"ಜಿತೇಶ್ ಶರ್ಮಾ ಕಳೆದ ಒಂದು ವರ್ಷದಿಂದ ತಂಡದ ಜೊತೆಗಿದ್ದರು, ಅವರಿಗೆ ಅವಕಾಶ ನೀಡದಿರುವುದು ಕಠಿಣವಾಗಿತ್ತು. ಆದರೆ ದೊಡ್ಡ ವೇದಿಕೆಯಲ್ಲಿ ನಮಗೆ ಒಬ್ಬ 'ಎಕ್ಸ್-ಫ್ಯಾಕ್ಟರ್' ಆಟಗಾರನ ಅಗತ್ಯವಿತ್ತು. ನಾನು ಇಶಾನ್‌ಗೆ ಫೋನ್ ಮಾಡಿ, 'ಛೋಟು, ವಿಶ್ವಕಪ್ ಗೆಲ್ಲಿಸಿಕೊಡ್ತೀಯಾ?' ಎಂದು ಕೇಳಿದೆ. ಅದಕ್ಕೆ ಇಶಾನ್, 'ನನ್ನ ಮೇಲೆ ಭರವಸೆ ಇಡ್ತೀರಾ?' ಎಂದು ಮರುಪ್ರಶ್ನಿಸಿದ. ನಾನು 'ಖಂಡಿತಾ' ಎಂದೆ. ಅಲ್ಲಿಂದ ಎಲ್ಲವೂ ಬದಲಾಯಿತು," ಎಂದು ಸೂರ್ಯಕುಮಾರ್ ಆ ಕ್ಷಣವನ್ನು ಸ್ಮರಿಸಿದ್ದಾರೆ.