ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ನೆಟ್ಟಿಗರು ಯುವತಿಯ ಕಾಲೆಳೆಯಲು ಶುರು ಮಾಡಿದ್ದಾರೆ. "ರೀಲ್ಸ್ ಮಾಡೋಕೆ ಹೋಗಿ 70 ಸಾವಿರದ ಉಂಗುರ ಕಳ್ಕೊಂಡ್ರಲ್ಲಾ, ಈಗ ನಿಮ್ಮ ರೀಲ್ಸ್ ಬೆಲೆ 70 ಸಾವಿರ ಆಯ್ತು" ಎಂದು ಒಬ್ಬರು ಕಾಮೆಂಟ್ ಮಾಡಿದರೆ, ಮತ್ತೊಬ್ಬರು "ಮುಂದಿನ ಬಾರಿ ದಾರ ಕಟ್ಟಿ ರೀಲ್ಸ್ ಮಾಡಿ" ಎಂದು ಸಲಹೆ ನೀಡಿದ್ದಾರೆ. ಇನ್ನು ಕೆಲವರು "ಇಷ್ಟೊಂದು ನಾಟಕ ಮಾಡುವ ಅಗತ್ಯವಿತ್ತಾ? ಅನುಭವಿಸಿ" ಎಂದು ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡುತ್ತಿದೆ,(ಏಜೆನ್ಸೀಸ್).