ಗರ್ಲ್​ಫ್ರೆಂಡ್​​ ಜತೆ ಡೇಟಿಂಗ್​ಗೆ ಹಣದ ನೆರವು ನೀಡಿದ ಕ್ರಿಕೆಟಿಗ ಅಮಿತ್​ ಮಿಶ್ರಾ!

Amit Mishra
Published on

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯವಾಗಿರುವ ಭಾರತದ ಲೆಗ್​ ಸ್ಪಿನ್ನರ್​ ಅಮಿತ್​ ಮಿಶ್ರಾ, ಯುವಕನೊಬ್ಬನಿಗೆ ಡೇಟಿಂಗ್​ ಮಾಡಲು "ಆರ್ಥಿಕ ಸಹಾಯ' ನೀಡುವ ಮೂಲಕ ಸುದ್ದಿಯಾಗಿದ್ದಾರೆ.

ಆದಿತ್ಯ ಕುಮಾರ್​ ಸಿಂಗ್​ ಎಂಬಾತ ಗರ್ಲ್​ಫ್ರೆಂಡ್​​ ಜತೆ ಡೇಟಿಂಗ್​ಗೆ ಹೋಗಲು 300 ರೂ. ನೀಡುವಂತೆ ಟ್ವಿಟರ್​ನಲ್ಲಿ ಮಿಶ್ರಾಗೆ ಬೇಡಿಕೆ ಇಟ್ಟಿದ್ದ ಮತ್ತು ಯುಪಿಐ ಐಡಿ ಹಂಚಿಕೊಂಡಿದ್ದ. ಮಿಶ್ರಾ ಇದನ್ನು ಕಡೆಗಣಿಸಬಹುದು ಎಂದೇ ಎಲ್ಲರೂ ಯೋಚಿಸಿದ್ದರು. ಆದರೆ, 300ಕ್ಕೆ ಬದಲಾಗಿ 500 ರೂ.ಗಳನ್ನೇ ಯುಪಿಐ ಮಾಡಿರುವ ಸ್ಕ್ರೀನ್​ಶಾಟ್​ ಜತೆಗೆ ಮಿಶ್ರಾ, "ಪಾವತಿಯಾಗಿದೆ. ನಿಮ್ಮ ಡೇಟ್​ಗೆ ಶುಭಾಶಯಗಳು' ಎಂದು ಪ್ರತಿಕ್ರಿಯಿಸಿದ್ದಾರೆ.

ಇದಕ್ಕೆ ಪ್ರತಿಯಾಗಿ ಆದಿತ್ಯ, "ನಿಮ್ಮ ಉಡುಗೊರೆಗೆ ಧನ್ಯವಾದಗಳು ಸರ್​, ಲವ್​ ಯೂ' ಎಂದು ಅಮಿತ್​ ಮಿಶ್ರಾಗೆ ಆದಿತ್ಯ ಕುಮಾರ್​ ಸಿಂಗ್​ ಕೃತಜ್ಞತೆ ತಿಳಿಸಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net