ಬೆಂಗಳೂರು: ವರ್ಲ್ಡ್ ಲೆಜೆಂಡ್ಸ್ ಪ್ರೋ T20 ಲೀಗ್ (WLPTL) ತನ್ನ ಬಹುನಿರೀಕ್ಷಿತ ಪ್ರಥಮ ಆವೃತ್ತಿಗೆ ಗೋವಾ ಟೂರಿಸಂ ಅನ್ನು ‘ಪವರ್ಡ್ ಬೈ’ ಪ್ರಾಯೋಜಕರಾಗಿ ಘೋಷಿಸಿದೆ. ಈ ಲೀಗ್ ಜನವರಿ 26 ರಿಂದ ಗೋವಾದಲ್ಲಿರುವ 1919 ಕ್ರಿಕೆಟ್ ಸ್ಟೇಡಿಯಂನಲ್ಲಿ ಆರಂಭಗೊಳ್ಳಲಿದೆ. ವರ್ಲ್ಡ್ ಲೆಜೆಂಡ್ಸ್ ಪ್ರೋ T20 ಲೀಗ್ ಒಂದು ಅಪೂರ್ವ ಮಟ್ಟದ ಅಂತರರಾಷ್ಟ್ರೀಯ ಕ್ರಿಕೆಟ್ ಈವೆಂಟ್ ಆಗಿದ್ದು, ಆರು ತಂಡಗಳಿಗಾಗಿ ಒಟ್ಟು 90 ಕ್ರಿಕೆಟಿಗರನ್ನು ಆಯ್ಕೆ ಮಾಡಲಾಗಿದೆ. ಶೇನ್ ವಾಟ್ಸನ್, ಡೇಲ್ ಸ್ಟೇನ್, ಜಾಕ್ವಿಸ್ ಕಾಲಿಸ್, ಕ್ರಿಸ್ ಗೇಲ್, ಫಾಫ್ ಡು ಪ್ಲೆಸಿಸ್ ಸೇರಿದಂತೆ ಅಂತರರಾಷ್ಟ್ರೀಯ ದಿಗ್ಗಜರು ಹಾಗೂ ಶಿಖರ್ ಧವನ್, ದಿನೇಶ್ ಕಾರ್ತಿಕ್, ಹರ್ಭಜನ್ ಸಿಂಗ್ ಸೇರಿದಂತೆ ಭಾರತೀಯ ಕ್ರಿಕೆಟ್ ಲೆಜೆಂಡ್ಸ್‌ಗಳು ಈ ಪ್ರಾರಂಭಿಕ ಆವೃತ್ತಿಯಲ್ಲಿ ಭಾಗವಹಿಸಲಿದ್ದಾರೆ. ಇದರಿಂದ ಗೋವಾದ ಕ್ರಿಕೆಟ್ ಅಭಿಮಾನಿಗಳಿಗೆ ಟಿ20 ಕ್ರಿಕೆಟ್ ಇತಿಹಾಸದ ಶ್ರೇಷ್ಠ ಆಟಗಾರರನ್ನು ನೇರವಾಗಿ ನೋಡುವ ಅಪೂರ್ವ ಅವಕಾಶ ಸಿಗಲಿದೆ.