ಐಪಿಎಲ್​ನಲ್ಲಿ ಅಂಬಾನಿ ಕುಟುಂಬಕ್ಕೆ ಸಿಗುವ ಸೋಫಾ ಭಾಗ್ಯ ಉಳಿದ ಮಾಲೀಕರಿಗೆ ಏಕಿಲ್ಲ? ಅಚ್ಚರಿ ಕಾರಣ ಇಲ್ಲಿದೆ...Ambani Family

ಐಪಿಎಲ್​ನಲ್ಲಿ ಅಂಬಾನಿ ಕುಟುಂಬಕ್ಕೆ ಸಿಗುವ ಸೋಫಾ ಭಾಗ್ಯ ಉಳಿದ ಮಾಲೀಕರಿಗೆ ಏಕಿಲ್ಲ? ಅಚ್ಚರಿ ಕಾರಣ ಇಲ್ಲಿದೆ...Ambani Family
ಐಪಿಎಲ್​ನಲ್ಲಿ ಅಂಬಾನಿ ಕುಟುಂಬಕ್ಕೆ ಸಿಗುವ ಸೋಫಾ ಭಾಗ್ಯ ಉಳಿದ ಮಾಲೀಕರಿಗೆ ಏಕಿಲ್ಲ? ಅಚ್ಚರಿ ಕಾರಣ ಇಲ್ಲಿದೆ...Ambani Family
Published on

ಪ್ರಮುಖ ಮುಖ್ಯಾಂಶಗಳು

  • ಮುಂಬೈ ಇಂಡಿಯನ್ಸ್‌ನ ಮಾಲೀಕರಾದ ಅಂಬಾನಿ ಕುಟುಂಬದ ಬಗ್ಗೆ ಒಂದು ಕುತೂಹಲಕಾರಿ ಸಂಗತಿ ವೈರಲ್​ ಆಗಿದೆ
  • ಅಂಬಾನಿ ಕುಟುಂಬ ಪಂದ್ಯ ವೀಕ್ಷಿಸಲು ಬಂದಾಗಲೆಲ್ಲ ಡಗೌಟ್​ನಲ್ಲಿ ಸೋಫಾ ವ್ಯವಸ್ಥೆ ಮಾಡಲಾಗುತ್ತದೆ
  • ಬೇರೆ ತಂಡದ ಮಾಲೀಕರಿಗೆ ಇಲ್ಲದ ಈ ವ್ಯವಸ್ಥೆ ಅಂಬಾನಿ ಫ್ಯಾಮಿಲಿಗೆ ಮಾತ್ರ ಏಕೆ ಎಂಬ ಪ್ರಶ್ನೆ ಇದೆ
  • ಅಂಬಾನಿ ಕುಟುಂಬಕ್ಕೆ ಸಿಕ್ಕಿರುವ ಸೋಫಾ ಭಾಗ್ಯದ ಹಿಂದೆ ಒಂದು ಕಾರಣವೂ ಇದೆ
Ambani Family : ಬಹುನಿರೀಕ್ಷಿತ 19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಮಾರ್ಚ್ 28ರಿಂದ ಆರಂಭವಾಗಿದೆ. ಇಲ್ಲಿಯವರೆಗೆ ಮೂರು ಪಂದ್ಯಗಳು ಪೂರ್ಣಗೊಂಡಿದ್ದು, ಮೂರು ಪಂದ್ಯಗಳು ಭರ್ಜರಿ ಮನರಂಜನೆ ನೀಡಿವೆ. ಇದೇ ಸಂದರ್ಭದಲ್ಲಿ ಮುಂಬೈ ಇಂಡಿಯನ್ಸ್‌ನ ಮಾಲೀಕರಾದ ಅಂಬಾನಿ ಕುಟುಂಬದ ಬಗ್ಗೆ ಒಂದು ಕುತೂಹಲಕಾರಿ ಸಂಗತಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 
ಐಪಿಎಲ್​ನಲ್ಲಿ ಒಟ್ಟು 10 ಫ್ರಾಂಚೈಸಿಗಳಿರುವುದು ನಿಮಗೆಲ್ಲರಿಗೂ ಗೊತ್ತೇ ಇದೆ. ಎಲ್ಲ ಫ್ರಾಂಚೈಸಿಯ ಮಾಲೀಕರು ಪಂದ್ಯದ ವೇಳೆ ಭಾಗಿಯಾಗುತ್ತಾರೆ. ಆದರೆ, ಮುಂಬೈ ಇಂಡಿಯನ್ಸ್​ ತಂಡದ ಮಾಲೀಕರಾದ ಅಂಬಾನಿ ಕುಟುಂಬ ಪಂದ್ಯ ವೀಕ್ಷಿಸಲು ಬಂದಾಗಲೆಲ್ಲ ಡಗೌಟ್​ನಲ್ಲಿ ಸೋಫಾ ವ್ಯವಸ್ಥೆ ಮಾಡಲಾಗುತ್ತದೆ. ಬೇರೆ ತಂಡದ ಮಾಲೀಕರಿಗೆ ಇಲ್ಲದ ಈ ವ್ಯವಸ್ಥೆ ಅಂಬಾನಿ ಫ್ಯಾಮಿಲಿಗೆ ಮಾತ್ರ ಏಕೆ ಎಂಬ ಪ್ರಶ್ನೆಯೂ ಇದೆ. ಆ ಪ್ರಶ್ನೆಗೆ ಇದೀಗ ಉತ್ತರವೂ ಸಿಕ್ಕಿದೆ. 
ಅಂದಹಾಗೆ, ತಮ್ಮ ತಂಡದ ಪಂದ್ಯಗಳು ನಡೆದಾಗಲೆಲ್ಲ ನೀತಾ ಅಂಬಾನಿ, ಅವರ ಪುತ್ರರಾದ ಆಕಾಶ್ ಮತ್ತು ಅನಂತ್ ಅಂಬಾನಿ ಸೋಫಾಗಳ ಮೇಲೆ ಕುಳಿತು ವೀಕ್ಷಣೆ ಮಾಡುತ್ತಾರೆ. ಪ್ರತಿ ಐಪಿಎಲ್​ ಟೂರ್ನಿಯಲ್ಲೂ ಈ ದೃಶ್ಯ ಸಾಮಾನ್ಯವಾಗಿದೆ. ಮುಕೇಶ್​ ಅಂಬಾನಿ ಕೂಡ ಪಂದ್ಯವನ್ನು ವೀಕ್ಷಿಸಲು ಬಂದಾಗ, ಹೆಚ್ಚಾಗಿ ಸೋಫಾಗಳ ಮೇಲೆ ಕಾಣಿಸಿಕೊಳ್ಳುತ್ತಾರೆ. 

ಕಾರಣ ಏನು?

ಅಂಬಾನಿ ಕುಟುಂಬಕ್ಕೆ ಸಿಕ್ಕಿರುವ ಸೋಫಾ ಭಾಗ್ಯದ ಹಿಂದೆ ಒಂದು ಕಾರಣವೂ ಇದೆ. ಅದೇನೆಂಧರೆ, ಅಂಬಾನಿ ಕುಟುಂಬಕ್ಕೆ Z ಪ್ಲಸ್ ಭದ್ರತೆ ಇದೆ. ಹೀಗಾಗಿ, ಅವರು VIP ಬಾಕ್ಸ್‌ಗಳಾಗಲಿ ಅಥವಾ ಗ್ಯಾಲರಿಗಳಲ್ಲಿ ಕುಳಿತರೆ, ಏನಾದರೂ ಅವಘಢ ಅಥವಾ ಅಪಾಯ ಸಂಭವಿಸುವ ಸಾಧ್ಯತೆ ಇರುತ್ತದೆ. ದೇಶದ ನಂಬರ್​ 1 ಶ್ರೀಮಂತ ಉದ್ಯಮ ಕುಟುಂಬವಾಗಿದ್ದು, ಲಕ್ಷಾಂತರ ಕುಟುಂಬಗಳಿಗೆ ಆಧಾರ ಸ್ತಂಭವಾಗಿದೆ. ಹೀಗಾಗಿ, ಈ ಕುಟುಂಬಕ್ಕೆ ಕೇಂದ್ರ ಸರ್ಕಾರವು Z ಪ್ಲಸ್ ಭದ್ರತೆಯನ್ನು ಒದಗಿಸಿದೆ. ಅದಕ್ಕಾಗಿಯೇ ಸೋಫಾಗಳನ್ನು ಡಗೌಟ್‌ನ ಹತ್ತಿರ ಇರಿಸಿ ಕುಳಿತುಕೊಳ್ಳುವಂತೆ ಮಾಡಲಾಗುತ್ತದೆ. ಇದರಿಂದ ಯಾವುದೇ ಭದ್ರತಾ ಸಮಸ್ಯೆಗಳು ಉಂಟಾಗುವುದಿಲ್ಲ. ಅಲ್ಲದೆ, ಎಚ್ಚರಿಕೆಯಿಂದ ರಕ್ಷಿಸಬಹುದು.

ಇನ್ನೊಂದು ಕಾರಣವಿದೆ....

ಇನ್ನು ಮುಂಬೈ ಇಂಡಿಯನ್ಸ್ ತಂಡದ ಮಾಲಕಿ ನೀತಾ ಅಂಬಾನಿ ಅವರು ಆಟಗಾರರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿರುತ್ತಾರೆ. ಪಂದ್ಯ ಗೆಲ್ಲಲು ಅವರು ಪ್ರತಿ ಕ್ಷಣದಲ್ಲೂ ಆಟಗಾರರಿಗೆ ನಿರ್ದೇಶನ ನೀಡುತ್ತಾರೆ. ಈ ಕ್ರಮದಲ್ಲಿ, ವಿಐಪಿ ಬಾಕ್ಸ್‌ಗಳಲ್ಲಿ ಕುಳಿತರೆ ತಂಡವನ್ನು ಒಟ್ಟಿಗೆ ಮುನ್ನಡೆಸುವುದು ಕಷ್ಟವೆಂದು ಭಾವಿಸಿ ಕ್ರೀಡಾಂಗಣದಲ್ಲೇ ಸೋಫಾಗಳನ್ನು ಜೋಡಿಸಿ ಅಲ್ಲಿಯೇ ಕುಳಿತುಕೊಳ್ಳುತ್ತಾರೆ. ಅದು ಆಟಗಾರರೊಂದಿಗೆ ಸಮನ್ವಯ ಸಾಧಿಸಲು ಸುಲಭವಾಗುತ್ತದೆ. ಅದಕ್ಕಾಗಿಯೇ ಮುಂಬೈ ಇಂಡಿಯನ್ಸ್ ಇಲ್ಲಿಯವರೆಗೆ ಐದು ಪ್ರಶಸ್ತಿಗಳನ್ನು ಗೆದ್ದಿದೆ. ಈ ಬಾರಿಯೂ ಪ್ರಶಸ್ತಿ ಗೆಲ್ಲುವ ನಿರೀಕ್ಷೆ ಇಟ್ಟುಕೊಂಡಿದೆ. 
ಆದಾಗ್ಯೂ, ಇತರ ತಂಡಗಳ ಮಾಲೀಕರು ವಿಐಪಿ ಬಾಕ್ಸ್‌ಗಳಲ್ಲಿ ಕುಳಿತು ಪಂದ್ಯವನ್ನು ವೀಕ್ಷಿಸುತ್ತಾರೆ. ಅಂಬಾನಿ ಕುಟುಂಬದವರಂತೆ ಯೋಚಿಸುವ ಬದಲು, ಅವರು ತಮ್ಮ ತಂಡವನ್ನು ಮುನ್ನಡೆಸಲು ವಿಶೇಷ ತರಬೇತುದಾರರನ್ನು ನೇಮಿಸುತ್ತಾರೆ. ಇದರಿಂದಾಗಿ, ಇತರ ಫ್ರಾಂಚೈಸಿಗಳು ಶೇ. 100 ರಷ್ಟು ಫಲಿತಾಂಶಗಳನ್ನು ಸಾಧಿಸಲು ಸಾಧ್ಯವಾಗಿಲ್ಲ ಅನ್ನೋದು ಕೆಲವರ ಅಭಿಪ್ರಾಯವಾಗಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net