ಟೀಮ್ ಇಂಡಿಯಾ ಪರ ಅಷ್ಟಾಗಿ ಯಾವುದೇ ಪಂದ್ಯಗಳಲ್ಲಿ ಕಾಣಿಸಿಕೊಳ್ಳದ ಸ್ಪಿನ್ ಮಾಂತ್ರಿಕ ಚಹಲ್, ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾಗಿ ಸಕ್ರಿಯರಾಗಿದ್ದಾರೆ. ತಮ್ಮ ಬಗ್ಗೆ ಹರಿದಾಡುತ್ತಿರುವ ಮದುವೆ ವದಂತಿಗಳು, ಮೀಮ್ಗಳನ್ನು ನೋಡಿ ಖುಷಿ ಪಡುವ ಅವರು, ಈಗ ತಮ್ಮ ಕಮೆಂಟ್ನಿಂದ ಹಲವರ ಹುಬ್ಬೇರಿಸಿದ್ದಾರೆ. ಕ್ರಿಕೆಟಿಗನ ಈ ಕಮೆಂಟ್ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದ್ದು, ಕ್ಷಣಮಾತ್ರದಲ್ಲಿ ವೈರಲ್ ಆಗಿದೆ.