ವಿಪರೀತ ಹೊಟ್ಟೆ ನೋವಿನಿಂದ ಆಸ್ಪತ್ರೆಗೆ ದಾಖಲು! ಎರಡು ದಿನಕ್ಕೆ 2 ಕೆಜಿ ತೂಕ ಕಳೆದುಕೊಂಡ ಜೈಸ್ವಾಲ್: ವರದಿ​

ಯಶಸ್ವಿ ಜೈಸ್ವಾಲ್​
ಯಶಸ್ವಿ ಜೈಸ್ವಾಲ್​
Published on

ಪ್ರಮುಖ ಮುಖ್ಯಾಂಶಗಳು

  • ಫುಡ್​ ಪಾಯ್ಸನಿಂಗ್​ನಿಂದ ಆಸ್ಪತ್ರೆಗೆ ದಾಖಲಾದ ಯಶಸ್ವಿ ಜೈಸ್ವಾಲ್
  • ವಿಪರೀತ ಹೊಟ್ಟೆ ನೋವಿನ ಬೆನ್ನಲ್ಲೇ ಆಸ್ಪತ್ರೆಗೆ
  • ಕಳೆದ 2 ದಿನಗಳಲ್ಲಿ 2 ಕೆಜಿ ತೂಕ ಇಳಿಕೆ
ಮುಂಬೈ: ಇತ್ತೀಚೆಗಷ್ಟೇ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಭಾಗಿಯಾದ ಟೀಮ್ ಇಂಡಿಯಾದ ಯುವ ಆರಂಭಿಕ ಬ್ಯಾಟರ್​ ಯಶಸ್ವಿ ಜೈಸ್ವಾಲ್​,ಇದೀಗ ವಿಪರೀತ ಹೊಟ್ಟೆ ನೋವಿನಿಂದ ದಿಢೀರ್ ಆಸ್ಪತ್ರೆಗೆ ದಾಖಲಾಗಿದ್ದು, ಅವರ ಅಭಿಮಾನಿಗಳಲ್ಲಿ ತೀರ ಆತಂಕ ಮೂಡಿಸಿದೆ.
ಮುಂಬೈ ಮತ್ತು ರಾಜಸ್ಥಾನ ನಡುವಿನ ಸೈಯದ್​ ಮುಷ್ತಾಕ್ ಅಲಿ ಟ್ರೋಫಿಯ ಪಂದ್ಯದ ವೇಳೆ ತೀವ್ರ ಹೊಟ್ಟೆ ನೋವಿನಿಂದ ಬಳಲಿದ ಜೈಸ್ವಾಲ್​, ಹೆಚ್ಚಿನ ಚಿಕಿತ್ಸೆಗೆಂದು ಆದಿತ್ಯ ಬಿರ್ಲಾ ಆಸ್ಪತ್ರೆಗೆ ದಾಖಲಾದರು. ಹೋಟೆಲ್​ವೊಂದರಲ್ಲಿ ಯಶಸ್ವಿ ತಿಂದ ಆಹಾರವೇ ಈ ಸಮಸ್ಯೆಗೆ ಕಾರಣವಾಯಿತು ಎನ್ನಲಾಗಿದೆ. ಎನ್​ಡಿಟಿವಿ ವರದಿ ಪ್ರಕಾರ, ಹೋಟೆಲ್​ನಲ್ಲಿ ಆಹಾರ ತಿಂದ ಕಾರಣ, ಅವರಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದೆ. ವೈದ್ಯರ ಸೂಕ್ತ ಚಿಕಿತ್ಸೆಯಿಂದ ಸದ್ಯ ಜೈಸ್ವಾಲ್​ ಚೇತರಿಸಿಕೊಳ್ಳುತ್ತಿದ್ದಾರೆ.
ಫುಡ್​ ಪಾಯ್ಸನಿಂಗ್​ ಅವರ ಅನಾರೋಗ್ಯ ಸಮಸ್ಯೆಗೆ ಕಾರಣ. ಔಷಧ ಮತ್ತು ವೈದ್ಯರ ಚಿಕಿತ್ಸೆಯಿಂದ ನೋವು ಕಡಿಮೆಯಾಗಿದೆ. ಕಳೆದ ಎರಡು ದಿನಗಳಲ್ಲಿ ಜೈಸ್ವಾಲ್​ 2 ಕೆಜಿ ತೂಕ ಕಳೆದುಕೊಂಡಿದ್ದಾರೆ. ಕನಿಷ್ಠ 7ರಿಂದ 10 ದಿನಗಳ ವಿಶ್ರಾಂತಿ ಪಡೆಯುವುದು ಅಗತ್ಯ ಎಂದು ವೈದ್ಯರು ತಿಳಿಸಿದ್ದಾಗಿ ವರದಿಯಾಗಿದೆ. ಇನ್ನು ಯಶಸ್ವಿ ಪರಿಸ್ಥಿತಿ ಹೀಗಿರುವಾಗ, ಡಿ.24ರಿಂದ ಆರಂಭಗೊಳ್ಳಲಿರುವ ವಿಜಯ್​ ಹಜಾರೆ ಟ್ರೋಫಿಗೆ ತಂಡದಲ್ಲಿ ಅವರ ಅನುಪಸ್ಥಿತಿ ಕಾಡಲಿದೆ. ಇದರೊಟ್ಟಿಗೆ, ನ್ಯೂಜಿಲೆಂಡ್​ ವಿರುದ್ಧದ ಮೂರು ಏಕದಿನ ಪಂದ್ಯಗಳನ್ನು ಭಾರತ ಆಡಲಿದ್ದು, ಈ ತಂಡದಲ್ಲಿ ಜೈಸ್ವಾಲ್​ ಇರುವುದು ಗಮನಾರ್ಹ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net