ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ರಾಯಲ್ಸ್, 20 ಓವರ್ನಲ್ಲಿ 225 ರನ್ಗಳ ಬೃಹತ್ ಸ್ಕೋರ್ ಕಲೆಹಾಕುವಲ್ಲಿ ಯಶಸ್ವಿಯಾಯಿತು. ಈ ವೇಳೆ, ಎರಡು ಘಟನೆಗಳು ಪಂದ್ಯ ನೋಡುತ್ತಿದ್ದ ಕ್ರಿಕೆಟ್ ಪ್ರಿಯರಿಗೆ ಹುಬ್ಬೇರಿಸಿತು. ಮೊದಲನೇಯದು, ವೈಭವ್ ಸೂರ್ಯವಂಶಿಯನ್ನು ಎರಡನೇ ಎಸೆತದಲ್ಲಿ ಔಟ್ ಮಾಡಿದ ಡೆಲ್ಲಿ ವೇಗಿ ಕೈಲ್ ಜೇಮಿಸನ್, 15 ವರ್ಷ ಬ್ಯಾಟರ್ ವಿಕೆಟ್ ಕಿತ್ತ ಖುಷಿಗೆ ಹುಚ್ಚು ಸಂಭ್ರಮ ಮೆರೆದರು. ಇದು ಹಲವರನ್ನು ಕೆರಳಿಸಿತು. ಮತ್ತೊಂದೆಡೆ, ರವೀಂದ್ರ ಜಡೇಜಾ ಮತ್ತು ಕುಲದೀಪ್ ಯಾದವ್ ನಡುವಿನ ಜಟಾಪಟಿ ಆಶ್ಚರ್ಯಕ್ಕೆ ಕಾರಣವಾಯಿತು.