32 ಎಸೆತ, ಭರ್ಜರಿ ಶತಕ, 574 ರನ್​... ವೈಭವ್ ಸೂರ್ಯವಂಶಿಗಿಂತ ಡೇಂಜರೆಸ್​ ಯುವ ಬ್ಯಾಟರ್ ಈತ​!

ವಿಜಯ್​ ಹಜಾರೆ ಟ್ರೋಫಿ
ವಿಜಯ್​ ಹಜಾರೆ ಟ್ರೋಫಿ
Published on

ಪ್ರಮುಖ ಮುಖ್ಯಾಂಶಗಳು

  • ಟೀಮ್​ ಇಂಡಿಯಾದ ಯುವ ಸೆನ್ಸೇಷನ್​ ವೈಭವ್ ಸೂರ್ಯವಂಶಿಯಿಂದ ಮತ್ತೊಂದು ಸೆಂಚುರಿ
  • ವಿಜಯ್ ಹಜಾರೆ ಟ್ರೋಫಿಯಲ್ಲಿ ಬಿಹಾರ ತಂಡದಿಂದ ಹೊಸ ದಾಖಲೆ
  • ಒಂದೇ ತಂಡದ ಇಬ್ಬರೂ ಬ್ಯಾಟರ್​ಗಳಿಂದ ದಾಖಲೆ ಮೇಲೆ ದಾಖಲೆ
ನವದೆಹಲಿ: ಪ್ರಸಕ್ತ ನಡೆಯುತ್ತಿರುವ ವಿಜಯ್ ಹಜಾರೆ ಟ್ರೋಫಿಯಲ್ಲಿ ಹಿಂದಿನ ದಾಖಲೆಗಳು ಮುರಿದು ಬೀಳುತ್ತಿರುವುದು ನಿಜಕ್ಕೂ ಗಮನಾರ್ಹ. ಆಯಾ ತಂಡಗಳಲ್ಲಿ ಆಡುತ್ತಿರುವ ಯುವ ಬ್ಯಾಟ್ಸ್‌ಮನ್‌ಗಳು ಮೈದಾನದಲ್ಲಿ ಅಬ್ಬರದ ಬ್ಯಾಟಿಂಗ್ ಮೂಲಕ ಸ್ಫೋಟಕ ಇನ್ನಿಂಗ್ಸ್ ನೀಡುತ್ತಿದ್ದಾರೆ. ಬೌಂಡರಿ ಮತ್ತು ಸಿಕ್ಸರ್‌ಗಳ ಸುರಿಮಳೆ ಹರಿಸುತ್ತಿರುವುದು ಕ್ರಿಕೆಟ್​ ಪ್ರೇಮಿಗಳ ಉತ್ಸಾಹವನ್ನು ಹೆಚ್ಚಿಸಿದೆ.
ಇಂದು (ಡಿ.24) ಅರುಣಾಚಲ ಪ್ರದೇಶ ವಿರುದ್ಧದ ಪಂದ್ಯದಲ್ಲಿ ಬಿಹಾರ ಬ್ಯಾಟ್ಸ್​ಮನ್​ ವಿನಾಶಕಾರಿ ಬ್ಯಾಟಿಂಗ್ ಪ್ರದರ್ಶನ ನೀಡಿದ್ದು, ಕ್ರಿಕೆಟ್​ ಪ್ರಿಯರ ಹುಬ್ಬೇರಿಸಿತು. ಈ ಪಂದ್ಯದಲ್ಲಿ ಮೊದಲು, ವೈಭವ್ ಸೂರ್ಯವಂಶಿ 36 ಎಸೆತಗಳಲ್ಲಿ ಭರ್ಜರಿ ಶತಕ ಗಳಿಸಿದರು. ಈ ಮೂಲಕ ದಾಖಲೆ ನಿರ್ಮಿಸಿದರು. ಅದೇ ಮ್ಯಾಚ್​ನಲ್ಲಿ, ಮತ್ತೊಬ್ಬ ಯುವ ಬ್ಯಾಟ್ಸ್‌ಮನ್ ಕೇವಲ 32 ಎಸೆತಗಳಲ್ಲಿ ಶತಕದಾಟ ತೋರಿದ್ದು, ವೈಭವ್ ದಾಖಲೆ ಬ್ರೇಕ್ ಮಾಡಿದ್ದಾರೆ. ಇದರೊಟ್ಟಿಗೆ, ಬಿಹಾರ ತಂಡ 574 ರನ್ ಗಳಿಸಿದ ಮೊದಲ ತಂಡ ಎಂಬ ಹೊಸ ದಾಖಲೆಗೆ ಸಾಕ್ಷಿಯಾಗಿದೆ.

ವೈಭವ್ ದಾಖಲೆ

ಲಿಸ್ಟ್-ಎ ಕ್ರಿಕೆಟ್‌ನಲ್ಲಿ (ಏಕದಿನ ಅಂತಾರಾಷ್ಟ್ರೀಯ) ಅತಿ ಹೆಚ್ಚು ಸ್ಕೋರ್ ಗಳಿಸಿದ ತಂಡವಾಗಿ ಹೊರಹೊಮ್ಮಿದೆ. ಇಂದು ಅರುಣಾಚಲ ಪ್ರದೇಶ ವಿರುದ್ಧ ನಡೆದ ಪಂದ್ಯದಲ್ಲಿ ಬಿಹಾರ ಬ್ಯಾಟ್ಸ್‌ಮನ್‌ಗಳು ಆಕ್ರಮಣಕಾರಿ ಬ್ಯಾಟಿಂಗ್ ದಾಳಿ ನಡೆಸಿದರು. ಕೇವಲ 36 ಎಸೆತಗಳಲ್ಲಿ ಶತಕ ಗಳಿಸುವ ಮೂಲಕ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಎರಡನೇ ಬಾರಿ ವೇಗದ ಶತಕ ಗಳಿಸಿದ ಮೊದಲ ಕ್ರಿಕೆಟಿಗನೆಂಬ ದಾಖಲೆ ವೈಭವ್​ ಬರೆದಿದ್ದಾರೆ. ಅರುಣಾಚಲ ಪ್ರದೇಶ ಮತ್ತು ಬಿಹಾರ ನಡುವಿನ ವಿಜಯ್ ಹಜಾರೆ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಈ ವಿಶೇಷ ಸಾಧನೆಗೈದರು.

ಬಿಹಾರ ಕ್ಯಾಪ್ಟನ್​ ಆರ್ಭಟ

ಇನ್ನು ತಂಡದ ಪರ ಪಿಯೂಷ್ ಸಿಂಗ್ ಕೂಡ ಅರ್ಧಶತಕ (77) ಗಳಿಸಿದರು. ನಾಲ್ಕನೇ ಸ್ಥಾನದಲ್ಲಿ ಆಡಿದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಆಯುಷ್ ಲೋಹರುಕ ಕೇವಲ 56 ಎಸೆತಗಳಲ್ಲಿ 116 ರನ್ ಬಾರಿಸಿದರು. ಐದನೇ ಕ್ರಮಾಂಕದಲ್ಲಿ ಕ್ರೀಸ್​ಗಿಳಿದ ಬಿಹಾರ ಕ್ಯಾಪ್ಟನ್​ ಸಕಿಬುಲ್ ಗನಿ ಉರಾಮಸ್, ಕೇವಲ 32 ಎಸೆತಗಳಲ್ಲಿ ಆಕರ್ಷಕ ಶತಕ ಗಳಿಸಿದರು. ಈ ಮೂಲಕ ವೈಭವ್ ಸೂರ್ಯವಂಶಿ ನಿರ್ಮಿಸಿದ ದಾಖಲೆಯನ್ನು ಹಿಂದಿಕ್ಕಿದರು. ಸ್ಫೋಟಕ ಪ್ರದರ್ಶನ ಮುಂದುವರಿಸಿದ ಅವರು, 40 ಎಸೆತಗಳಲ್ಲಿ 128 ರನ್ ಗಳಿಸಿ ಅಜೇಯರಾಗಿ ಉಳಿದರು.
ಇದು ಲಿಸ್ಟ್-ಎ ಕ್ರಿಕೆಟ್‌ನಲ್ಲಿ ಯಾವುದೇ ತಂಡ ಗಳಿಸಿದ ಅತ್ಯಧಿಕ ಸ್ಕೋರ್ ಆಗಿದೆ ಎಂಬುದು ಇಲ್ಲಿ ಗಮನಾರ್ಹ. 2022ರ ಆರಂಭದಲ್ಲಿ, ತಮಿಳುನಾಡು ತಂಡ ಅರುಣಾಚಲ ಪ್ರದೇಶದ ವಿರುದ್ಧ ಎರಡು ವಿಕೆಟ್‌ಗಳ ನಷ್ಟಕ್ಕೆ 506 ರನ್ ಸಿಡಿಸಿತು. ಈಗ, ಅದೇ ಅರುಣಾಚಲ ತಂಡದ ವಿರುದ್ಧ 574 ರನ್ ಗಳಿಸುವ ಮೂಲಕ ಬಿಹಾರ ಹೊಸ ದಾಖಲೆಗೆ ಸಾಕ್ಷಿಯಾಗಿದೆ.

ಲಿಸ್ಟ್-ಎ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸ್ಕೋರ್‌ಗಳನ್ನು ಹೊಂದಿರುವ ತಂಡಗಳಿವು

1. 2025ರಲ್ಲಿ ಬಿಹಾರ vs ಅರುಣಾಚಲ ಪ್ರದೇಶ: 574/6
2. 2022ರಲ್ಲಿ ತಮಿಳುನಾಡು vs ಅರುಣಾಚಲ ಪ್ರದೇಶ: 506/2
3. 2022ರಲ್ಲಿ ಇಂಗ್ಲೆಂಡ್ vs ನೆದರ್‌ಲ್ಯಾಂಡ್ಸ್: 498/4
4. 2007ರಲ್ಲಿ: ಸರ್ರೆ vs ಗ್ಲೌಸೆಸ್ಟರ್‌ಶೈರ್: 496/4
5. 2018ರಲ್ಲಿ ಇಂಗ್ಲೆಂಡ್ vs ಆಸ್ಟ್ರೇಲಿಯಾ: 481/6.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net