ಒಂದು ಕೈಯಲ್ಲಿ ವಿಶ್ವಕಪ್, ಮತ್ತೊಂದರಲ್ಲಿ ಚಹಾ ಕಪ್: ವರುಣ್ ಚಕ್ರವರ್ತಿ ಫೋಟೋ ಹಿಂದಿರುವ ರಹಸ್ಯವೇನು? Varun Chakravarthy

ವಿಶ್ವಕಪ್​ ಟ್ರೋಫಿ ಜೊತೆ ಚಹಾಕಪ್​ ಹಿಡಿದು ಫೋಟೊ ಹಂಚಿಕೊಂಡ ವರುಣ್ ಚಕ್ರವರ್ತಿ (Varun Chakravarthy)
ವಿಶ್ವಕಪ್​ ಟ್ರೋಫಿ ಜೊತೆ ಚಹಾಕಪ್​ ಹಿಡಿದು ಫೋಟೊ ಹಂಚಿಕೊಂಡ ವರುಣ್ ಚಕ್ರವರ್ತಿ (Varun Chakravarthy)
Published on

ಪ್ರಮುಖ ಮುಖ್ಯಾಂಶಗಳು

  • 2026 ರ ಟಿ-20 ವಿಶ್ವಕಪ್​ ಚಾಂಪಿಯನ್​ ಆಗಿ ಹೊರಹೊಮ್ಮಿದ ಭಾರತ
  • ವಿಶ್ವಕಪ್​ ಟ್ರೋಫಿ ಜೊತೆ ಚಹಾಕಪ್​ ಹಿಡಿದು ಫೋಟೊ ಹಂಚಿಕೊಂಡ ಭಾರತದ ಸ್ಪಿನ್ನರ್​
  • ಪಾಕಿಸ್ತಾನಕ್ಕೆ ಕೊಟ್ಟ ಕೌಂಟರ್​ ಎಂದ ವರುಣ್​ ಚಕ್ರವರ್ತಿ ಅಭಿಮಾನಿಗಳು
ಕ್ರಿಕೆಟ್​: ಮಾ.8 ಇದು ಭಾರತದ ಪುರುಷರ ಕ್ರಿಕೆಟ್​ ತಂಡದ ಇತಿಹಾಸದಲ್ಲಿ ಸುವಾರ್ಣಾಕ್ಷರದಲ್ಲಿ ಬರೆದಿಡಬೇಕಾದ ದಿನವಾಗಿದೆ. ಏಕೆಂದರೆ ಭಾರತವು, ನ್ಯೂಜಿಲೆಂಡ್​ ತಂಡವನ್ನು ಸೋಲಿಸಿ ಸತತ ಎರಡನೇ ಬಾರಿಗೆ ಚಾಂಪಿಯನಾಗಿ ಹೊರಹೊಮ್ಮಿದೆ.
ಭಾರತ ಫೈನಲ್​​ ಪಂದ್ಯವನ್ನು ಗೆದ್ದಿತು ಎಂಬ ಸುದ್ದಿ ಈಗ ದೇಶದಾದ್ಯಂತ ಸಂಭ್ರಮಕ್ಕೆ ಕಾರಣವಾಗಿದೆ. ಕೇವಲ ಕ್ರಿಕೆಟ್ ಅಭಿಮಾನಿಗಳಷ್ಟೇ ಅಲ್ಲದೆ, ಬಾಲಿವುಡ್​ ನಟ-ನಟಿಯರು, ರಾಜಕೀಯ ನಾಯಕರು ಎಲ್ಲರೂ ಈ ಸಂಭ್ರಮದಲ್ಲಿ ಭಾಗಿಯಾಗುತ್ತಿದ್ದರೆ.
ಈ ಟಿ-20 ವಿಶ್ವಕಪ್​ನಿಂದ ಹೊರಬಿದ್ದ ದಿನದಿಂದ ಪಾಕಿಸ್ತಾನ ಮತ್ತು ಆ ದೇಶದ ಮಾಜಿ ಆಟಗಾರರು ಭಾರತ ತಂಡದ ವಿರುದ್ಧ ಕಿಡಿ ಕಾರುತ್ತಾ ಇದ್ದರು. ಭಾರತ ಈ ಪಂದ್ಯ ಸೋಲುತ್ತದೆ, ಆ ಪಂದ್ಯ ಸೋಲುತ್ತದೆ, ಫೈನಲ್​ ತಲುಪಿದೆ ಆದರೆ ಗೆಲ್ಲಲು ಸಾಧ್ಯವಿಲ್ಲ ಎಂಬ ತಮ್ಮ ಎಂದಿಗೂ ನಿಜವಾಗದ ಭವಿಷ್ಯವಾಣಿಯನ್ನು ಹೇಳುತ್ತಾ ತಿರುಗುತ್ತಿದ್ದರು.
ಅದರೆ ಈಗ ಭಾರತ ಮತ್ತೊಮ್ಮೆ ವಿಶ್ವಕಪ್​ಗೆ ಮುತ್ತಿಕ್ಕಿದನ್ನು ನೋಡಿದ ಪಾಕಿಸ್ತಾನದ ಪರಿಸ್ಥಿತಿ ಇಂಗು ತಿಂದ ಮಂಗನಂತಾಗಿದೆ ಎಂದರೆ ಸುಳ್ಳಲ್ಲ. ಅದೇ ರೀತಿ ಈಗ ಚಾಂಪಿಯನಾಗಿ ಹೊರಹೊಮ್ಮಿದ ಭಾರತ ತಂಡದ ಆಟಗಾರರು ಪಾಕಿಸ್ತಾನವನ್ನು ಉರಿಸುವ ಮತ್ತು ಕಿಚಾಯಿಸುವ ಕೆಲಸವನ್ನು ಶರುವಿಟ್ಟಿದ್ದಾರೆ.
ಹಾಗೂ ಈ ವಿಶ್ವಕಪ್​ನಲ್ಲಿ ಅತೀ ಹೆಚ್ಚು ವಿಕೆಟ್​ ಪಡೆದ ಭಾರತ ತಂಡದ ಸ್ಪಿನ್​ ಬೌಲರ್​ ವರುಣ್​ ಚಕ್ರವರ್ತಿ (Varun Chakravarthy) ಕೈಯಲ್ಲಿ ವಿಶ್ವಕಪ್​ ಟ್ರೋಫಿ ಜೊತೆಗೆ ಚಹಾ ಕಪ್​ನ್ನು ಹಿಡಿದಿರುವ ಫೋಟೊವೊಂದನ್ನು ಹಂಚಿಕೊಂಡಿದ್ದಾರೆ. ಈದೀಗ ಈ ಫೋಟೊ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗುತ್ತಿದ್ದು, ಭಾರತದ ಅಭಿಮಾನಿಗಳು ಈ ಫೋಟೊ ಪಾಕಿಸ್ತಾನದ ಆಟಗಾರರನ್ನು ಉರಿಸಲೆಂದೇ ಹಂಚಿಕೊಂಡಿದ್ದಾರೆ ಎಂದು ಹೇಳುತ್ತಿದ್ದಾರೆ.

ಏಷ್ಯಾಕಪ್​ ಗೆದ್ದಾಗಲೂ ಹೀಗೆ ಮಾಡಿದ್ದ ವರುಣ್​

ಈ ರೀತಿಯ ಫೋಟೊವನ್ನು ಇದೇ ಮೊದಲ ಬಾರಿಗೆ ಹಂಚಿಕೊಂಡಿದ್ದರೆ ಇದು ಗೆದ್ದ ಖುಷಿಗೆ ಅಪ್​ಲೋಡ್​ ಮಾಡಿರುವ ಫೋಟೊ ಎನ್ನಬಹುದಿತ್ತು. ಅದರೆ ವರುಣ್​ ಇದೇ ರೀತಿಯ ಫೋಟೊವನ್ನು 2025 ರ ಏಷ್ಯಾಕಪ್​​ನಲ್ಲಿ ಪಾಕಿಸ್ತಾನವನ್ನು ಸೋಲಿಸಿದ ನಂತರ ಹಂಚಿಕೊಂಡಿದ್ದರು. 

ಟಿ-20 ವಿಶ್ವಕಪ್​ನಲ್ಲಿ ವರುಣ್​ ಚಕ್ರವರ್ತಿ ಸಾಧನೆ

ಈ ವಿಶ್ವಕಪ್​ನಲ್ಲಿ ಭಾರತದ ಸ್ಪಿನ್​ ಬೌಲಿಂಗ್​  ವಿಭಾಗವನ್ನು ಮುನ್ನಡೆಸಿದ ವರುಣ್​ ಚಕ್ರವರ್ತಿ, ಈ ವಿಶ್ವಕಪ್​ನಲ್ಲಿ ಅತಿ ಹೆಚ್ಚು ವಿಕೆಟ್​ ಪಡೆದ ಬೌಲರ್ (14 ವಿಕೆಟ್​) ಆಗಿ ಹೊರಹೊಮ್ಮಿದ್ದಾರೆ. ಒಟ್ಟಾರೆ 31 ಓವರ್​ಗಳನ್ನು ಮಾಡಿದ ಇವರು 231 ರನ್​ ನೀಡಿ 14 ವಿಕೆಟ್​ಗಳನ್ನು ಖಬಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಫೈನಲ್​​ ಪಂದ್ಯದಲ್ಲಿ ನ್ಯೂಜಿಲೆಂಡ್​ನ ಟಿಮ್ ಶೇಫರ್ಟ್ ಅವರ ವಿಕೆಟ್​ನ್ನು ತೆಗೆಯುವ ಮೂಲಕ ಭಾರತದ ಗೆಲುವಿನ ಹಾದಿಯನ್ನು ಸುಗಮಗೊಳಿಸಿದರು. 
ಅತೀ ಹೆಚ್ಚು ವಿಕೆಟ್​ಗಳನ್ನು ಪಡೆದ ಪಟ್ಟಿಯಲ್ಲಿ ಭಾರತದ ಬೌಲರ್​ಗಳಾದ ವರುಣ್​ ಚಕ್ರವರ್ತಿ ಹಾಗೂ ಜಸ್ಪ್ರೀತ್ ಬುಮ್ರಾ ತಲಾ 14 ವಿಕೆಟ್​ಗಳನ್ನು ಪಡೆಯುವ ಮೂಲಕ ಮೊದಲ ಸ್ಥಾನವನ್ನು ಹಂಚಿಕೊಂಡಿದ್ದರೆ, ಅಮೆರಿಕದ ಶ್ಯಾಡ್ಲಿ ವ್ಯಾನ್ ಶಾಲ್ಕ್‌ವಿಕ್, ಜಿಂಬಾಬೆಯ ಮುಜರಬಾನಿ ಆಶೀರ್ವಾದ ಹಾಗೂ ಇಂಗ್ಲೆಂಡ್​ನ ಆದಿಲ್ ರಶೀದ್  13 ವಿಕೆಟ್​ಗಳನ್ನು ಪಡೆಯುವ ಮೂಲಕ ನಂತರದ ಸ್ಥಾನಗಳನ್ನು ಹಂಚಿಕೊಂಡಿದ್ದಾರೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net