್ ಇಂಡಿಯಾ (Team India) ನಾಯಕ ರೋಹಿತ್ ಶರ್ಮ (Rohit Sharma) ಪಾಡ್ಕಾಸ್ಟ್ (Podcast) ಒಂದರಲ್ಲಿ ಮಾತನಾಡಿದ್ದು, ಸಖತ್ ವೈರಲ್ ಆಗುತ್ತಿದೆ.
ನನ್ನ ಪ್ರಕಾರ ಈ ನಿಯಮವನ್ನು ಹೋಲ್ಡ್ ಮಾಡಲಾಗುತ್ತದೆ ಎಂದು ನಾನು ಭಾವಿಸುತ್ತೇನೆ. ಇದು ಅಲ್ರೌಂಡರ್ಗಳ (Allrounders) ಬೆಳವಣಿಗೆಗೆ ಸಹಕಾರಿಯಾಗಿದ್ದು, ಅಂತಿಮವಾಗಿ ಕ್ರಿಕೆಟ್ ಅನ್ನು 11 ಆಟಗಾರರು ಆಡುತ್ತಾರೆ, 12 ಆಟಗಾರರು ಅಲ್ಲ. ನಾನು ಇಂಪ್ಯಾಕ್ಟ್ ಪ್ಲೇಯರ್ನ (Impact Player) ನಿಯಮದ ಪರವಿಲ್ಲ. ಇಂಪ್ಯಾಕ್ಟ್ ಪ್ಲೇಯರ್ (Impact Player) ನಿಯಮವನ್ನು ತೆಗೆದುಹಾಕುವುದು ಉತ್ತಮ ಬೆಳವಣಿಗೆಯಾಗಿದ್ದು, ಪ್ರಮುಖ ಟೂರ್ನಿಗಳಿಗೆ ಐಸಿಸಿ (ICC) ಈ ನಿಯಮವನ್ನು ಜಾರಿ ಮಾಡಿಲ್ಲ. ಹೀಗಾಗಿ ಈ ನಿಯಮವನ್ನು ತೆಗೆದುಹಾಕುವುದರಿಂದ ಭಾರತಕ್ಕಾಗಿ ಆಡಲು ಬಯಸುವ ಕ್ರಿಕೆಟಿಗರಿಗೆ ಇದು ಒಳ್ಳೆಯ ಬೆಳವಣಿಗೆಯಾಗಿದೆ ಎಂದು ಟೀಮ್ ಇಂಡಿಯಾ (Team India) ನಾಯಕ ರೋಹಿತ್ ಶರ್ಮ (Rohit Sharma) ಅಭಿಪ್ರಾಯಪಟ್ಟಿದ್ದಾರೆ.
ಇದೀಗ ಇಂಪ್ಯಾಕ್ಟ್ ಪ್ಲೇಯರ್ (Impact Player) ನಿಯಮವನ್ನು ತೆಗೆದುಹಾಕಲು ಬಿಸಿಸಿಐ ಮುಂದಾಗಿರುವ ಬಗ್ಗೆ ಐಪಿಎಲ್ ಫ್ರಾಂಚೈಸಿಗಳು (IPL Franchise) ಅಪಸ್ವರ ತೆಗೆದಿವೆ ಎಂದು ಹೇಳಲಾಗಿದ್ದು, ಈ ಬಗ್ಗೆ ಮುಂದಿನ ದಿನಗಳಲ್ಲಿ ನಡೆಯಲಿರುವ ಕಾರ್ಯಕಾರಿ ಸಮಿತಿ (Core committe Meeting) ಸಭೆಯಲ್ಲಿ ಚರ್ಚಿಸಲಾಗುತ್ತದೆ ಎಂದು ವರದಿಯಾಗಿದೆ. ಅಂತಿಮವಾಗಿ ಬಿಸಿಸಿಐ (BCCI) ಯಾರ ನಿರ್ಧಾರಕ್ಕೆ ಮಣೆ ಹಾಕಲಿದೆ ಎಂದು ಕಾದು ನೋಡಬೇಕಿದೆ.