

ಕ್ರಿಕೆಟ್: ಭಾರತದಲ್ಲಿ ಐಪಿಎಲ್ ಎಂದರೆ ಅದೊಂದು ಕೇವಲ ಕ್ರಿಕೆಟ್ ಟೂರ್ನಿ ಮಾತ್ರವಲ್ಲ ಬದಲಾಗಿ ಅದನ್ನೊಂದು ಕ್ರಿಕೆಟ್ ಹಬ್ಬವೆಂಬಂತೆ ಈಡೀ ದೇಶ ಸಂಭ್ರಮಿಸುತ್ತದೆ. ಹಾಗೆಯೇ ಕ್ರಿಕೆಟ್ ಆಟಗಾರರನ್ನು ದೇವರ ಸ್ಥಾನದಲ್ಲಿಟ್ಟು ನೋಡುವವರ ಸಂಖ್ಯೆ ಕೂಡ ಅಧಿಕವಾಗಿಯೇ ಇದೆ.
ಈ ಎಲ್ಲದರ ನಡುವೆ ಈಗ, ಐಪಿಎಲ್ನ ಹಾಟ್ ಫೆವರೇಟ್ ಟೀಮ್ಗಳಲ್ಲಿ ಒಂದಾಗಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ನಿವೃತ್ತಿ ಘೋಷಿಸಿರುವ ಸುದ್ದಿ, ಅವರ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದ್ದರೂ, ನಿವೃತ್ತಿ ಬಳಿಕ ಸಿಎಸ್ಕೆ ತಂಡಕ್ಕೆ ಮೆಂಟರ್ ಆಗಿ ಕೆಲಸ ಮಾಡುತ್ತಾರೆ ಎನ್ನುವುದು ಸಮಾಧಾನಕರ ಸಂಗತಿಯಾಗಿದೆ. ಆದರೆ, ಕಳೆದ 19 ವರ್ಷಗಳಿಂದ ಧೋನಿಯನ್ನು ಮೈದಾನದಲ್ಲಿ ಬ್ಯಾಟ್ ಹಿಡಿದು ಮತ್ತು ವಿಕೇಟ್ ಕೀಪಿಂಗ್ ಗ್ಲೌಸ್ನೊಂದಿಗೆ ನೋಡುತ್ತಿದ್ದವರಿಗೆ, ಧೋನಿ ಇನ್ನು ಕೆಲ ಕಾಲ ಆಡಬೇಕಿತ್ತೆಂಬ ಭಾವನೆ ಖಂಡಿತವಾಗಿಯೂ ಇದೆ.
ಆದರೆ, ಧೋನಿ ಈಗ ದಿಢೀರನೆ ನಿವೃತ್ತಿ ಘೋಷಿಸಿದ್ದು ಏಕೆ? ಏನಾದರೂ ಆರೋಗ್ಯ ಸಮಸ್ಯೆ ಇತ್ತೆ? ಅಥವಾ ಮ್ಯಾನೇಜ್ಮೆಂಟ್ನಿಂದ ಒತ್ತಡವಿತ್ತೇ? ಇಲ್ಲವೇ ಮನೆಯಲ್ಲೇನಾದರೂ ಸಮಸ್ಯೆ ಇದೆಯೇ? ಎಂಬೆಲ್ಲಾ ಪ್ರಶ್ನೆಗಳು ಧೋನಿ ಅಭಿಮಾನಿಗಳಲ್ಲಿ ಕಾಡುತ್ತಿದ್ದು, ಇದಕ್ಕೆ ಅವರ ಆಪ್ತ ಸ್ನೇಹಿತ ಮಾಜಿ ಟೀಮ್ ಇಂಡಿಯಾ ಆಟಗಾರ ಸುರೇಶ್ ರೈನಾ ಸ್ಪಷ್ಟನೆ ನೀಡಿದ್ದಾರೆ.
ಸಿಎಸ್ಕೆ ತಂಡಕ್ಕೆ ಮಹೇಂದ್ರ ಸಿಂಗ್ ಧೋನಿ ನಿವೃತ್ತಿ ಘೋಷಿಸಿದ ಬಳಿಕ ಅವರ ಆಪ್ತ ಸ್ನೇಹಿತ ಸುರೇಶ್ ರೈನಾ, ಧೋನಿ ಏಕೆ ಈಗಲೇ ನಿವೃತ್ತಿ ಘೋಷಿಸಿದರು ಎಂದು ತಿಳಿಸಿದ್ದಾರೆ. ಮಹಿ ಕಳೆದ ಹಲವು ವರ್ಷಗಳಿಂದ ಮಂಡಿ ನೋವಿನ ಸಮಸ್ಯೆಯಿಂದ ಬಳಲುತ್ತಿದ್ದಾನೆ. ಅವನ ಎರಡು ಮಂಡಿಗಳು ಪದೇ-ಪದೇ ಊತಕ್ಕೆ ಒಳಗಾಗುತ್ತಿವೆ. ಇದರಿಂದ ಅವನಿಗೆ ಸರಿಯಾಗಿ ಬ್ಯಾಟಿಂಗ್ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಅವರು ತಿಳಿಸಿದ್ದಾರೆ.
ಧೋನಿ ಐಪಿಎಲ್ನ ಹೊರತಾಗಿ, ಇತರ ಲೋಕಲ್ ಟೂರ್ನಿಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಆದರೆ, ಅಲ್ಲೂ ಸಹ ಅವನಿಗೆ ವಿಪರೀತ ಮಂಡಿ ನೋವು ಕಾಣಿಸಿಕೊಳ್ಳುತ್ತದೆ. ಅವನು ಜಿಮ್ನಲ್ಲಿ, ಆಸ್ಪತ್ರೆಯಲ್ಲಿ ಸಾಕಷ್ಟು ಕಷ್ಟ ಪಟ್ಟಿದ್ದಾನೆ. ಆದರೆ, ಅದನ್ನು ಎದುರಿಸಲು ಅವನಲ್ಲಿ ಸಾಧ್ಯವಾಗುತ್ತಿಲ್ಲ ಎಂದು ರೈನಾ ಗುಟ್ಟನ್ನು ರಟ್ಟು ಮಾಡಿದ್ದಾರೆ. ಧೋನಿ ಸುಧೀರ್ಘವಾಗಿ ವಿಕೆಟ್ ಕೀಪಿಂಗ್ ಮಾಡಿದ್ದೇ ಈ ಮಂಡಿ ನೋವಿಗೆ ಕಾರಣ ಎನ್ನವುದು ರೈನಾ ಅವರ ಸ್ಪಷ್ಟನೆಯಾಗಿದೆ. ಈ ಮಂಡಿ ನೋವಿನ ಕಾರಣಕ್ಕಾಗಿಯೇ ಧೋನಿ ಮೈದಾನದಿಂದ ಹೊರ ನಡೆಯಲು ನಿರ್ಧಾರ ಮಾಡಿದ್ದಾರೆಂದು ಅವರು ತಿಳಿಸಿದ್ದಾರೆ.
2008 ರಲ್ಲಿ ಐಪಿಎಲ್ ಪ್ರಾರಂಭವಾದಗನಿಂದ ಇಲ್ಲಿಯವರೆಗೆ ಧೋನಿಯ ಖ್ಯಾತಿಗೆ ಒಂದಿಷ್ಟು ಪೆಟ್ಟು ಬಿದ್ದಿಲ್ಲ. ಒಂದು ಸಮಯದಲ್ಲಿ ಧೋನಿಯ ಆಟವನ್ನು ನೋಡುವುದಕ್ಕಾಗಿಗೆ ಜನ ಐಪಿಎಲ್ ಅನ್ನು ನೋಡುತ್ತಿದ್ದರು. ಧೋನಿ ಸಿಎಸ್ಕೆ ತಂಡ ಹಾಗೂ ಐಪಿಎಲ್ನ ಬೆಳವಣಿಗೆಗೆ ಬಹಳ ಪ್ರಮುಖ ಪಾತ್ರವಹಿಸಿದ್ದು ಮಹಿ ಐಪಿಎಲ್ ಕಂಡ ದೊಡ್ಡ ಬ್ರ್ಯಾಂಡ್ ಆಗಿದ್ದಾನೆಂದು ಸುರೇಶ್ ರೈನಾ ಹೊಗಳಿದ್ದಾರೆ, (ಏಜೆನ್ಸೀಸ್).