ಮಹಿಳಾ ಕ್ರಿಕೆಟ್​ ಪ್ರೇರಣೆ: ಹಿಮಾಲಯದ ‘1ಡರ್ವುಮನ್’ ಯೋಜನೆಯ ಮೂಲಕ ಕನಸಿನತ್ತ ಮತ್ತೊಂದು ಹೆಜ್ಜೆ

ಮಹಿಳಾ ಕ್ರಿಕೆಟ್​ ಪ್ರೇರಣೆ: ಹಿಮಾಲಯದ ‘1ಡರ್ವುಮನ್’ ಯೋಜನೆಯ ಮೂಲಕ ಕನಸಿನತ್ತ ಮತ್ತೊಂದು ಹೆಜ್ಜೆ
ಮಹಿಳಾ ಕ್ರಿಕೆಟ್​ ಪ್ರೇರಣೆ: ಹಿಮಾಲಯದ ‘1ಡರ್ವುಮನ್’ ಯೋಜನೆಯ ಮೂಲಕ ಕನಸಿನತ್ತ ಮತ್ತೊಂದು ಹೆಜ್ಜೆ
Published on
ಬೆಂಗಳೂರು: ಭಾರತದಾದ್ಯಂತ ಮಹಿಳಾ ಕ್ರಿಕೆಟ್ ಹೊಸ ಪೀಳಿಗೆಗೆ ನಿರಂತರವಾಗಿ ಪ್ರೇರಣೆ ನೀಡುತ್ತಿರುವ ಬೆನ್ನಲ್ಲೇ, ಕರ್ನಾಟಕದ ಯುವತಿಯರು ‘1ಡರ್ವುಮನ್ ಕ್ರಿಕೆಟ್ ಸ್ಕಾಲರ್ಶಿಪ್ ಕಾರ್ಯಕ್ರಮಕ್ಕೆ ಆಯ್ಕೆಯಾಗಿದ್ದಾರೆ. ಹಿಮಾಲಯ ವೆಲ್ನೆಸ್ ಸಂಸ್ಥೆಯ ಈ ಮಹತ್ವಾಕಾಂಕ್ಷಿ ಉಪಕ್ರಮವು, ಉದಯೋನ್ಮುಖ ಕ್ರಿಕೆಟ್ ಆಟಗಾರ್ತಿಯರಿಗೆ ಗುಣಮಟ್ಟದ ತರಬೇತಿ, ಕೋಚಿಂಗ್ ಮತ್ತು ಕ್ರೀಡಾ ಪರಿಕರಗಳ ಬೆಂಬಲವನ್ನು ನೀಡುವ ಮೂಲಕ ಅವರ ಕನಸುಗಳಿಗೆ ಹೆಗಲು ಕೊಡುವ ಉದ್ದೇಶ ಹೊಂದಿದೆ.
ಇಂದು ಮಹಿಳಾ ಟಿ20 ವಿಶ್ವಕಪ್ ಇಡೀ ದೇಶದ ಗಮನವನ್ನು ಮಹಿಳಾ ಕ್ರಿಕೆಟ್ನತ್ತ ಸೆಳೆಯುತ್ತಿದ್ದು, ಕೋಟ್ಯಂತರ ಯುವತಿಯರಲ್ಲಿ ಹೊಸ ಭರವಸೆ ಮೂಡಿಸುತ್ತಿದೆ. ಇದೇ ಸಂದರ್ಭದಲ್ಲಿ ಹಿಮಾಲಯ ವೆಲ್ನೆಸ್ ಸಂಸ್ಥೆಯು ‘1ಡರ್ವುಮನ್ ಕ್ರಿಕೆಟ್ ಸ್ಕಾಲರ್ಶಿಪ್’ ಕಾರ್ಯಕ್ರಮದ 100 ವಿಜೇತರನ್ನು ಘೋಷಿಸಿದೆ. ಇವರಲ್ಲಿ ದೇಶದ ಒಟ್ಟಾರೆ ವಿದ್ಯಾರ್ಥಿವೇತನ ಪುರಸ್ಕೃತರ ಪೈಕಿ ಕರ್ನಾಟಕದ 8 ಯುವತಿಯರು ಆಯ್ಕೆಯಾಗಿದ್ದಾರೆ.
ಪ್ರಸ್ತುತ ಭಾರತದಲ್ಲಿ ಮಹಿಳಾ ಕ್ರಿಕೆಟ್ಗೆ ಅಭೂತಪೂರ್ವ ಮನ್ನಣೆ ಸಿಗುತ್ತಿದೆ. ಹೌಸ್ಫುಲ್ ಕ್ರೀಡಾಂಗಣಗಳು, ದಾಖಲೆಯ ವೀಕ್ಷಕರು ಮತ್ತು ಕ್ರೀಡಾಪಟುಗಳಲ್ಲಿ ತಮ್ಮ ರೋಲ್ ಮಾಡೆಲ್ಗಳನ್ನು ಹುಡುಕಿಕೊಳ್ಳುತ್ತಿರುವ ಯುವತಿಯರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈ ಕ್ರೀಡೆಯು ಹಿಂದೆಂದೂ ಕಾಣದ ಮಟ್ಟಿಗೆ ಹೊಸ ಆಕಾಂಕ್ಷೆಗಳನ್ನು ಹುಟ್ಟುಹಾಕುತ್ತಿದೆ. ಆದರೆ, ಅನೇಕ ಯುವತಿಯರ ಪಾಲಿಗೆ ಈ ಕೇವಲ ಪ್ರೇರಣೆಯ ಹಂತದಲ್ಲೇ ಅವರ ಪ್ರಯಾಣವು ಕೊನೆಗೊಳ್ಳುತ್ತದೆ.
ಭಾರತದಾದ್ಯಂತ ಮಹಿಳಾ ಕ್ರಿಕೆಟ್ ಜನರ ಮನ ಗೆಲ್ಲುತ್ತ ಮುನ್ನಡೆಯುತ್ತಿರುವ ಬೆನ್ನಲ್ಲೇ, ಹಿಮಾಲಯ ವೆಲ್ನೆಸ್ ಇಂದು '1ಡರ್ವುಮನ್ ಕ್ರಿಕೆಟ್ ಸ್ಕಾಲರ್ಶಿಪ್' ಕಾರ್ಯಕ್ರಮದ ವಿಜೇತರನ್ನು ಪ್ರಕಟಿಸಿದೆ. ದೇಶಾದ್ಯಂತ ಆಯ್ಕೆಯಾದ ಈ ಪ್ರತಿಭೆಗಳಲ್ಲಿ ಕರ್ನಾಟಕದ ಯುವತಿಯರೂ ಸೇರಿದ್ದಾರೆ. ತುಂಬಿ ತುಳುಕುತ್ತಿರುವ ಕ್ರೀಡಾಂಗಣಗಳು, ಹೆಚ್ಚುತ್ತಿರುವ ವೀಕ್ಷಕರ ಸಂಖ್ಯೆ ಮತ್ತು ಯುವ ಆಟಗಾರ್ತಿಯರ ದಂಡೇ ಸೃಷ್ಟಿಯಾಗುತ್ತಿರುವ ಈ ಹೊತ್ತಿನಲ್ಲಿ, ಹಿಂದೆಂದಿಗಿಂತಲೂ ಹೆಚ್ಚು ಯುವತಿಯರು ಕ್ರಿಕೆಟ್ ಅನ್ನು ಗಂಭೀರ ವೃತ್ತಿಜೀವನವನ್ನಾಗಿ ನೋಡಲು ಪ್ರಾರಂಭಿಸಿದ್ದಾರೆ. ಆದಾಗ್ಯೂ, ಅವರ ಮಹತ್ವಾಕಾಂಕ್ಷೆಯು ನಿಜವಾದ ಅವಕಾಶವಾಗಿ ಬದಲಾಗುವ ಹಾದಿ ಇನ್ನೂ ಸವಾಲಿನಿಂದಲೇ ಕೂಡಿದೆ.
'1ಡರ್ವುಮನ್' ಯೋಜನೆಯ ಮೂಲಕ ಹಿಮಾಲಯ ಸಂಸ್ಥೆಯು ಕಲಿಕೆ, ಮಾರ್ಗದರ್ಶನ ಮತ್ತು ಸೂಕ್ತ ಬೆಂಬಲವನ್ನು ಒದಗಿಸುವ ಮೂಲಕ ಈ ಕಂದಕವನ್ನು ತುಂಬಲು ಮುಂದಾಗಿದೆ. ಪ್ರತಿಭೆಗೆ ಬೆಂಬಲ, ಸರಿಯಾದ ಮಾರ್ಗದರ್ಶನ ಮತ್ತು ಅವಕಾಶ ಸಿಕ್ಕಾಗ ಮಾತ್ರ ಅದು ಅರಳುತ್ತದೆ ಎಂಬುದನ್ನು ಮನಗಂಡ ಹಿಮಾಲಯ ವೆಲ್ನೆಸ್, '1ಡರ್ವುಮನ್' ಯೋಜನೆಯನ್ನು ಒಂದು ಡಿಜಿಟಲ್-ಫಸ್ಟ್ ವೇದಿಕೆಯಾಗಿ ರೂಪಿಸಿದೆ. ಇದು ಕ್ರಿಕೆಟ್ ಆಧಾರಿತ ಕಲಿಕೆ, ಮಾರ್ಗದರ್ಶನ, ಆತ್ಮವಿಶ್ವಾಸ ವೃದ್ಧಿ ಮತ್ತು ವ್ಯಕ್ತಿತ್ವ ವಿಕಸನವನ್ನು ಒಂದೇ ಸೂರಿನಡಿ ತರುತ್ತದೆ. 10 ರಿಂದ 15 ವರ್ಷದೊಳಗಿನ ಬಾಲಕಿಯರಿಗಾಗಿ ವಿನ್ಯಾಸಗೊಳಿಸಲಾದ ಈ ವೇದಿಕೆಯು, ಮಹಿಳಾ ಕ್ರಿಕೆಟ್ನ ಪ್ರಮುಖ ತಾರೆಗಳಿಂದ ಕಲಿಯಲು ಮತ್ತು ಕ್ರೀಡಾ ಕ್ಷೇತ್ರದಲ್ಲಿ ಮುನ್ನಡೆಯಲು ಅಗತ್ಯವಾದ ಕೌಶಲ, ಶಿಸ್ತು ಹಾಗೂ ಮಾನಸಿಕ ಸ್ಥೈರ್ಯವನ್ನು ಬೆಳೆಸಿಕೊಳ್ಳಲು ನೆರವಾಗುತ್ತದೆ.
ಅದಕ್ಕಿಂತಲೂ ಮುಖ್ಯವಾಗಿ, ಈ ಯೋಜನೆಯನ್ನು ಯುವತಿಯರು ಎದುರಿಸುವ ನೈಜ ಸವಾಲುಗಳನ್ನು ಆಧರಿಸಿ ರೂಪಿಸಲಾಗಿದೆ. ಕ್ರಿಕೆಟ್ ಕೌಶಲಗಳ ಹೊರತಾಗಿ, ಆತ್ಮವಿಶ್ವಾಸವನ್ನು ಬೆಳೆಸುವುದು, ಶಿಸ್ತು ರೂಢಿಸಿಕೊಳ್ಳುವುದು, ಶಿಕ್ಷಣ ಮತ್ತು ಕ್ರೀಡೆಯನ್ನು ಸಮತೋಲನಗೊಳಿಸುವುದು ಹಾಗೂ ಕೇವಲ ಪ್ರೇರಣೆಯಿಂದ ಸಕ್ರಿಯವಾಗಿ ಕಣಕ್ಕಿಳಿಯುವವರೆಗಿನ ವ್ಯವಸ್ಥಿತ ಮಾರ್ಗಸೂಚಿಯನ್ನು ಸಿದ್ಧಪಡಿಸುವತ್ತ ಈ ಯೋಜನೆಯ ಮಾಡ್ಯೂಲ್ಗಳು ಗಮನ ಹರಿಸುತ್ತವೆ. ಮಾರ್ಗದರ್ಶನ, ಕಲಿಕೆ ಮತ್ತು ಅವಕಾಶಗಳನ್ನು ಒಂದೇ ವೇದಿಕೆಯಲ್ಲಿ ತರುವ ಮೂಲಕ, ಹಿಮಾಲಯ ಸಂಸ್ಥೆಯು ಮಹತ್ವಾಕಾಂಕ್ಷಿ ಯುವ ಕ್ರಿಕೆಟ್ ಆಟಗಾರ್ತಿಯರಿಗೆ ಸುಲಭ ಹಾಗೂ ಸಾಧಿಸಬಹುದಾದ ಹಾದಿಯನ್ನು ನಿರ್ಮಿಸಿದೆ.
ಈ ಮಹತ್ವದ ಮೈಲಿಗಲ್ಲಿನ ಕುರಿತು ಮಾತನಾಡಿದ ಹಿಮಾಲಯ ವೆಲ್ನೆಸ್ ಕಂಪನಿಯ ಕನ್ಸ್ಯೂಮರ್ ಪ್ರಾಡಕ್ಟ್ಸ್ ವಿಭಾಗದ ಬಿಸಿನೆಸ್ ಡೈರೆಕ್ಟರ್ ರಾಜೇಶ್ ಕೃಷ್ಣಮೂರ್ತಿ ಅವರು, "ಹಿಮಾಲಯದಲ್ಲಿ, ಪ್ರೇರಣೆಗೆ ಸೂಕ್ತ ಅವಕಾಶಗಳು ಸಿಕ್ಕಾಗ ಮಾತ್ರ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ಸಾಧ್ಯ ಎಂದು ನಾವು ನಂಬುತ್ತೇವೆ. ಭಾರತದಾದ್ಯಂತ ಯುವತಿಯರಿಗೆ ಮಹಿಳಾ ಕ್ರಿಕೆಟ್ ಒಂದು ಪ್ರಬಲ ಆಕಾಂಕ್ಷೆಯಾಗಿ ಹೊರಹೊಮ್ಮಿದೆ. '1ಡರ್ವುಮನ್' ಮೂಲಕ ನಾವು ಕೇವಲ ಜಾಗೃತಿ ಮೂಡಿಸುವುದನ್ನು ಮೀರಿ, ಯುವತಿಯರಿಗೆ ನಿಜವಾದ ಮತ್ತು ಸಾಧಿಸಬಹುದಾದ ಅವಕಾಶಗಳನ್ನು ಸೃಷ್ಟಿಸಲು ಬಯಸಿದ್ದೇವೆ. ಈ 100 ಸ್ಕಾಲರ್ಶಿಪ್ಗಳು ಕೇವಲ ಯುವ ಕ್ರೀಡಾಪಟುಗಳಿಗೆ ನೀಡುವ ಬೆಂಬಲ ಮಾತ್ರವಲ್ಲ; ಇದು ಅವರ ಸಾಮರ್ಥ್ಯದ ಮೇಲಿನ ನಂಬಿಕೆ ಮತ್ತು ಕ್ರೀಡಾ ಲೋಕದಲ್ಲಿ ಅವರ ಭವಿಷ್ಯದ ಸುದೀರ್ಘ ಪಯಣದ ಆರಂಭವಾಗಿದೆ," ಎಂದರು.
ಈ ಉಪಕ್ರಮದ ಕುರಿತು ಮಾತನಾಡಿದ ಹಿಮಾಲಯ ವೆಲ್ನೆಸ್ ಸಂಸ್ಥೆಯ ಬ್ಯೂಟಿ ಮತ್ತು ಪರ್ಸನಲ್ ಕೇರ್ ವಿಭಾಗದ ಮಾರ್ಕೆಟಿಂಗ್ ಡೈರೆಕ್ಟರ್ ರಾಗಿಣಿ ಹರಿಹರನ್ ಅವರು, "ಇಂದಿನ ದಿನಗಳಲ್ಲಿ ಬ್ರ್ಯಾಂಡ್ಗಳು ಜನರ ಜೀವನದಲ್ಲಿ ಸಕಾರಾತ್ಮಕ ಮತ್ತು ಗಮನಾರ್ಹ ಬದಲಾವಣೆ ತರುವ ವೇದಿಕೆಗಳನ್ನು ನಿರ್ಮಿಸುವ ಮೂಲಕ ಸಂಸ್ಕೃತಿಗೆ ಅರ್ಥಪೂರ್ಣ ಕೊಡುಗೆ ನೀಡಬಹುದು. '1ಡರ್ವುಮನ್' ಮೂಲಕ ನಮ್ಮ ಉದ್ದೇಶ ಕೇವಲ ಮಹಿಳಾ ಕ್ರಿಕೆಟ್ ಅನ್ನು ಆಚರಿಸುವುದಷ್ಟೇ ಆಗಿರಲಿಲ್ಲ, ಬದಲಿಗೆ ಅದರಲ್ಲಿ ಹೆಚ್ಚಿನ ಯುವತಿಯರು ಭಾಗವಹಿಸುವಂತೆ ಮಾಡುವುದಾಗಿತ್ತು. ಈ ಯೋಜನೆಯು ಪ್ರೇರಣೆಯನ್ನು ಕ್ರಿಯೆಯಾಗಿ ಮತ್ತು ಮಹತ್ವಾಕಾಂಕ್ಷೆಯನ್ನು ಅವಕಾಶವಾಗಿ ಪರಿವರ್ತಿಸಲು ರೂಪುಗೊಂಡಿದೆ. ಈ 100 ಯುವತಿಯರ ಸಾಧನೆಯನ್ನು ಆಚರಿಸುತ್ತಿರುವುದು, ಪ್ರತಿಭೆಗೆ ಸರಿಯಾದ ಪ್ರವೇಶ, ಪ್ರೋತ್ಸಾಹ ಮತ್ತು ಬೆಂಬಲ ಸಿಕ್ಕಾಗ ಏನೆಲ್ಲಾ ಸಾಧ್ಯ ಎಂಬುದಕ್ಕೆ ಸಾಕ್ಷಿಯಾಗಿದೆ," ಎಂದು ತಿಳಿಸಿದರು.
ಈ ಕಾರ್ಯಕ್ರಮವು ದೇಶಾದ್ಯಂತ 100 ವಿದ್ಯಾರ್ಥಿವೇತನ ಪುರಸ್ಕೃತರ ಆಯ್ಕೆಯೊಂದಿಗೆ ಮುಕ್ತಾಯಗೊಂಡಿದೆ. ಅವರಲ್ಲಿ ಕರ್ನಾಟಕದ 8 ಯುವತಿಯರು ಕ್ರಿಕೆಟ್ ಅನ್ನು ವೃತ್ತಿಜೀವನವನ್ನಾಗಿ ಆಯ್ದುಕೊಂಡು, ತಮ್ಮ ಕನಸುಗಳನ್ನು ನನಸಾಗಿಸಲು ಮುನ್ನಡೆಯುತ್ತಿರುವ ಹೊಸ ಪೀಳಿಗೆಯ ಕ್ರೀಡಾಪಟುಗಳನ್ನು ಪ್ರತಿನಿಧಿಸುತ್ತಾರೆ. ವಿಭಿನ್ನ ಹಿನ್ನೆಲೆ ಮತ್ತು ವಿಭಿನ್ನ ಆಕಾಂಕ್ಷೆಗಳನ್ನು ಹೊಂದಿರುವ ಇವರ ಈ ಪಯಣವು, ಈ ಭಾಗದಲ್ಲಿ ಮಹಿಳಾ ಕ್ರಿಕೆಟ್ಗೆ ಸಿಗುತ್ತಿರುವ ಅಭೂತಪೂರ್ವ ಬೆಂಬಲವನ್ನು ಮತ್ತು ಅವಕಾಶಗಳನ್ನು ಸೃಷ್ಟಿಸುವುದರ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತದೆ.
1ಡರ್ವುಮನ್ ಕ್ರಿಕೆಟ್ ಸ್ಕಾಲರ್ಶಿಪ್’ ಕೋಚಿಂಗ್, ತರಬೇತಿ ಮತ್ತು ಕ್ರೀಡಾ ಸಾಮಗ್ರಿಗಳಿಗೆ ಆರ್ಥಿಕ ನೆರವು ನೀಡುತ್ತದೆ. ಇದು ಯುವತಿಯರು ಕ್ರಿಕೆಟ್ ಆಡುವಾಗ ಎದುರಿಸುವ ಪ್ರಮುಖ ಆರ್ಥಿಕ ಅಡೆತಡೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಈ ವಿದ್ಯಾರ್ಥಿವೇತನಗಳನ್ನು ಕೇವಲ ಪ್ರತಿಭೆಯನ್ನು ಬೆಂಬಲಿಸಲು ಮಾತ್ರವಲ್ಲದೆ, ಕಲಿಕೆ, ಮಾರ್ಗದರ್ಶನ ಮತ್ತು ಅಭಿವೃದ್ಧಿಯ ಅವಕಾಶಗಳನ್ನು ಸೃಷ್ಟಿಸುವ ಮೂಲಕ ಕ್ರೀಡೆಯಲ್ಲಿ ದೀರ್ಘಕಾಲದವರೆಗೆ ಭಾಗವಹಿಸುವಂತೆ ಪ್ರೋತ್ಸಾಹಿಸಲು ವಿನ್ಯಾಸಗೊಳಿಸಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net