WPL: ದೀಪ್ತಿ, ಅಮೆಲಿಯಾ ದುಬಾರಿ, 4ನೇ ಆವೃತ್ತಿ​ಗೆ ಐದು ತಂಡಗಳ ಆಟಗಾರ್ತಿಯರು ಅಂತಿಮ

 ದೀಪ್ತಿ, ಅಮೆಲಿಯಾ, ಸೋಫಿ ಡಿವೈನ್, ಮೆಗ್ ಲ್ಯಾನಿಂಗ್, ಚಿನೆಲ್ಲೆ ಹೆನ್ರಿ
ದೀಪ್ತಿ, ಅಮೆಲಿಯಾ, ಸೋಫಿ ಡಿವೈನ್, ಮೆಗ್ ಲ್ಯಾನಿಂಗ್, ಚಿನೆಲ್ಲೆ ಹೆನ್ರಿ
Published on
ನವದೆಹಲಿ: ಮಹಿಳಾ ಐಪಿಎಲ್ ಎಂದೇ ಖ್ಯಾತವಾಗಿರುವ ವುಮೆನ್ಸ್ ಪ್ರೀಮಿಯರ್ ಲೀಗ್ (ಡಬ್ಲುೃಪಿಎಲ್) ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಭಾರತ ತಂಡದ ಆಲ್ರೌಂಡರ್ ದೀಪ್ತಿ ಶರ್ಮ ದುಬಾರಿ ಆಟಗಾರ್ತಿ ಎನಿಸಿದರು. ಮುಂದಿನ ವರ್ಷ ನಡೆಯಲಿರುವ ನಾಲ್ಕನೇ ಆವೃತ್ತಿಗೆ ಪೂರ್ವಸಿದ್ಧತೆಯಾಗಿ ಗುರುವಾರ ನಡೆದ ಹರಾಜಿನಲ್ಲಿ ₹3.20 ಕೋಟಿ ವ್ಯಯಿಸಿದ ಯುಪಿ ವಾರಿಯರ್ಸ್‌ ಫ್ರಾಂಚೈಸಿ ರೈಟ್ ಟು ಮ್ಯಾಚ್ (ಆರ್‌ಟಿಎಂ) ಕಾರ್ಡ್ ಮೂಲಕ ದೀಪ್ತಿ ಅವರನ್ನು ಮತ್ತೆ ತವರು ತಂಡಕ್ಕೆ ಕರೆದಂತಿತು. ನ್ಯೂಜಿಲೆಂಡ್ ಆಲ್ರೌಂಡರ್ ಅಮೆಲಿಯಾ ಕೆರ್ ₹3 ಕೋಟಿ ( ಮುಂಬೈ ಇಂಡಿಯನ್ಸ್) ಶಿಖಾ ಪಾಂಡೆ ₹2.40 ಕೋಟಿಗೆ (ಯುಪಿ ವಾರಿಯರ್ಸ್‌) ಸೇಲಾಗುವ ಮೂಲಕ ಕ್ರಮವಾಗಿ 2 ಮತ್ತು 3ನೇ ದುಬಾರಿ ಖರೀದಿ ಎನಿಸಿದರು.
ಇದೇ ಮೊದಲ ಬಾರಿಗೆ ನಡೆದ ಮೆಗಾ ಹರಾಜಿನಲ್ಲಿ ಆಲ್ರೌಂಡರ್‌ಗಳ ಜತೆಗೆ ವಿದೇಶಿ ತಾರೆಗಳ ಖರೀದಿಗೆ ಐದು ಫ್ರಾಂಚೈಸಿಗಳು ಪೈಪೋಟಿ ನಡೆಸಿದವು. ಹರಾಜು ಪ್ರಕ್ರಿಯೆಯಲ್ಲಿ ಒಟ್ಟು 11 ಆಟಗಾರ್ತಿಯರು ಕೋಟಿ ಬೆಲೆ ಪಡೆದುಕೊಂಡರು. ಏಕದಿನ ವಿಶ್ವಕಪ್ ಸರಣಿಶ್ರೇಷ್ಠ ಪ್ರಶಸ್ತಿ ವಿಜೇತೆ ದೀಪ್ತಿ ಸೇರ್ಪಡೆಗೆ ಆರಂಭದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹೊರತುಪಡಿಸಿ ಯಾವ ತಂಡವೂ ಬಿಡ್ ಸಲ್ಲಿಸಲಿಲ್ಲ. ಡೆಲ್ಲಿ ತಂಡದ 3.20 ಕೋಟಿಗೆ ಬಿಡ್‌ಗೆ ಯುಪಿ ವಾರಿಯರ್ಸ್‌ ಆರ್‌ಟಿಎಂ ಕಾರ್ಡ್ ಬಳಸಿತು. ಇದರೊಂದಿಗೆ ದೀಪ್ತಿ ಡಬ್ಲುೃಪಿಎಲ್ ಹರಾಜಿನಲ್ಲಿ ಮಾರಾಟವಾದ ಎರಡನೇ ದುಬಾರಿ ಆಟಗಾರ್ತಿ ಎನಿಸಿದರು. ನ್ಯೂಜಿಲೆಂಡ್‌ನ ಸೋಫಿ ಡಿವೈನ್ ₹2 ಕೋಟಿ (ಗುಜರಾತ್), ಆಸ್ಟ್ರೇಲಿಯಾ ಮಾಜಿ ನಾಯಕಿ ಮೆಗ್ ಲ್ಯಾನಿಂಗ್ ₹1.90 ಕೋಟಿ (ಯುಪಿ) ನಂತರದ ದುಬಾರಿ ಆಟಗಾರ್ತಿ ಎನಿಸಿದರು. ಹರಾಜಿನಲ್ಲಿ ಒಟ್ಟು 67 ಕ್ರಿಕೆಟಿಗರ ಖರೀದಿಗೆ ₹40.8 ಕೋಟಿ ವ್ಯಯಿಸಲಾಯಿತು.
ರಾಜ್ಯದ ಇಬ್ಬರು ಮಾತ್ರ ಖರೀದಿ
ಅನುಭವಿ ಸ್ಪಿನ್ನರ್ ರಾಜೇಶ್ವರಿ ಗಾಯಕ್ವಾಡ್ ಮೂಲಬೆಲೆ ₹40 ಲಕ್ಷಕ್ಕೆ ಗುಜರಾತ್ ಜೈಂಟ್ಸ್ ತಂಡ ಸೇರಿದರೆ, ಪ್ರತ್ಯೂಷಾ ಕುಮಾರ್ ಮೂಲಬೆಲೆ 10 ಲಕ್ಷಕ್ಕೆ ತವರು ತಂಡ ಆರ್‌ಸಿಬಿ ಕೂಡಿಕೊಂಡರು. ಇದರೊಂದಿಗೆ ಆರ್‌ಸಿಬಿ ತಂಡದಲ್ಲಿ ಕನ್ನಡತಿಯರ ಸಂಖ್ಯೆ 2ಕ್ಕೇರಿದೆ. ಶ್ರೇಯಾಂಕಾ ಪಾಟೀಲ್‌ರನ್ನು ಆರ್‌ಸಿಬಿ ರಿಟೇನ್ ಮಾಡಿಕೊಂಡಿತ್ತು. ಮತ್ತೋರ್ವ ಕನ್ನಡತಿ ನಿಕಿ ಪ್ರಸಾದ್ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಲಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್:ರಿಟೇನ್: ಜೆಮೀಮಾ ರೋಡ್ರಿಗಸ್ (₹2.20 ಕೋಟಿ), ಶೆಫಾಲಿ ವರ್ಮ (₹2.20 ಕೋಟಿ), ಅನ್ನಾಬೆಲ್ ಸುದರ್‌ಲ್ಯಾಂಡ್ (₹2.20 ಕೋಟಿ), ಮಾರಿಜಾನ್ನೆ ಕಾಪ್ (₹2.20 ಕೋಟಿ), ನಿಕಿ ಪ್ರಸಾದ್ (₹50 ಲಕ್ಷ);ಖರೀದಿ:ಚಿನೆಲ್ಲೆ ಹೆನ್ರಿ (₹1.30 ಕೋಟಿ),ಎನ್. ಶ್ರೀಚರಣಿ (₹1.30 ಕೋಟಿ), ಲೌರಾ ವೋಲ್ವಾರ್ಡ್ (₹1.10 ಕೋಟಿ), ಸ್ನೇಹಾ ರಾಣಾ (₹50 ಲಕ್ಷ), ಲಿಜೆಲ್ ಲೀ (₹30 ಲಕ್ಷ), ತಾನಿಯಾ ಭಾಟಿಯಾ (₹30 ಲಕ್ಷ), ನಂದನಿ ಶರ್ಮ (₹20 ಲಕ್ಷ), ದಿಯಾ ಯಾದವ್ (10 ಲಕ್ಷ), ಮಮತಾ ಮಡಿವಾಳ (₹10 ಲಕ್ಷ), ಲೂಸಿ ಹ್ಯಾಮಿಲ್ಟನ್ (₹10 ಲಕ್ಷ).
ಗುಜರಾತ್ ಜೈಂಟ್ಸ್
ರಿಟೇನ್: ಆಶ್ಲೇ ಗಾರ್ಡ್‌ನರ್ (₹3.50 ಕೋಟಿ), ಬೆಥ್ ಮೂನಿ (₹2.50 ಕೋಟಿ);ಖರೀದಿ: ಸೋಫಿ ಡಿವೈನ್ (₹2 ಕೋಟಿ), ಜಾರ್ಜಿಯಾ ವೇರ್‌ಹ್ಯಾಂ (₹1 ಕೋಟಿ, ಆರ್‌ಟಿಎಂ), ಭಾರತಿ (₹70 ಲಕ್ಷ. ಆರ್‌ಟಿಎಂ), ಕಾಶ್ವಿ ಗೌತಮ್ (₹65 ಲಕ್ಷ), ರೇಣುಕಾ ಸಿಂಗ್ (₹60 ಲಕ್ಷ), ಕಿಮ್ ಗಾರ್ತ್ (₹50 ಲಕ್ಷ), ಯಸ್ತಿಕಾ ಭಾಟಿಯಾ (₹50 ಲಕ್ಷ), ತನುಜಾ ಕನ್ವರ್ (₹45 ಲಕ್ಷ),ಅನುಷ್ಕಾ ಶರ್ಮ (₹45 ಲಕ್ಷ), ಟಿಟಾಸ್ ಸಧು (₹30 ಲಕ್ಷ), ಕನಿಕಾ ಆಹುಜಾ (₹30 ಲಕ್ಷ), ಹ್ಯಾಪಿ ಕುಮಾರಿ (₹10 ಲಕ್ಷ), ಶಿವಾನಿ ಸಿಂಗ್ (10 ಲಕ್ಷ). ರಾಜೇಶ್ವರಿ ಗಾಯಕ್ವಾಡ್ (₹40 ಲಕ್ಷ).
ಮುಂಬೈ ಇಂಡಿಯನ್ಸ್
ರಿಟೇನ್: ನಥಾಲಿಯಾ ಸೀವರ್ ಬ್ರಂಟ್ (₹3.50 ಕೋಟಿ), ಹರ್ಮಾನ್‌ಪ್ರೀತ್ ಕೌರ್ (₹2.50 ಕೋಟಿ), ಹ್ಯಾಲೆ ಮ್ಯಾಥ್ಯೂಸ್ (₹1.75 ಕೋಟಿ), ಅಮನ್‌ಜೋತ್ ಕೌರ್ (₹1 ಕೋಟಿ), ಜಿ. ಕಮಲಿನಿ (₹50 ಲಕ್ಷ);ಖರೀದಿ: ಅಮೆಲಿಯಾ ಕೆರ್ (₹3 ಕೋಟಿ), ಸಜೀವನ್ ಸಜನಾ (₹75 ಲಕ್ಷ), ಶಬನಿಮ್ ಇಸ್ಮಾಯಿಲ್ (₹60 ಲಕ್ಷ), ನಿಕೋಲ ಕ್ಯಾರಿ (₹30 ಲಕ್ಷ), ಸಂಸ್ಕೃತಿ ಗುಪ್ತಾ (₹20 ಲಕ್ಷ), ತ್ರಿವೇಣಿ ವಸಿಷ್ಠ (₹20 ಲಕ್ಷ), ರಹಿಲಾ ಫಿರ್‌ದೋಸ್ (₹10 ಲಕ್ಷ), ಪೂನಂ ಖೆಮ್ನಾರ್ (₹10 ಲಕ್ಷ), ನಲ್ಲ ರೆಡ್ಡಿ (10 ಲಕ್ಷ),ಮಿಲ್ಲೆ ಇಲ್ಲಿಂಗ್​ವರ್ತ್​ (₹10 ಲಕ್ಷ).
ಆರ್‌ಸಿಬಿ ತಂಡ
ರಿಟೇನ್: ಸ್ಮತಿ ಮಂದನಾ (₹3.50 ಕೋಟಿ), ಎಲ್ಲಿಸ್ ಪೆರ‌್ರಿ (₹2 ಕೋಟಿ), ರಿಚಾ ಘೋಷ್ (₹2.75 ಕೋಟಿ), ಶ್ರೇಯಾಂಕಾ ಪಾಟೀಲ್ (₹60 ಲಕ್ಷ). ಖರೀದಿ: ಲೌರೆನ್ ಬೆಲ್ (₹90 ಲಕ್ಷ), ಆರುಂಧತಿ ರೆಡ್ಡಿ (₹75 ಲಕ್ಷ), ಪೂಜಾ ವಸಕರ್ (₹85 ಲಕ್ಷ), ನಡೀನ್ ಡಿ ಕ್ಲಕ್ (₹65 ಲಕ್ಷ), ರಾಧಾ ಯಾದವ್ (₹65 ಲಕ್ಷ), ಲಿನ್ಸೆ ಸ್ಮಿತ್ (₹30 ಲಕ್ಷ), ಜಾರ್ಜಿಯಾ ವೂಲ್ (₹60 ಲಕ್ಷ), ಪ್ರೇಮಾ ರಾವತ್ (₹20 ಲಕ್ಷ, ಆರ್‌ಟಿಎಂ), ಗೌತಮಿ ನಾಯ್ಕ (₹10 ಲಕ್ಷ), ಪ್ರತ್ಯೂಷಾ ಕುಮಾರಿ (₹10 ಲಕ್ಷ).
ಯುಪಿ ವಾರಿಯರ್ಸ್‌
ರಿಟೇನ್: ಶ್ವೇತಾ ಸೆಹ್ರಾವತ್ (₹50 ಲಕ್ಷ), ದೀಪ್ತಿ ಶರ್ಮ (₹3.20 ಕೋಟಿ, ಆರ್‌ಟಿಎಂ), ಶಿಖಾ ಪಾಂಡೆ (₹2.40 ಕೋಟಿ), ಮೆಗ್ ಲ್ಯಾನಿಂಗ್ (₹1.9 ಕೋಟಿ),ಫೋಬಿ ಲಿಚ್ಛಪೀಲ್ಡ್ (₹1.20 ಕೋಟಿ), ಆಶಾ ಶೋಭನಾ (₹1.10 ಕೋಟಿ), ಸೋಫಿ ಎಕೆಲ್‌ಸ್ಟೋನ್ (₹85 ಲಕ್ಷ, ಆರ್‌ಟಿಎಂ), ಡಿಯೆಂಡ್ರಾ ಡಾಟಿನ್ (₹80 ಲಕ್ಷ), ಕಿರಣ್ ನವಗಿರೆ (₹60 ಲಕ್ಷ, ಆರ್‌ಟಿಎಂ), ಹರ್ಲೀನ್ ಡಿಯೋಲ್ (₹50 ಲಕ್ಷ), ಕ್ರಾಂತಿ ಗೌಡ್ (₹50 ಲಕ್ಷ, ಆರ್‌ಟಿಎಂ), ಕ್ಲೋಯ್ ಟ್ರೈಯಾನ್ (₹30 ಲಕ್ಷ), ಶಿಪ್ರಾ ಗಿರಿ (₹10 ಲಕ್ಷ), ಸಿಮ್ರನ್ ಶೇಕ್ (₹10 ಲಕ್ಷ), ತಾರಾ ನೋರಿಸ್ (₹10 ಲಕ್ಷ), ಸುಮನ್ ಮೀನಾ (₹10 ಲಕ್ಷ).
ಜ.9ರಿಂದ 4ನೇ ಆವೃತ್ತಿ
ವುಮೆನ್ಸ್ ಪ್ರೀಮಿಯರ್ ಲೀಗ್ (ಡಬ್ಲುೃಪಿಎಲ್) ಟೂರ್ನಿಯ ನಾಲ್ಕನೇ ಆವೃತ್ತಿಗೆ ಮುಂಬೈ ಹಾಗೂ ವಡೋದರ ನಗರಗಳು ಆತಿಥ್ಯವಹಿಸಲಿದ್ದು, ಜನವರಿ 9 ರಿಂದ ಫೆಬ್ರವರಿ 5ರವರೆಗೆ ಟೂರ್ನಿ ನಡೆಯಲಿದೆ.ಕ್ಯಾರವಾನ್ ಮಾದರಿಯಲ್ಲಿ ಟೂರ್ನಿ ನಡೆಯಲಿದ್ದು, ಉದ್ಘಾಟನಾ ಪಂದ್ಯ ಸೇರಿ ಮೊದಲಾರ್ಧದ ಪಂದ್ಯಗಳಿಗೆ ನವಿಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣ ಆಯ್ಕೆ ಮಾಡಲಾಗಿದೆ. ಫೈನಲ್ ಸಹಿತ ಟೂರ್ನಿಯ ದ್ವಿತೀಯಾರ್ಧ ಪಂದ್ಯಗಳು ವಡೋದರದಲ್ಲಿ ನಡೆಯಲಿವೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net