ದೇವದತ್ತ್ ಪಡಿಕ್ಕಲ್ ಅದ್ಭುತ ಇನ್ನಿಂಗ್ಸ್ ಆಡಿದರು. ನಾನು ಆರಂಭದಿಂದಲೂ ಪವರ್ಪ್ಲೇನಲ್ಲಿ ಆಕ್ರಮಣಕಾರಿಯಾಗಿ ಆಡಲು ಬಯಸಿದ್ದೆ. ಆದರೆ, ಪಡಿಕ್ಕಲ್ ಆಡುವ ರೀತಿಯನ್ನು ನೋಡಿ, ನಾನು ಅವರಿಗೆ ಸ್ಟ್ರೈಕ್ ನೀಡಲು ಮತ್ತು ಮಧ್ಯದಲ್ಲಿ ಬೌಂಡರಿಗಳನ್ನು ಹೊಡೆಯಲು ನಿರ್ಧರಿಸಿದೆ. ಪಡಿಕ್ಕಲ್ ಅವರು ಎದುರಾಳಿಗಳ ಕೈಯಿಂದ ಪಂದ್ಯವನ್ನು ಸಂಪೂರ್ಣವಾಗಿ ಕಸಿದುಕೊಂಡರು. ಮಿಡ್-ಆನ್ನಲ್ಲಿ ನಿಧಾನಗತಿಯ ಚೆಂಡನ್ನೂ ಸಿಕ್ಸರ್ಗೆ ಹೊಡೆದರು. ನಂತರ ನಾನು ಪಡಿಕ್ಕಲ್ ಬಳಿ ಹೋಗಿ, 'ಇದೇ ರೀತಿ ಆಟ ಮುಂದುವರಿಸಿ, ನೀವು ಅದ್ಭುತವಾಗಿ ಆಡುತ್ತಿದ್ದೀರಿ' ಎಂದು ಹೇಳಿದೆ. ಪಂದ್ಯವು 25 ರಿಂದ 26 ಎಸೆತಗಳು ಬಾಕಿ ಇರುವಾಗಲೇ ಕೊನೆಗೊಂಡರೆ, ಅದು ನೆಟ್ ರನ್ ರೇಟ್ಗೆ ಸಹ ಉಪಯುಕ್ತವಾಗುತ್ತದೆ ಎಂದು ಹೇಳಿದೆ. ಅವರ ಟೈಮಿಂಗ್, ಹೆಡ್ ಪೊಸಿಷನ್ ಮತ್ತು ಸಮತೋಲನ ಅದ್ಭುತವಾಗಿದೆ. ಆತ್ಮವಿಶ್ವಾಸವಿದ್ದರೆ ಬ್ಯಾಟ್ನೊಂದಿಗೆ ಹೇಗೆ ಆಡಬಹುದೆಂದು ನನಗೆ ತಿಳಿದಿದೆ. ಅದಕ್ಕೆ ಪಡಿಕ್ಕಲ್ ಅವರ ಪ್ರತಿಭೆಗೆ ಉತ್ತಮ ಉದಾಹರಣೆ ಎಂದು ಕೊಹ್ಲಿ ಹೊಗಳಿದರು.