ಹೈದರಾಬಾದ್: ಐಪಿಎಲ್ 2026ರ ಆವೃತ್ತಿಯು ಕೇವಲ ಸಿಕ್ಸರ್-ಬೌಂಡರಿಗಳಿಗಷ್ಟೇ ಅಲ್ಲದೆ, ಸಾಲು ಸಾಲು ವಿವಾದಗಳಿಂದಲೂ ಸುದ್ದಿಯಾಗುತ್ತಿದೆ. ಇತ್ತೀಚಿನ ಬೆಳವಣಿಗೆಯಲ್ಲಿ ಪಂಜಾಬ್ ಕಿಂಗ್ಸ್ ತಂಡದ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ದೊಡ್ಡ ವಿವಾದವೊಂದರಲ್ಲಿ ಸಿಲುಕಿದ್ದು, ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.