ಭಾರತ ಪ್ರವಾಸಕ್ಕೆ ವಿಂಡೀಸ್ ತಂಡ ಪ್ರಕಟ: ಕಮಿಲ್ ಪೂರನ್ ಹೊಸಮುಖ

ಭಾರತ ಪ್ರವಾಸಕ್ಕೆ ವಿಂಡೀಸ್ ತಂಡ ಪ್ರಕಟ: ಕಮಿಲ್ ಪೂರನ್ ಹೊಸಮುಖ
ಭಾರತ ಪ್ರವಾಸಕ್ಕೆ ವಿಂಡೀಸ್ ತಂಡ ಪ್ರಕಟ: ಕಮಿಲ್ ಪೂರನ್ ಹೊಸಮುಖ
Published on
ಸೇಂಟ್ ಜಾನ್ಸ್: ಸೆಪ್ಟೆಂಬರ್ 27ರಿಂದ ಅಕ್ಟೋಬರ್ 17ರವರೆಗೆ ನಿಗದಿಯಾಗಿರುವ ಭಾರತ ವಿರುದ್ಧದ 3 ಏಕದಿನ ಹಾಗೂ 5 ಟಿ20 ಪಂದ್ಯಗಳ ಸರಣಿಗೆ ಪ್ರವಾಸಿ ವೆಸ್ಟ್ ಇಂಡೀಸ್ ತಂಡ ಪ್ರಕಟಿಸಲಾಗಿದೆ. ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ 273 ರನ್‌ಗಳಿಸಿ ಗಮನಸೆಳೆದಿದ್ದ ಕಮಿಲ್ ಪೂರನ್ ಹೊಸಮುಖ ಎನಿಸಿದ್ದು, ಜಾನ್ ಕ್ಯಾಂಪ್‌ಬೆಲ್ ಪುನರಾಗಮನ ಕಂಡಿದ್ದಾರೆ. ಏಕದಿನ ಸರಣಿಗೆ ಗೈರಾಗಲಿರುವ ಸ್ಟಾರ್ ಬ್ಯಾಟರ್ ಶಿಮ್ರೊನ್ ಹೆಟ್ಮೆಯರ್ ಚುಟುಕು ಸರಣಿಗೆ ವಿಂಡೀಸ್ ತಂಡ ಕೂಡಿಕೊಳ್ಳಲಿದ್ದಾರೆ. ಅನುಭವಿ ಆಲ್ರೌಂಡರ್ ಜೇಸನ್ ಹೋಲ್ಡರ್‌ಗೆ ಸಂಪೂರ್ಣ ಪ್ರವಾಸದಿಂದ ವಿಶ್ರಾಂತಿ ನೀಡಲಾಗಿದ್ದು, ಶೈ ಹೋಪ್ ತಂಡ ಮುನ್ನಡೆಸಲಿದ್ದಾರೆ.
ಭಾರತ ಪ್ರವಾಸಕ್ಕೆ ವಿಂಡೀಸ್ ತಂಡ: ಶೈ ಹೋಪ್,ಜುವೆಲ್ ಆಂಡ್ರ್ಯೂ, ಜಾನ್ ಕ್ಯಾಂಪ್‌ಬೆಲ್, ಕೀಸ್ ಕಾರ್ಟಿ, ರೋಸ್ಟನ್ ಚೇಸ್, ಮ್ಯಾಥ್ಯೂ ಫೋರ್ಡೆ, ಜಸ್ಟೀನ್ ಗ್ರೀವ್ಸ್, ಅಮಿರ್ ಜಾಂಗೊ, ಅಲ್ಜಾರಿ ಜೋಸೆಫ್​, ಶಮರ್ ಜೋಸೆಫ್​, ವಿಟೆಲ್ ಲವಿಸ್,ಗುಡಕೇಶ್ ಮೋತಿ, ಕೀಮೊ ಪೌಲ್,ರುದರ್ಫೋಡ್​, ಜೈಡನ್ ಸೀಲ್ಸ್ (ಏಕದಿನ), ಶಿಮ್ರೊನ್ ಹೆಟ್ಮೆಯರ್, ಕಮಿಲ್ ಪೂರನ್, ರೊವ್ಮನ್ ಪೊವೆಲ್, ಕ್ವಿಂಟಿನ್ ಸ್ಯಾಮ್ಸನ್, ರೋಮಾರಿಯೊ ಶೆರ್ಡ್, ಶಮರ್ ಸ್ಪ್ರಿಂಗರ್ (ಟಿ20).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net