ಆಂಗ್ಲರ ಎದುರೂ ಫ್ಲಾಪ್​ ಶೋ​! ಯುವ ಬ್ಯಾಟಿಂಗ್​ ಸೆನ್ಸೇಷನ್ ವಿಚಾರದಲ್ಲಿ ಮತ್ತದೇ ಮಿಸ್ಟೇಕ್​ಗೆ ರೆಡಿಯಿಲ್ಲ ಗೌತಿ

ಯುವ ಬ್ಯಾಟಿಂಗ್​ ಸೆನ್ಸೇಷನ್ ವಿಚಾರದಲ್ಲಿ ಮತ್ತದೇ ಮಿಸ್ಟೇಕ್​ಗೆ ರೆಡಿಯಿಲ್ಲ ಗೌತಿ
ಯುವ ಬ್ಯಾಟಿಂಗ್​ ಸೆನ್ಸೇಷನ್ ವಿಚಾರದಲ್ಲಿ ಮತ್ತದೇ ಮಿಸ್ಟೇಕ್​ಗೆ ರೆಡಿಯಿಲ್ಲ ಗೌತಿ
Published on

ಪ್ರಮುಖ ಮುಖ್ಯಾಂಶಗಳು

  • ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಸಂಜು ಸ್ಯಾಮ್ಸನ್​ ಮತ್ತೊಮ್ಮೆ ವಿಫಲ
  • ಆಡಿದ 7 ಎಸೆತಗಳಲ್ಲಿ ಒಂದು ರನ್ ಅಷ್ಟೇ
  • 2ನೇ ಟಿ20 ಪಂದ್ಯದಲ್ಲಿ ಕಡೆಗೂ ವೈಭವ್​ಗೆ​ ಚಾನ್ಸ್?​
Vaibhav Sooryavanshi: ಐರ್ಲೆಂಡ್​ ಎದುರು ಎರಡು ಪಂದ್ಯಗಳ ಟಿ20 ಸರಣಿಯನ್ನು ಹೀನಾಯವಾಗಿ ಸೋತ ಟೀಮ್ ಇಂಡಿಯಾ, ಈಗ ಆಂಗ್ಲರ ನಾಡಿನಲ್ಲಿ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಮೊದಲ ಮ್ಯಾಚ್​ನಲ್ಲಿಯೂ ಕಳಪೆ ಪ್ರದರ್ಶನ ಮುಂದುವರಿಸಿದೆ.
ಇಂಗ್ಲೆಂಡ್​ನ ಚೆಸ್ಟರ್-ಲೆ-ಸ್ಟ್ರೀಟ್‌ನ ರಿವರ್‌ಸೈಡ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕ ಶ್ರೇಯಸ್ ಅಯ್ಯರ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಐರ್ಲೆಂಡ್​ ಸರಣಿಯಲ್ಲಿ ಮಾಡಿದ ಮಿಸ್ಟೇಕ್​ ಅನ್ನು ಆಂಗ್ಲರ ವಿರುದ್ಧ ರಿಪೀಟ್​ ಮಾಡುವುದಿಲ್ಲ. ಬದಲಿಗೆ ಕ್ರಿಕೆಟ್​ ದಿಗ್ಗಜನ ದಾಖಲೆ ಮುರಿಯಲು ತುದಿಗಾಲಿನಲ್ಲಿರುವ ಯುವ ಬ್ಯಾಟಿಂಗ್ ಸೆನ್ಸೇಷನ್​ ವೈಭವ್ ಸೂರ್ಯವಂಶಿಗೆ ಅವಕಾಶ ನೀಡುತ್ತಾರೆ ಎಂದೇ ನಿರೀಕ್ಷಿಸಲಾಗಿತ್ತು. ಆದರೆ, ಗಂಭೀರ್​ ಪಡೆ ಮತ್ತದೇ ತಪ್ಪು ಮಾಡಿದ್ದು ಸಿಡಿಮಿಡಿಗೆ ಕಾರಣವಾಗಿದೆ.  
ಐರ್ಲೆಂಡ್​ ಎದುರು ಅತ್ಯಂತ ಕಳಪೆ ಪ್ರದರ್ಶನ ನೀಡಿದರೂ ಇಂಗ್ಲೆಂಡ್​ ಸರಣಿಯ ತಂಡದಿಂದ ಮತ್ತೆ 15 ವರ್ಷದ ವೈಭವ್​ರನ್ನು ಪ್ಲೇಯಿಂಗ್​ 11ರಿಂದ ಕೈಬಿಡಲಾಯಿತು. ಇದು ಕ್ರಿಕೆಟ್​ ಪ್ರಿಯರ ಭಾರಿ ಅಸಮಾಧಾನಕ್ಕೆ ಕಾರಣವಾಗಿದೆ. ಸದ್ಯ ಈ ವಿಷಯ ಕ್ರಿಕೆಟ್​ ವಲಯದಲ್ಲಿ ಚರ್ಚೆಗೂ ಗ್ರಾಸವಾಗಿದೆ. ಓಪನರ್​ ಆಗಿ ತಂಡದ ಪರ ಬ್ಯಾಟಿಂಗ್​ಗೆ ಇಳಿಯುತ್ತಿರುವ ಸಂಜು ಸ್ಯಾಮ್ಸನ್​ ಮತ್ತು ಅಭಿಷೇಕ್ ಶರ್ಮ ಪೈಕಿ ಅಭಿಷೇಕ್​ ಅರ್ಧಶತಕ ಸೇರಿ ಸಿಕ್ಸರ್​ಗಳನ್ನು ಸಿಡಿಸಿ, ಕನಿಷ್ಠ ತಂಡದ ಮೊತ್ತವನ್ನು ಹೆಚ್ಚಿಸಿದ್ದಾರೆ. ಆದರೆ, ಸ್ಯಾಮ್ಸನ್​ ಫ್ಲಾಪ್​ ಶೋ ನೀಡುವುದನ್ನು ಮುಂದುವರಿಸಿರುವುದು ಹಲವರನ್ನು ಕೆರಳಿಸಿದೆ.

2 ಪಂದ್ಯಗಳಲ್ಲಿ 5, 0...

ಐರ್ಲೆಂಡ್ ಸರಣಿಯಲ್ಲಿ ಆರಂಭಿಕರಾಗಿ ಕಣಕ್ಕಿಳಿದ ಸಂಜು ಸ್ಯಾಮ್ಸನ್, ನಿರೀಕ್ಷೆಯಂತೆ ಪ್ರದರ್ಶನ ನೀಡಲಿಲ್ಲ. ಆಡಿದ ಎರಡು ಪಂದ್ಯಗಳಲ್ಲಿ 5, ಶೂನ್ಯಕ್ಕೆ ಮತ್ತು ಆಂಗ್ಲರ ಎದುರು ಮೊದಲ ಮ್ಯಾಚ್​ನಲ್ಲಿ 2 ರನ್ ಗಳಿಸಿ ಔಟ್​ ಆದರು​, ಅಭಿಷೇಕ್ ಶರ್ಮಾ 49 ಮತ್ತು ಡಕ್​ಔಟ್​ ಮತ್ತು 59 ರನ್​ ಗಳಿಸಿದ್ದಾರೆ. ಇಷ್ಟಾದರೂ ಮ್ಯಾನೇಜ್​ಮೆಂಟ್ ಮಾತ್ರ ಕಳಪೆ ಫಾರ್ಮ್​ನಲ್ಲಿರುವ ಸಂಜುಗೆ ಅವಕಾಶ ಕೊಟ್ಟಿರುವುದು ಸದ್ಯ ಕ್ರಿಕೆಟ್​ ಅಭಿಮಾನಿಗಳಿಗೆ ಸರಿಯಾದ ನಿರ್ಧಾರ ಅನಿಸಿಲ್ಲ. ಹೀಗಾಗಿ, ಇಂಗ್ಲೆಂಡ್ ವಿರುದ್ಧದ ಎರಡನೇ ಟಿ20ಯಲ್ಲಿ ವೈಭವ್​ರನ್ನು ಕರೆತರಲೇಬೇಕು ಎಂದು ಜಾಲತಾಣಗಳಲ್ಲಿ ಪಟ್ಟು ಹಿಡಿದಿದ್ದಾರೆ.

ಸಂಜು ಬದಲಿಗೆ ವೈಭವ್ ಅಖಾಡಕ್ಕೆ?

ಸಂಜು ಸ್ಯಾಮ್ಸನ್ ಮತ್ತೊಮ್ಮೆ ಫ್ಲಾಪ್​ ಆಗಿರುವ ಕಾರಣ, ವೈಭವ್ ಸೂರ್ಯವಂಶಿ ಪದಾರ್ಪಣೆ ಬಹುತೇಕ ಖಚಿತ ಎನ್ನಲಾಗಿದೆ. ಸತತ ಮೂರು ಪಂದ್ಯಗಳಲ್ಲಿ ನಿರಾಶೆ ಮೂಡಿಸಿರುವ ಸಂಜು, ಎರಡನೇ ಟಿ20ಯಲ್ಲಿ ಆಡುವುದು ಕಷ್ಟಸಾಧ್ಯ. ಸಂಜು ಉತ್ತಮ ಪ್ರದರ್ಶನ ನೀಡಿದ್ದರೆ, ಸೂರ್ಯವಂಶಿಗೆ ಚಾನ್ಸ್​ ಮುಂದೋಗುವ ಸಾಧ್ಯತೆಗಳು ಹೆಚ್ಚಿತ್ತು. ಆದರೀಗ ಪರಿಸ್ಥಿತಿ ಸಂಪೂರ್ಣವಾಗಿ ಬದಲಾಗಿದೆ. ಎರಡನೇ ಟಿ20ಯಲ್ಲಿ ವೈಭವ್ ಅವರ ಚೊಚ್ಚಲ ಎಂಟ್ರಿ ಖಚಿತ ಎಂದು ಹೇಳಲಾಗುತ್ತಿದೆ. ಇದೇನಾದರೂ ಗ್ಯಾರಂಟಿಯಾದರೆ, ಆಂಗ್ಲರ ಮಣ್ಣಿನಲ್ಲಿ ಸಚಿನ್ ತೆಂಡೂಲ್ಕರ್ ಅವರ ಅಪರೂಪದ ದಾಖಲೆ ಸೇರಿ ಇನ್ನೂ ಕೆಲವು ರೆಕಾರ್ಡ್​ಗಳನ್ನು ವಂಡರ್​ ಕಿಡ್​ ಮುರಿಯಲಿದ್ದಾರೆ. ಅಷ್ಟಕ್ಕೂ ವೈಭವ್​ಗೆ ಮ್ಯಾನೇಜ್​ಮೆಂಟ್​ ಅವಕಾಶ ಕೊಡಲಿದ್ದಾರಾ ಅಥವಾ ಮತ್ತೊಮ್ಮೆ ಅದೇ ಮಿಸ್ಟೇಕ್​ ಮಾಡಿ, ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಲಿದ್ದಾರಾ ಎಂಬುದನ್ನು ಕಾದು ನೋಡಬೇಕಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net