Vaibhav Suryavanshi : ಇತ್ತೀಚಿನ ದಿನಗಳಲ್ಲಿ ಸಿಕ್ಕಾಪಟ್ಟೆ ಸುದ್ದಿಯಲ್ಲಿರುವ 15 ವರ್ಷದ ಯುವ ಬ್ಯಾಟ್ಸ್‌ಮನ್ ವೈಭವ್ ಸೂರ್ಯವಂಶಿ, ಪ್ರಸ್ತುತ ತ್ರಿಕೋನ 'ಎ' ಸರಣಿಯಲ್ಲಿ ಭಾರತ 'ಎ' ತಂಡದ ಪರವಾಗಿ ಆಡುತ್ತಿದ್ದು, ಆಡಿದ ಮೂರು ಪಂದ್ಯಗಳಲ್ಲಿ ಕ್ರಮವಾಗಿ 14, 44 ಮತ್ತು 21 ರನ್‌ಗಳನ್ನು ಗಳಿಸಿ, ವೈಫಲ್ಯ ಅನುಭವಿಸಿದ್ದಾರೆ. ನಿನ್ನೆ ಶ್ರೀಲಂಕಾ 'ಎ' ತಂಡದ ವಿರುದ್ಧ ನಡೆದ ರೋಚಕ ಪಂದ್ಯದಲ್ಲಿ, ಸೂಪರ್ ಓವರ್‌ನಲ್ಲಿ ಭಾರತ 'ಎ' ತಂಡವು ಕೇವಲ 8 ರನ್‌ಗಳ ಅಂತರದಿಂದ ಸೋಲನ್ನು ಅನುಭವಿಸಿತು.