CWC 2023: ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇನಲ್ಲಿ 200 ಕಿಮೀ ವೇಗದಲ್ಲಿ ಕಾರು ಚಾಲನೆ; ರೋಹಿತ್ ಶರ್ಮಾಗೆ ಬಿತ್ತು ಮೂರು ಚಲನ್!

Untitled design - 2023-10-18T211021.663
Published on

ಮುಂಬೈ: ತಮ್ಮ ದುಬಾರಿ ಲಂಬೋರ್ಗಿನಿ ಕಾರನ್ನು ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇನಲ್ಲಿ ಅತಿ ವೇಗವಾಗಿ ಚಾಲನೆ ಮಾಡಿದ್ದಕ್ಕಾಗಿ ಭಾರತೀಯ ಕ್ರಿಕೆಟ್​ ತಂಡದ ನಾಯಕ ರೋಹಿತ್ ಶರ್ಮಾ ಮೂರು ಟ್ರಾಫಿಕ್ ಚಲನ್‌ಗಳನ್ನು ಪಡೆದುಕೊಂಡಿದ್ದಾರೆ ಎಂದು ಇತ್ತೀಚಿನ ವರದಿ ಉಲ್ಲೇಖಿಸಿದೆ.

ಪುಣೆಯಲ್ಲಿ ಬಾಂಗ್ಲಾದೇಶದ ವಿರುದ್ಧ ಐಸಿಸಿ ವಿಶ್ವಕಪ್ 2023ರ ಪಂದ್ಯದ ಬೆನ್ನಲ್ಲೇ ಈ ಸುದ್ದಿಯೊಂದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ತಮ್ಮ ಲಂಬೋರ್ಗಿನಿ ಕಾರನ್ನು ಗಂಟೆಗೆ 200 ಕಿಮೀ ವೇಗದಲ್ಲಿ ರೋಹಿತ್​ ಚಲಾಯಿಸಿದ್ದು, ಕೆಲವೆಡೆ 215 ಕಿಮೀ ವೇಗವನ್ನು ತಲುಪಿರುವುದಾಗಿ ವರದಿಯು ತಿಳಿಸಿದೆ. ವೇಗದ ಮಿತಿಯನ್ನು ಮೀರಿ, ವಾಹನ ಚಲಾಯಿಸದ ಕಾರಣ ರೋಹಿತ್​ಗೆ ಮೂರು ಆನ್‌ಲೈನ್ ಚಲನ್‌ಗಳನ್ನು ನೀಡಲಾಗಿದೆ.

ಕಳೆದ ವರ್ಷ ರೋಹಿತ್ ಶರ್ಮಾ ಈ ಐಷಾರಾಮಿ ಕಾರನ್ನು ಖರೀದಿಸಿದ್ದು, ಅದರ ಬೆಲೆ 3 ಕೋಟಿ ರೂ.ಗೂ ಹೆಚ್ಚು ಎಂದು ಹೇಳಲಾಗಿದೆ. ಸದ್ಯ ಕ್ಯಾಪ್ಟನ್​ ರೋಹಿತ್ ಶರ್ಮಾ ಅಕ್ಟೋಬರ್ 15 ರಂದೇ ಭಾರತ ತಂಡದೊಂದಿಗೆ ಪುಣೆಯನ್ನು ತಲುಪಿದ್ದು, ಗುರುವಾರ ನಡೆಯಲಿರುವ ಇಂಡಿಯಾ ಮತ್ತು ಬಾಂಗ್ಲಾದೇಶ ನಡುವಿನ ಏಕದಿನ ಪಂದ್ಯಕ್ಕೆ ಸಜ್ಜಾಗಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net