ಮೊಣಕಾಲಿನ ಗಾಯದ ಸಮಸ್ಯೆಯಿಂದ ಸುಧಾರಿಸಿಕೊಳ್ಳುತ್ತಿರುವ ಬುಮ್ರಾ ಜುಲೈ 30ರವರೆಗೆ ವಿಶ್ರಾಂತಿ ಪಡೆಯಲಿದ್ದು, ನಂತರ ಬಿಸಿಸಿಐ ಶ್ರೇಷ್ಠತಾ ಕೇಂದ್ರದಲ್ಲಿ (ಸಿಒಇ) ಫಿಟ್ನೆಸ್ ಟೆಸ್ಟ್ ಎದುರಿಸಲಿದ್ದಾರೆ. ಸರಣಿಗೆ ಬುಮ್ರಾ ಅಲಭ್ಯರಾದರೆ, ವೇಗಿಗಳಾಗಿ ಮೊಹಮದ್ ಸಿರಾಜ್, ಗುರುನೂರ್ ಬ್ರಾರ್‌ಮತ್ತು ಪ್ರಸಿದ್ಧ ಕೃಷ್ಣ ಸ್ಥಾನ ಪಡೆಯುವ ನಿರೀಕ್ಷೆಯಿದೆ. 2025ರ ಇಂಗ್ಲೆಂಡ್ ಪ್ರವಾಸದಲ್ಲಿ ಉತ್ತಮ ನಿರ್ವಹಣೆ ತೋರಿದ್ದ ವೇಗಿ ಆಕಾಶ್ ದೀಪ್, ‘ರಿಟರ್ನ್ ಟು ಪ್ಲೇ’ ಪ್ರೋಟೋಕಾಲ್ ಪೂರೈಸಬೇಕಿದ್ದು, ಆಯ್ಕಗೆ ಅಲಭ್ಯರಾಗಿದ್ದಾರೆ.