2027ರ ಏಕದಿನ ವಿಶ್ವಕಪ್​ ನೇರ ಅರ್ಹತೆಯಿಂದ ವಂಚಿತವಾದ ವೆಸ್ಟ್​ ಇಂಡೀಸ್​!

2027ರ ಏಕದಿನ ವಿಶ್ವಕಪ್​ ನೇರ ಅರ್ಹತೆಯಿಂದ ವಂಚಿತವಾದ ವೆಸ್ಟ್​ ಇಂಡೀಸ್​!
2027ರ ಏಕದಿನ ವಿಶ್ವಕಪ್​ ನೇರ ಅರ್ಹತೆಯಿಂದ ವಂಚಿತವಾದ ವೆಸ್ಟ್​ ಇಂಡೀಸ್​!
Published on

ನವದೆಹಲಿ: ಎರಡು ಬಾರಿಯ ಚಾಂಪಿಯನ್​ ವೆಸ್ಟ್​ ಇಂಡೀಸ್ (

West Indies

)​ ತಂಡ 2027ರ ಏಕದಿನ ವಿಶ್ವಕಪ್​ (

ODI World Cup

) ಟೂರ್ನಿಯ ನೇರ ಅರ್ಹತೆಯಿಂದ ವಂಚಿತವಾಗಿದೆ. ಅಫ್ಘಾನಿಸ್ತಾನ ತಂಡ ಐರ್ಲೆಂಡ್​ ವಿರುದ್ಧದ ಏಕದಿನ ಸರಣಿಯ 2ನೇ ಪಂದ್ಯದಲ್ಲಿ ಗೆಲುವು ದಾಖಲಿಸುವ ಮೂಲಕ ಐಸಿಸಿ ರ್‍ಯಾಂಕಿಂಗ್​ನಲ್ಲಿ ವೆಸ್ಟ್​ ಇಂಡೀಸ್​ ತಂಡವನ್ನು ಹಿಂದಿಕ್ಕಿದೆ. ಇದರಿಂದ ಆಫ್ಘನ್​ ವಿಶ್ವಕಪ್​ ಅರ್ಹತೆ ಅವಕಾಶ ಹೆಚ್ಚಿಸಿಕೊಂಡಿದ್ದರೆ, ವೆಸ್ಟ್​ ಇಂಡೀಸ್​ ತಂಡ ಈ ಬಾರಿಯೂ ಅರ್ಹತಾ ಸುತ್ತಿನಲ್ಲಿ ಸೆಣಸಬೇಕಾದ ಸವಾಲು ಎದುರಿಸಿದೆ.

ವೆಸ್ಟ್​ ಇಂಡೀಸ್​ ಕಳೆದ ಬಾರಿ ಅರ್ಹತಾ ಸುತ್ತಿನಲ್ಲೂ ವೈಲ್ಯ ಕಂಡು 2023ರ ಏಕದಿನ ವಿಶ್ವಕಪ್​ಗೆ ಅರ್ಹತೆ ಗಳಿಸಲು ವಿಫಲವಾಗಿತ್ತು.

2027ರ ಏಕದಿನ ವಿಶ್ವಕಪ್​ಗೆ ಆತಿಥೇಯ ದ. ಆಫ್ರಿಕಾ, ಜಿಂಬಾಬ್ವೆ ತಂಡಗಳು ಈಗಾಗಲೆ ಅರ್ಹತೆ ಪಡೆದಿವೆ. ಐಸಿಸಿ ಏಕದಿನ ರ್‍ಯಾಂಕಿಂಗ್​ನಲ್ಲಿ ಅಗ್ರ 8ರಲ್ಲಿರುವ ತಂಡಗಳೂ ನೇರಅರ್ಹತೆ ಗಳಿಸಲಿವೆ. ಇದಕ್ಕೆ ಸೆಪ್ಟೆಂಬರ್​ 30 ಅಂತಿಮ ಗಡುವಾಗಿದೆ.

ಇದೀಗ ಅಫ್ಘಾನಿಸ್ತಾನ 90 ಅಂಕದೊಂದಿಗೆ ಐಸಿಸಿ ಏಕದಿನ ರ್‍ಯಾಂಕಿಂಗ್​ನಲ್ಲಿ 7ನೇ ಸ್ಥಾನಕ್ಕೇರಿದ್ದರೆ, ವೆಸ್ಟ್​ ಇಂಡೀಸ್​ 73 ಅಂಕದೊಂದಿಗೆ 10ನೇ ಸ್ಥಾನಕ್ಕೆ ಕುಸಿದಿದೆ. ಬಾಂಗ್ಲಾದೇಶ 83 ಅಂಕದೊಂದಿಗೆ 9ನೇ ಸ್ಥಾನದಲ್ಲಿದೆ. ದ. ಆಫ್ರಿಕಾ 4ನೇ ಸ್ಥಾನದಲ್ಲಿದೆ. ಹೀಗಾಗಿ ರ್‍ಯಾಂಕಿಂಗ್​ನಲ್ಲಿ 9ನೇ ಸ್ಥಾನದಲ್ಲಿರುವ ತಂಡಕ್ಕೂ ವಿಶ್ವಕಪ್​ ಅರ್ಹತೆ ಸಿಗಲಿದೆ. ವೆಸ್ಟ್​ ಇಂಡೀಸ್​ ಇನ್ನು ಸೆ.27ರಿಂದ ಭಾರತ ವಿರುದ್ಧ 3 ಏಕದಿನ ಪಂದ್ಯ ಆಡಲಿದ್ದು, ಇದರಲ್ಲಿ 2ನೇ ಪಂದ್ಯ ಸೆ.30ಕ್ಕೆ ನಡೆಯಲಿದೆ. ಆದರೆ ಈ ಸರಣಿಯಲ್ಲಿ ಗೆದ್ದರೂ ವಿಂಡೀಸ್​ ಅಗ್ರ 9ರೊಳಗೆ ಮರಳಲು ಸಾಧ್ಯವಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net