ಭಾರತ ಹಾಗೂ ಇಂಗ್ಲೆಂಡ್ ತಂಡಗಳಿಂದ ಒಟ್ಟು ಎಂಟು ಆಟಗಾರ್ತಿಯರು ಟೆಸ್ಟ್ ಪದಾರ್ಪಣೆಯ ನಿರೀಕ್ಷೆಯಲ್ಲಿದ್ದಾರೆ. 2021ರಲ್ಲಿ ಕೊನೆಯದಾಗಿ ಆಂಗ್ಲರ ನೆಲದಲ್ಲಿ ಟೆಸ್ಟ್ ಆಡಿದ್ದ ಹರ್ಮಾನ್‌ಪ್ರೀತ್, ಸ್ಮೃತಿ ಮಂದನಾ, ಶೆಫಾಲಿ ವರ್ಮ, ದೀಪ್ತಿ ಶರ್ಮ ಈಗಲೂ ತಂಡದ ಭಾಗವಾಗಿದ್ದಾರೆ. ಟಿ20 ವಿಶ್ವಕಪ್ ರನ್ನರ್ ಅಪ್ ಇಂಗ್ಲೆಂಡ್ ಒಂದೂವರೆ ವರ್ಷದ ನಂತರ ಟೆಸ್ಟ್ ಆಡಲಿದ್ದು, ಭಾರತ ವಿರುದ್ಧ ಕೊನೆಯದಾಗಿ 2015ರಲ್ಲಿ ಮುಂಬೈನಲ್ಲಿ ಜಯಿಸಿತ್ತು.