ಮೂಲತಃ ರಾಜಸ್ಥಾನದ ಗಂಗಾನಗರದ ಪ್ರತಿಭೆ ಮಾನವ್ ಸುತಾರ್. ಎಡಗೈ ಸ್ಪಿನ್ನರ್ ಆಗಿರುವ ಸುತಾರ್, ಕೇವಲ ಬೌಲಿಂಗ್ ಮಾತ್ರವಲ್ಲ, ಉತ್ತಮ ಬ್ಯಾಟಿಂಗ್ ಕೂಡ ಮಾಡುವ ಕೌಶಲ್ಯವನ್ನು ಹೊಂದಿದ್ದಾರೆ. ದೇಶಿಯ ಕ್ರಿಕೆಟ್‌ನಲ್ಲಿ ರಾಜಸ್ಥಾನ ಪರ ಆಡುವ ಅವರು, 2024ರಲ್ಲಿ ತಮ್ಮ ಚೊಚ್ಚಲ ಐಪಿಎಲ್ ಪಂದ್ಯವನ್ನು ಆಡಿದರು. 2025ರ ಆವೃತ್ತಿಯಲ್ಲಿ 30 ಲಕ್ಷ ರೂ.ಗೆ ಗುಜರಾತ್ ಟೈಟಾನ್ಸ್ ಅವರನ್ನು ತಮ್ಮ ತಂಡಕ್ಕೆ ಖರೀದಿ ಮಾಡಿತು.