ಸ್ಯಾಂಡಲ್​ವುಡ್​ ನಟಿ ಅರ್ಚನಾ ಜತೆ ಕ್ರಿಕೆಟಿಗ ಶರತ್​ ವಿವಾಹ

web wed
Published on

ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್​ ತಂಡದ ವಿಕೆಟ್​ ಕೀಪರ್​-ಬ್ಯಾಟರ್​ ಶರತ್​ ಬಿಆರ್​ ಮತ್ತು ಸ್ಯಾಂಡಲ್​ವುಡ್​ ನಟಿ ಅರ್ಚನಾ ಕೊಟ್ಟಿಗೆ ಬುಧವಾರ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. 28 ವರ್ಷದ ಶರತ್​, ಕಳೆದ ವರ್ಷ ಐಪಿಎಲ್​ನಲ್ಲಿ ಗುಜರಾತ್​ ಟೈಟಾನ್ಸ್​ ಪರ ಆಡಿದ್ದರು.

ಕಳೆದ 8 ವರ್ಷಗಳಿಂದಲೂ ಸ್ನೇಹಿತರಾಗಿದ್ದ ಇಬ್ಬರು, ಪರಸ್ಪರ ಪ್ರೀತಿಸಿ ಮದುವೆಯಾಗಿದ್ದಾರೆ. ಕ್ರಿಕೆಟಿಗರಾದ ದೇವದತ್​ ಪಡಿಕ್ಕಲ್​, ಪ್ರಸಿದ್ಧ ಕೃಷ್ಣ, ವೈಶಾಕ್​ ವಿಜಯ್​ಕುಮಾರ್​, ಮನೋಜ್​ ಭಾಂಡಗೆ ಮತ್ತಿತರರು ಸಮಾರಂಭಕ್ಕೆ ಹಾಜರಾಗಿ ನವದಂಪತಿಗೆ ಶುಭ ಹಾರೈಸಿದರು. ಸಿನಿಮಾ ತಾರೆಯರಾದ ಸಪ್ತಮಿ ಗೌಡ, ಅಮೃತಾ ಅಯ್ಯಂಗಾರ್​, ಆಶಿಕಾ ರಂಗನಾಥ್​ ಕೂಡ ಭಾಗಿಯಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net