ಕ್ರಿಶ್ಚಿಯಾನೊ ರೊನಾಲ್ಡೊಗೆ ಪೋರ್ಚುಗಲ್​ ತಂಡದಿಂದ ವಿಶೇಷ ಗೌರವ!

ನಂಬರ್​ 7 ಜೆರ್ಸಿ ಧರಿಸಿದ ಎಲ್ಲ ಆಟಗಾರರು! ಇನ್ನು ಮುಂದೆ ತಂಡದ ಜೆರ್ಸಿಯ 7 ಸಂಖ್ಯೆಯ ವಿನ್ಯಾಸ ಬದಲು
football
ಏಳು ನಂಬರ್​ ಜೆರ್ಸಿ ಧರಿಸಿದ ಪೋರ್ಚುಗಲ್​ ತಂಡದ ಆಟಗಾರರುಏಜೆನ್ಸಿ
Published on: 

ಬ್ರಾಗಾ (ಪೋರ್ಚುಗಲ್​): ಇತ್ತೀಚೆಗೆ ನಿವೃತ್ತಿ ಹೊಂದಿದ ಫುಟ್​ಬಾಲ್​ ಸೂಪರ್​ಸ್ಟಾರ್​ ಕ್ರಿಶ್ಚಿಯಾನೊ ರೊನಾಲ್ಡೊಗೆ ಅವರ ತವರಿನ ಪೋರ್ಚುಗಲ್ ಫುಟ್​ಬಾಲ್​ ತಂಡ ಶನಿವಾರ ವಿಶೇಷ ರೀತಿಯಲ್ಲಿ ಗೌರವ ಸಲ್ಲಿಸಿದೆ. ಯುಇಎಫ್​ಎ ನೇಷನ್ಸ್​ ಲೀಗ್​ನಲ್ಲಿ ಡೆನ್ಮಾರ್ಕ್​ ವಿರುದ್ಧದ ಪಂದ್ಯಕ್ಕೆ ಮುನ್ನ ಪೋರ್ಚುಗಲ್​ ತಂಡದ ಎಲ್ಲ ಆಟಗಾರರು, ರೊನಾಲ್ಡೊ ಅವರ 7 ನಂಬರ್​ ಜೆರ್ಸಿಯನ್ನು ಧರಿಸಿ ಪೋಸ್​ ನೀಡಿದರು. ಪಂದ್ಯಕ್ಕೆ ಮುನ್ನ ಆಟಗಾರರನ್ನು ಮೈದಾನಕ್ಕೆ ಕರೆತಂದ ಮಕ್ಕಳು ಕೂಡ 7 ನಂಬರ್​ ಜೆರ್ಸಿಯನ್ನು ಧರಿಸಿದ್ದರು.

ಇದೇ ವೇಳೆ ಪೋರ್ಚುಗಲ್​ ತಂಡದ ಜೆರ್ಸಿಯ 7 ಸಂಖ್ಯೆಯ ವಿನ್ಯಾಸವನ್ನೂ ಬದಲಾಯಿಸಲಾಗಿದೆ. ಇದು ಹಿಂದೆ ರೊನಾಲ್ಡೊ ಧರಿಸುತ್ತಿದ್ದ 7 ಸಂಖ್ಯೆಯ ವಿನ್ಯಾಸಕ್ಕಿಂತ ಭಿನ್ನವಾಗಿರಲಿದೆ. "ಇದು ಹೊಸ 7 ಪರಿಚರಿಸುವ ಸಮಯ. ಯಾಕೆಂದರೆ ಹಿಂದಿನ 7 ಸಂಖ್ಯೆ ಶಾಶ್ವತವಾಗಿ ಉಳಿಯುವಂಥದ್ದು' ಎಂದು ಪೋರ್ಚುಗಲ್​ ತಂಡ ತನ್ನ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದೆ.

ರೊನಾಲ್ಡೊ ನಿವೃತ್ತಿಯ ನಂತರ ತಂಡದ 7 ನಂಬರ್​ ಜೆರ್ಸಿ ಧರಿಸುತ್ತಿರುವ ಕಾಲೋರ್ಸ್​ ಫೋರ್ಬ್ಸ್​ ಡೆನ್ಮಾರ್ಕ್​ ವಿರುದ್ಧ ಆಡಲಿಲ್ಲ. ಪೋರ್ಚುಗಲ್​ ತಂಡ ಈಗಾಗಲೆ ಕ್ವಾರ್ಟರ್​ಫೈನಲ್​ ಅರ್ಹತೆ ಒಲಿಸಿಕೊಂಡಿರುವುದು ಇದಕ್ಕೆ ಕಾರಣ. ಪಂದ್ಯದ 7ನೇ ನಿಮಿಷದ ವೇಳೆ ಕ್ರೀಡಾಂಗಣದ ದೈತ್ಯ ಪರದೆಯಲ್ಲಿ ರೊನಾಲ್ಡೊ ಚಿತ್ರವನ್ನು ಪ್ರದರ್ಶಿಸಿ ಗೌರವ ಸಲ್ಲಿಸಲಾಯಿತು. ಅತ್ಯಧಿಕ ಅಂತಾರಾಷ್ಟ್ರೀಯ ಫುಟ್​ಬಾಲ್​ ಪಂದ್ಯ ಆಡಿದ ಮತ್ತು ಗೋಲು ಸಿಡಿಸಿದ ವಿಶ್ವದಾಖಲೆ ಹೊಂದಿರುವ 41 ವರ್ಷದ ರೊನಾಲ್ಡೊ ನ.5ರಂದು ವಿದಾಯ ಘೋಷಿಸಿದ್ದರು.