

ನವದೆಹಲಿ: ಅನುಭವಿ ಬ್ಯಾಟರ್ ರೋಹಿತ್ ಶರ್ಮ ಅವರನ್ನು ಇತ್ತೀಚೆಗೆ ಭಾರತ ಏಕದಿನ ತಂಡದಿಂದ ಕೈಬಿಡಲು ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ಚಿಂತನೆ ನಡೆಸಿದ್ದರು. ಇದೀಗ ಅವರ ಹುದ್ದೆಯೇ ಆಪತ್ತಿಗೆ ಸಿಲುಕಿದೆ. ಅಗರ್ಕರ್ ಅವರನ್ನು ಆಯ್ಕೆ ಸಮಿತಿಯ ಮುಖ್ಯಸ್ಥರಾಗಿ ಮುಂದುವರಿಸಲು ಬಿಸಿಸಿಐಗೆ ಮನಸ್ಸಿಲ್ಲ. ಹೀಗಾಗಿ ಶ್ರೀಲಂಕಾ ಪ್ರವಾಸದ ಟೆಸ್ಟ್ ಸರಣಿಯ ಬಳಿಕ ಅಗರ್ಕರ್ ಭವಿಷ್ಯದ ಬಗ್ಗೆ ಚರ್ಚಿಸಲು ಬಿಸಿಸಿಐ ಸಭೆ ಸೇರಲಿದೆ. ಇದೇ ವೇಳೆ ಅಗರ್ಕರ್ ಬದಲಿಗೆ ಮತ್ತೋರ್ವ ಮಾಜಿ ವೇಗಿ ಜಹೀರ್ ಖಾನ್ (
Zaheer Khan
) ಅವರನ್ನು ಆಯ್ಕೆ ಸಮಿತಿಯ ಮುಖ್ಯಸ್ಥರನ್ನಾಗಿ ನೇಮಿಸಲು ಬಿಸಿಸಿಐ ವಲಯದಲ್ಲಿ ಚಿಂತನೆ ನಡೆದಿದೆ ಎನ್ನಲಾಗಿದೆ.