ಭಾರತ ತಂಡ ಈಗಾಗಲೇ ಯುನೈಟೆಡ್ ಕಿಂಗ್ಡಮ್ ತಲುಪಿದ್ದು, ಮೊದಲು ಐರ್ಲೆಂಡ್ ವಿರುದ್ಧ ಜೂನ್ 26 ಮತ್ತು 28 ರಂದು ಬೆಲ್‌ಫಾಸ್ಟ್‌ನಲ್ಲಿ ಎರಡು ಟಿ20 ಪಂದ್ಯಗಳನ್ನು ಆಡಲಿದೆ. ತದನಂತರ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದ್ದು, ಅಲ್ಲಿ 5 ಟಿ20 ಮತ್ತು 3 ಏಕದಿನ ಪಂದ್ಯಗಳನ್ನು ಆಡಲಿದೆ. ಜುಲೈ 1 ರಂದು ಚೆಸ್ಟರ್-ಲೆ-ಸ್ಟ್ರೀಟ್‌ನಲ್ಲಿ ಮೊದಲ ಟಿ20 ಪಂದ್ಯ ನಡೆಯಲಿದ್ದು, ನಂತರ ಜುಲೈ 4 (ಮ್ಯಾಂಚೆಸ್ಟರ್), ಜುಲೈ 7 (ನಾಟಿಂಗ್‌ಹ್ಯಾಮ್), ಜುಲೈ 9 (ಬ್ರಿಸ್ಟಲ್) ಮತ್ತು ಜುಲೈ 11 ರಂದು (ಸೌತಾಂಪ್ಟನ್) ಉಳಿದ ಟಿ20 ಪಂದ್ಯಗಳು ಜರುಗಲಿವೆ(ಏಜೆನ್ಸೀಸ್).