ಬೆಂಗಳೂರು: ಯೋಗಾಸನವನ್ನು ಒಂದು ಸ್ಪರ್ಧಾತ್ಮಕ ಕ್ರೀಡೆಯಾಗಿ ಪ್ರದರ್ಶಿಸುವ ಮೊದಲ ಜಾಗತಿಕ ಪಂದ್ಯಾವಳಿ 'ವಿಶ್ವ ಯೋಗಾಸನ ಚಾಂಪಿಯನ್‌ಶಿಪ್ 2026' ಗೆ ಇಂದು ಹೊಸದೆಹಲಿಯಲ್ಲಿ ಅಧಿಕೃತವಾಗಿ ಚಾಲನೆ ನೀಡಲಾಯಿತು. ಜೂನ್ 4 ರಿಂದ 8 ರವರೆಗೆ ಅಹಮದಾಬಾದ್‌ನ ಏಕಾ ಅರೆನಾದಲ್ಲಿ ಈ ವಿಶ್ವ ಚಾಂಪಿಯನ್‌ಶಿಪ್ ನಡೆಯಲಿದೆ. ಇದರಲ್ಲಿ ಉಗಾಂಡ, ಜಾಂಬಿಯಾ, ಶ್ರೀಲಂಕಾ, ನೇಪಾಳ, ಕೀನ್ಯಾ, ಜಪಾನ್, ಓಮನ್, ಮಾರಿಷಸ್ ಮತ್ತು ನೆದರ್ಲ್ಯಾಂಡ್ಸ್ ಸೇರಿದಂತೆ 60 ಕ್ಕೂ ಹೆಚ್ಚು ದೇಶಗಳ ಗಣ್ಯ ಯೋಗಾಸನ ಕ್ರೀಡಾಪಟುಗಳು ಮತ್ತು ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.