6 ಗ್ರಾಂಡ್ ಸ್ಲಾಂ ವಿಜೇತೆ ಇಗಾ ಸ್ವಿಯಾಟೆಕ್, ಅಮೆರಿಕದ ಟೇಲರ್ ಟೌನ್‌ಸೆಂಡ್ ಎದುರು ಪ್ರಶಸ್ತಿ ಉಳಿಸಿಕೊಳ್ಳುವ ಅಭಿಯಾನ ಆರಂಭಿಸಲಿದ್ದಾರೆ. ವಿಶ್ವ ನಂ.1 ಅರಿನಾ ಸಬಲೆಂಕಾ ಚೊಚ್ಚಲ ವಿಂಬಲ್ಡನ್ ಪ್ರಶಸ್ತಿಯ ನಿರೀಕ್ಷೆಯಲ್ಲಿದ್ದಾರೆ. ಜತೆಗೆ ಅಮೆರಿಕದ ಕೋಕೋ ಗೌಫ್, ಜಾಸ್ಮಿನ್ ಪಾವೊಲಿನಿ, ಎಲೆನಾ ರೈಬಕಿನಾ, ಫ್ರೆಂಚ್ ಓಪನ್ ಹಾಲಿ ಚಾಂಪಿಯನ್ ಮಿರ‌್ರಾ ಆಂಡ್ರೀವಾ, ಯೂಕ್ರೇನ್‌ನ ಎಲಿನಾ ಸ್ವಿಟೋಲಿನಾ ಮತ್ತು ಮಾರ್ಟಾ ಕೊಸ್ಟ್ಯುಕ್, ಕಳೆದ ವರ್ಷದ ಫೈನಲಿಸ್ಟ್ ಅಮಂಡಾ ಅನಿಸಿಮೊವಾ ನಿಕಟ ಪೈಪೋಟಿ ಒಡ್ಡುವ ನಿರೀಕ್ಷೆ ಇದೆ.