ಭಾರತದಲ್ಲಿ ಪ್ಯಾಡೆಲ್ ಕ್ರೀಡೆ ಅಭೂತಪೂರ್ವ ಬೆಳವಣಿಗೆಯನ್ನು ಕಾಣುತ್ತಿದೆ. ಹಡ್ಲೆ (Hudle) ಮತ್ತು ಸಿಎಎ ಪೋರ್ಟಾಸ್ (CAA Portas) ಅವರ ‘ಇಂಡಿಯಾ ಪ್ಯಾಡೆಲ್ ರಿಪೋರ್ಟ್ 2026’ರ ಪ್ರಕಾರ, ಭಾರತದ ಪ್ಯಾಡೆಲ್ ಮಾರುಕಟ್ಟೆ ಮೌಲ್ಯವು ಪ್ರಸ್ತುತದ 25-30 ಮಿಲಿಯನ್ ಡಾಲರ್‌ನಿಂದ 2036ರ ವೇಳೆಗೆ 250-300 ಮಿಲಿಯನ್ ಡಾಲರ್‌ಗೆ ಏರಿಕೆಯಾಗುವ ಅಂದಾಜಿದೆ. ಅಲ್ಲದೆ, 2022ರಲ್ಲಿ ಕೇವಲ 500-1,000 ಇದ್ದ ಆಟಗಾರರ ಸಂಖ್ಯೆಯು 2025ರ ವೇಳೆಗೆ 1,00,000ಕ್ಕೆ ಏರಿರುವುದು ಈ ಕ್ರೀಡೆಯ ಭವಿಷ್ಯವನ್ನು ಸೂಚಿಸುತ್ತದೆ.