ದೇಶೀಯ ಕ್ರಿಕೆಟ್‌ನ ಹಿರಿಯ ಆಟಗಾರ ರಜತ್ ಭಾಟಿಯಾ ನಿವೃತ್ತಿ

rajat bhatia for web
Published on

ನವದೆಹಲಿ: ದೇಶೀಯ ಕ್ರಿಕೆಟ್‌ನ ಹಿರಿಯ ಆಟಗಾರ ರಜತ್ ಭಾಟಿಯಾ ಬುಧವಾರ ಎಲ್ಲ ಮಾದರಿಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. 40 ವರ್ಷದ ಆಲ್ರೌಂಡರ್ 2003-04ರಲ್ಲಿ ತಮಿಳುನಾಡು ತಂಡ ಸ್ಪರ್ಧಿಸಿದ್ದರು. ವೃತ್ತಿ ಜೀವನದಲ್ಲಿ ಬಹುತೇಕ ದೆಹಲಿ ತಂಡದ ಭಾಗವಾಗಿದ್ದರು. 2018-19ನೇ ಸಾಲಿನಲ್ಲಿ ಹೊಸ ತಂಡ ಉತ್ತರಾಖಂಡ ಕ್ವಾರ್ಟರ್‌ೈನಲ್‌ಗೇರಲು ಪ್ರಮುಖ ಪಾತ್ರವಹಿಸಿದ್ದರು. 112 ಪ್ರಥಮ ದರ್ಜೆ ಪಂದ್ಯಗಳಿಂದ 6482 ರನ್ ಕಲೆಹಾಕಿ, 137 ವಿಕೆಟ್ ಪಡೆದಿದ್ದಾರೆ. 119 ಲಿಸ್ಟ್ ಎ ಹಾಗೂ 146 ಟಿ20 ಪಂದ್ಯಗಳನ್ನಾಡಿದ್ದಾರೆ. ದೆಹಲಿ ಮೂಲದ ಭಾಟಿಯಾ. ಕಡೇ ಬಾರಿಗೆ ಬಾಂಗ್ಲಾದೇಶದಲ್ಲಿ ಲಿಸ್ಟ್ ಎ ಪಂದ್ಯವಾಡಿದ್ದರು. ‘ನಾನು ಕಳೆದ ವರ್ಷವೇ ನಿವೃತ್ತಿ ಹೇಳಲು ಬಯಸಿದ್ದೆ, ದೇಶೀಯ ಟೂರ್ನಿಗಳನ್ನು ಆಡಿರಲಿಲ್ಲ. ಬಾಂಗ್ಲಾದೇಶದಲ್ಲಿ ಕೆಲ ವೃತ್ತಿಪರ ಪಂದ್ಯಗಳನ್ನಾಡಿದ್ದೆ. ಇದೀಗ ನಿವೃತ್ತಿ ೋಷಿಸಲು ಸೂಕ್ತ ಸಮಯ’ ಎಂದು ಭಾಟಿಯಾ ಹೇಳಿದ್ದಾರೆ. 2014ರ ಟಿ20 ವಿಶ್ವಕಪ್ ಸಂಭಾವ್ಯ ತಂಡದಲ್ಲಿದ್ದರೂ ಅಂತಿಮ 15ರ ಬಳಗದಲ್ಲಿ ಸ್ಥಾನ ಪಡೆದಿರಲಿಲ್ಲ. 2007-08ನೇ ಆವೃತ್ತಿಯಲ್ಲಿ ದೆಹಲಿ ತಂಡ ರಣಜಿ ಟ್ರೋಫಿ ಜಯಿಸಿದ್ದು, 2012ರಲ್ಲಿ ಐಪಿಎಲ್ ಗೆದ್ದ ಕೆಕೆಆರ್ ತಂಡದ ಭಾಗವಾಗಿದ್ದು ವೈಯಕ್ತಿಕವಾಗಿ ಅವಿಸ್ಮರಣೀಯ ಕ್ಷಣಗಳು, ಜತೆಗೆ ಐಪಿಎಲ್‌ನಲ್ಲಿ ಸಚಿನ್ ತೆಂಡುಲ್ಕರ್ ಅವರನ್ನು 3 ಬಾರಿ ಔಟ್ ಮಾಡಿದ್ದನ್ನು ಎಂದೂ ಮರೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net