

ಕೊಲಂಬೊ: ಟೀಮ್ ಇಂಡಿಯಾ ಹಾಗೂ ಐಪಿಎಲ್ ಮಾಜಿ ಆಟಗಾರ ಜಹೀರ್ ಖಾನ್ (
Lanka Premier League
) ಲಂಕಾ ಪ್ರೀಮಿಯರ್ ಲೀಗ್ (ಎಲ್ಪಿಎಲ್) ಟಿ20 ಟೂರ್ನಿಯಲ್ಲಿ 4 ಬಾರಿಯ ಚಾಂಪಿಯನ್ ಜಾಫ್ನಾ ಕಿಂಗ್ಸ್ ತಂಡದ ಸಹ-ಮಾಲೀಕರಾಗಿದ್ದಾರೆ.
ಸ್ಟಾಕ್ಹೋಲ್ಮ್ ಮೂಲದ ಆಂಕರ್ ಸ್ಪೋರ್ಟ್ಸ್ ಎಬಿ ಕಂಪನಿಯು ತಂಡದ ಒಡೆತನವನ್ನು ಖರೀದಿಸಿದ್ದು, ಜಹೀರ್ ಖಾನ್ ಅದರೊಂದಿಗೆ ಹೂಡಿಕೆ ಮಾಡಿದ್ದಾರೆ. ಇದರಿಂದ ತಂಡದ ಹೆಸರು "ಆಂಕರ್ ಜಾಫ್ನಾ ಕಿಂಗ್ಸ್' ಎಂದು ಬದಲಾಗಿದೆ.
ಮ್ಯಾಚ್ಫಿಕ್ಸಿಂಗ್ ವಿವಾದದಿಂದಾಗಿ ಲಂಕಾ ಕ್ರಿಕೆಟ್ ಮಂಡಳಿ, ಹಿಂದಿನ ಮಾಲೀಕರೊಂದಿಗಿನ ಒಪ್ಪಂದವನ್ನು ಮುರಿದುಕೊಂಡಿತ್ತು. "ತಂಡವೊಂದರ ಮಾಲೀಕನಾಗಿ ಶ್ರೀಲಂಕಾ ಕ್ರಿಕೆಟ್ ಜತೆಗೆ ಕೈಜೋಡಿಸಿರುವುದು ಹೊಸ ಅನುಭವವಾಗಿದೆ. ಲಂಕಾದಲ್ಲಿ ಆಡಿದ ಹಲವು ಸವಿ ನೆನಪುಗಳನ್ನು ಹೊಂದಿದ್ದೇನೆ' ಎಂದು ಜಹೀರ್ ಖಾನ್ ಹೇಳಿದ್ದಾರೆ.