ಭಾರತದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಸುಮಾರು 5 ವರ್ಷಗಳ ಹಿಂದೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದರು. ಆದಾಗ್ಯೂ, ಅವರು ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯಾವಳಿಯಲ್ಲಿ ಆಡುವುದನ್ನು ಮುಂದುವರೆಸಿದ್ದಾರೆ. ಅನೇಕ ವರ್ಷಗಳ ಕಾಲ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕರಾಗಿದ್ದ ಮಹೇಂದ್ರ ಸಿಂಗ್ ಧೋನಿ, ಈಗ ಸಾಮಾನ್ಯ ಆಟಗಾರ. ಯುವರಾಜ್ ಸಿಂಗ್ ಅವರ ತಂದೆ ಯೋಗರಾಜ್ ಸಿಂಗ್ ಯಾವಾಗಲೂ ಧೋನಿ ವಿರುದ್ಧ ಮಾತನಾಡುತ್ತಿದ್ದರು. ತಮ್ಮ ಮಗ ಯುವರಾಜ್ ಸಿಂಗ್ ನಾಯಕತ್ವವನ್ನು ಪಡೆಯುವುದನ್ನು ತಡೆಯಲು ಧೋನಿ ಪಿತೂರಿ ನಡೆಸಿದರು ಎಂದು ಹಲವು ಬಾರಿ ಆರೋಪಿಸಿದ್ದಾರೆ. ಅಲ್ಲದೆ, ಧೋನಿ ನಾಯಕತ್ವದಲ್ಲಿ ತಮ್ಮ ಮಗನನ್ನು ಕಡೆಗಣಿಸಲಾಯಿತು ಎಂಬ ಆರೋಪವೂ ಇದೆ. ಸದಾ ಧೋನಿ ಬಗ್ಗೆ ಕಿಡಿಕಾರುತ್ತಿದ್ದ ಯೋಗರಾಜ್ ಸಿಂಗ್ ಇದೇ ಮೊದಲ ಬಾರಿಗೆ ಧೋನಿಯನ್ನು ಹೊಗಳಿದ್ದಾರೆ.