ಲಂಕಾ ಪ್ರವಾಸ: ಚಹಾಲ್ ಜೊತೆ ಕನ್ನಡಿಗನಿಗೂ ಒಕ್ಕರಿಸಿದ ಕರೊನಾ...

ckn pic
Published on

ಕೊಲೊಂಬೊ: ಭಾರತ ಕ್ರಿಕೆಟ್ ತಂಡದ ಆಟಗಾರರಾದ ಯುಜುವೇಂದ್ರ ಚಹಾಲ್ ಮತ್ತು ಕನ್ನಡಿಗ ಕೆ. ಗೌತಮ್​​ಗೆ ಕರೊನಾ ದೃಢಪಟ್ಟಿದೆ.

ಈ ಹಿಂದೆ ಅಲ್ರೌಂಡರ್ ಕೃನಾಲ್ ಪಾಂಡ್ಯ ಜುಲೈ 27 ಮಂಗಳವಾರ ದಂದು ಸೋಂಕಿಗೆ ತುತ್ತಾಗಿದ್ದರು. ಕೆಲವು ಆಟಗಾರರು ಕೃನಾಲ್ ನೇರ ಸಂಪರ್ಕಕ್ಕೆ ಬಂದ ಕಾರಣ ಭಾರತ ಕೊನೇ ಎರಡು ಟಿ-ಟ್ವೆಂಟಿ ಪಂದ್ಯಗಳಿಂದ ಒಟ್ಟು ಎಂಟು ಆಟಗಾರರನ್ನು ಬದಲಿಸಿ ಕಣಕ್ಕಿಳಿದಿತ್ತು.

ಹಾರ್ದಿಕ್ ಪಾಂಡ್ಯ, ಸೂರ್ಯಕುಮಾರ್ ಯಾದವ್, ಪೃಥ್ವಿ ಶಾ, ಮನೀಷ್ ಪಾಂಡೆ, ದೀಪಕ್ ಚಾಹರ್, ಯಜುವೇಂದ್ರ ಚಹಾಲ್, ಇಶಾನ್ ಕಿಶನ್ ಹಾಗೂ ಕೃಷ್ಣಪ್ಪ ಗೌತಮ್ ಅವರನ್ನು ಕ್ವಾರಂಟೈನ್​ನಲ್ಲಿರುವಂತೆ ಸೂಚಿಸಲಾಗಿತ್ತು. ಈಗ ಮತ್ತೆ ಅವರೆಲ್ಲರಿಗೂ ಸೋಂಕು ಪತ್ತೆ ಪರೀಕ್ಷೆ ನಡೆಸಿದ್ದು, ಚಹಾಲ್ ಹಾಗೂ ಗೌತಮ್​ಗೆ ಕೊರೊನಾ ಪಾಸಿಟಿವ್ ಬಂದಿದೆ.​

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net