ಗುಜರಾತ್‌ನ ಭುಜ್ ಮೂಲದ ಹೀನಾ ರಾಜಗೋರ್, ಪ್ರಸ್ತುತ ಯೋಗದಲ್ಲಿ ಪಿಎಚ್‌ಡಿ (PhD) ಅಧ್ಯಯನ ಮಾಡುತ್ತಿದ್ದು, ಹಿರಿಯರ 'ಬಿ' ಮಹಿಳಾ ವಿಭಾಗದ ಫಾರ್ವರ್ಡ್ ಬೆಂಡ್ ಸ್ಪರ್ಧೆಯಲ್ಲಿ 43.50 ಅಂಕಗಳನ್ನು ಗಳಿಸಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದರು. ಓಮನ್‌ನ ಪ್ರೀತಿ ಜೈಮಾನಿ ಬೆಳ್ಳಿ ಪದಕ ಗೆದ್ದರೆ, ರಷ್ಯಾದ ಸ್ವೆಟ್ಲಾನಾ ಲುಕಾಶೋವಾ ಮತ್ತು ಜೋರ್ಡನ್‌ನ ಮಾಯಾ ಅಲ್ ಅಲೋಸ್ಥಾತ್ ಕಂಚಿನ ಪದಕಗಳನ್ನು ಹಂಚಿಕೊಂಡರು.