ಅಂದಹಾಗೆ, ಮುಂಬರುವ ವಿಶ್ವಕಪ್ ಪಂದ್ಯಗಳು ಭಾರತ ಮತ್ತು ಶ್ರೀಲಂಕಾದಲ್ಲಿ ನಡೆಯಲಿವೆ. ಉಭಯ ದೇಶಗಳು ಜಂಟಿಯಾಗಿ ಈ ಮೆಗಾ ಟೂರ್ನಮೆಂಟ್ ಅನ್ನು ಆಯೋಜಿಸುತ್ತಿವೆ. ಬಾಂಗ್ಲಾದ ಪಂದ್ಯಗಳು ಕೂಡ ಭಾರತದಲ್ಲೇ ನಡೆಯಲಿವೆ, ಯಾವುದೇ ಕಾರಣಕ್ಕೂ ಸ್ಥಳಾಂತರ ಮಾಡುವುದಿಲ್ಲ ಎಂದು ಐಸಿಸಿ ಮಂಡಳಿ ಸಭೆ ದೃಢಪಡಿಸಿದೆ. ಇದರ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ಬಿಸಿಬಿ, ತನ್ನ ನಿಲುವನ್ನು ಬಿಗಿಗೊಳಿಸಿದೆ.