IPL ಇತಿಹಾಸದ 'ಅಧಿಪತಿ' ಯಾರು? ಸಿಎಸ್‌ಕೆ ಅಥವಾ ಆರ್‌ಸಿಬಿ ಅಲ್ಲ; ಅತಿ ಹೆಚ್ಚು ಪಂದ್ಯ ಗೆದ್ದ ದಾಖಲೆ ಈ ತಂಡದ ಹೆಸರಲ್ಲಿದೆ!

IPL 2026
IPL 2026
Published on
ಬೆಂಗಳೂರು: ಐಪಿಎಲ್ 2026ರ(IPL 2026) ಹಂಗಾಮು ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಈ ನಡುವೆ ಕ್ರಿಕೆಟ್ ಅಭಿಮಾನಿಗಳಲ್ಲಿ ಐಪಿಎಲ್ ಇತಿಹಾಸದ ಅತ್ಯಂತ ಬಲಿಷ್ಠ ತಂಡ ಯಾವುದು ಎಂಬ ಚರ್ಚೆ ಜೋರಾಗಿದೆ. ಟ್ರೋಫಿ ಗೆಲ್ಲುವಲ್ಲಿ ಸಿಎಸ್‌ಕೆ ಮತ್ತು ಎಂಐ ಸಮಬಲ ಸಾಧಿಸಿದ್ದರೂ, ಗೆಲುವಿನ ಸಂಖ್ಯೆಯಲ್ಲಿ ಮಾತ್ರ ಒಂದು ತಂಡ ಅಗ್ರಸ್ಥಾನದಲ್ಲಿದೆ.
ಹೌದು, ಇಂಡಿಯನ್ ಪ್ರೀಮಿಯರ್ ಲೀಗ್ (IPL) ಅಂದರೆ ಅದು ಕೇವಲ ಕ್ರಿಕೆಟ್ ಹಬ್ಬವಲ್ಲ, ಅದೊಂದು ಅಂಕಿ-ಅಂಶಗಳ ಸಮರ. ಮುಂಬರುವ ಐಪಿಎಲ್ 2026ರ ಸೀಸನ್ ಆರಂಭಕ್ಕೂ ಮುನ್ನ, ಕಳೆದ 18 ವರ್ಷಗಳ ಇತಿಹಾಸವನ್ನು ಕೆದಕಿದಾಗ ಅತಿ ಹೆಚ್ಚು ಪಂದ್ಯಗಳನ್ನು ಗೆದ್ದ ತಂಡಗಳ ಪಟ್ಟಿಯಲ್ಲಿ ಮುಂಬೈ ಇಂಡಿಯನ್ಸ್ ತನ್ನ ಪ್ರಾಬಲ್ಯವನ್ನು ಮೆರೆದಿದೆ. ಎಂ.ಎಸ್. ಧೋನಿ ನೇತೃತ್ವದ ಸಿಎಸ್‌ಕೆ ಅಥವಾ ವಿರಾಟ್ ಕೊಹ್ಲಿಯ ಆರ್‌ಸಿಬಿ ಈ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲು ವಿಫಲವಾಗಿವೆ.

1. ಗೆಲುವಿನ ಸರದಾರ 'ಮುಂಬೈ ಇಂಡಿಯನ್ಸ್'

ನೀತಾ ಅಂಬಾನಿ ಮಾಲೀಕತ್ವದ ಮುಂಬೈ ಇಂಡಿಯನ್ಸ್ (MI) ಐಪಿಎಲ್ ಇತಿಹಾಸದ ಅತ್ಯಂತ ಯಶಸ್ವಿ ತಂಡವಾಗಿ ಹೊರಹೊಮ್ಮಿದೆ. ಈವರೆಗೆ ಆಡಿರುವ 277 ಪಂದ್ಯಗಳಲ್ಲಿ ಬರೋಬ್ಬರಿ 153 ಗೆಲುವುಗಳನ್ನು ಸಾಧಿಸುವ ಮೂಲಕ ಮುಂಬೈ ಅಗ್ರಸ್ಥಾನದಲ್ಲಿದೆ. ಕೇವಲ 124 ಪಂದ್ಯಗಳಲ್ಲಿ ಮಾತ್ರ ಸೋತಿರುವ ಮುಂಬೈ, ಒಟ್ಟು ಐದು ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದೆ.

2.ಎರಡನೇ ಸ್ಥಾನದಲ್ಲಿ ಚೆನ್ನೈ ಸೂಪರ್ ಕಿಂಗ್ಸ್

ಐಪಿಎಲ್‌ನ ಅತ್ಯಂತ ಸ್ಥಿರ ತಂಡ ಎನಿಸಿಕೊಂಡಿರುವ ಎಂ.ಎಸ್. ಧೋನಿ ಅವರ ಚೆನ್ನೈ ಸೂಪರ್ ಕಿಂಗ್ಸ್ (CSK) ಎರಡನೇ ಸ್ಥಾನದಲ್ಲಿದೆ. ನಿಷೇಧದ ಕಾರಣ ಎರಡು ವರ್ಷ ಕೂಟದಿಂದ ಹೊರಗುಳಿದಿದ್ದರೂ, ಸಿಎಸ್‌ಕೆ 253 ಪಂದ್ಯಗಳಲ್ಲಿ 142 ಗೆಲುವುಗಳನ್ನು ದಾಖಲಿಸಿದೆ. ಮುಂಬೈನಂತೆ ಚೆನ್ನೈ ಕೂಡ ಐದು ಬಾರಿ ಟ್ರೋಫಿ ಎತ್ತಿಹಿಡಿದಿದೆ.

3. ಕೆಕೆಆರ್ ಮತ್ತು ಆರ್‌ಸಿಬಿ ನಡುವೆ ಜಿದ್ದಾಜಿದ್ದಿ

ಶಾರುಖ್ ಖಾನ್ ಮಾಲೀಕತ್ವದ ಕೋಲ್ಕತ್ತಾ ನೈಟ್ ರೈಡರ್ಸ್ (KKR) ಮೂರು ಬಾರಿ ಚಾಂಪಿಯನ್ ಆಗಿದ್ದು, 265 ಪಂದ್ಯಗಳಲ್ಲಿ 136 ಗೆಲುವುಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಇನ್ನು ಕಳೆದ 2025ರ ಸೀಸನ್‌ನಲ್ಲಿ ತನ್ನ ಚೊಚ್ಚಲ ಐಪಿಎಲ್ ಟ್ರೋಫಿ ಗೆದ್ದು ಇತಿಹಾಸ ನಿರ್ಮಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB), 271 ಪಂದ್ಯಗಳಲ್ಲಿ 134 ಗೆಲುವುಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ.

4. ಟ್ರೋಫಿ ಗೆಲ್ಲದಿದ್ದರೂ ಗೆಲುವಿನಲ್ಲಿ ಪಂಜಾಬ್-ಡೆಲ್ಲಿ ಸಮಬಲ

ಕುತೂಹಲಕಾರಿ ವಿಷಯವೆಂದರೆ, ಈವರೆಗೆ ಒಮ್ಮೆಯೂ ಟ್ರೋಫಿ ಗೆಲ್ಲದ ಡೆಲ್ಲಿ ಕ್ಯಾಪಿಟಲ್ಸ್ (DC) ಮತ್ತು ಪಂಜಾಬ್ ಕಿಂಗ್ಸ್ (PBKS) ಗೆಲುವಿನ ಸಂಖ್ಯೆಯಲ್ಲಿ ಸಮಬಲ ಸಾಧಿಸಿವೆ. ಎರಡೂ ತಂಡಗಳು ತಲಾ 122 ಗೆಲುವುಗಳನ್ನು ಹೊಂದಿವೆ. ಪಂಜಾಬ್ ಕಿಂಗ್ಸ್ 263 ಪಂದ್ಯಗಳಲ್ಲಿ ಈ ಸಾಧನೆ ಮಾಡಿದರೆ, ಡೆಲ್ಲಿ 266 ಪಂದ್ಯಗಳನ್ನು ತೆಗೆದುಕೊಂಡಿದೆ.

5. ರಾಜಸ್ಥಾನ್ ರಾಯಲ್ಸ್ ಶತಕದ ಸಾಧನೆ

ಐಪಿಎಲ್‌ನ ಉದ್ಘಾಟನಾ ಆವೃತ್ತಿಯ ಚಾಂಪಿಯನ್ಸ್ ರಾಜಸ್ಥಾನ್ ರಾಯಲ್ಸ್ (RR) 100ಕ್ಕಿಂತ ಹೆಚ್ಚು ಗೆಲುವು ದಾಖಲಿಸಿದ ತಂಡಗಳ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ರಾಜಸ್ಥಾನ್ ಆಡಿರುವ 236 ಪಂದ್ಯಗಳಲ್ಲಿ 116 ಗೆಲುವುಗಳನ್ನು ತನ್ನದಾಗಿಸಿಕೊಂಡಿದೆ.

ಅತಿ ಹೆಚ್ಚು ಪಂದ್ಯಗಳನ್ನು ಗೆದ್ದ ಟೀಮ್​​ಗಳು

ಮುಂಬೈ ಇಂಡಿಯನ್ಸ್: 153 ಗೆಲುವು (277 ಪಂದ್ಯ)
ಚೆನ್ನೈ ಸೂಪರ್ ಕಿಂಗ್ಸ್: 142 ಗೆಲುವು (253 ಪಂದ್ಯ)
ಕೋಲ್ಕತ್ತಾ ನೈಟ್ ರೈಡರ್ಸ್: 136 ಗೆಲುವು (265 ಪಂದ್ಯ)
ರಾಯಲ್ ಚಾಲೆಂಜರ್ಸ್ ಬೆಂಗಳೂರು: 134 ಗೆಲುವು (271 ಪಂದ್ಯ)
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net