15 ವರ್ಷದ ಹುಡುಗನೊಬ್ಬ ಮೈದಾನದಲ್ಲಿ ಬೌಂಡರಿ, ಸಿಕ್ಸರ್ಗಳನ್ನು ಹಿಗ್ಗಾಮುಗ್ಗಾ ಬಾರಿಸುತ್ತಾನೆ ಎಂದರೆ ಅಚ್ಚರಿ ಹಾಗೂ ಗೊಂದಲ ಮೂಡುವುದು ತೀರ ಸಹಜ. ಕಾರಣ, ಅಂತಾರಾಷ್ಟ್ರೀಯ ಮತ್ತು ಅನುಭವಿ ಆಟಗಾರರಿಂದಲೇ ಸಾಧ್ಯವಾಗದು, ಒಬ್ಬ ಚಿಕ್ಕ ಹುಡುಗನಿಂದ ಆಗುತ್ತಿರುವುದು ಸದ್ಯ ಕ್ರಿಕೆಟ್ ದಿಗ್ಗಜರಿಗೆ ನಂಬಲು ಕಷ್ಟಸಾಧ್ಯವಾಗಿದೆ. ಈ ವರ್ಷ ಅತ್ಯಧಿಕ ರನ್ಗಳನ್ನು ಗಳಿಸಿದ ಬ್ಯಾಟ್ಸ್ಮನ್ಗಳ ಪೈಕಿ ಬರೋಬ್ಬರಿ 400 ರನ್ಗಳನ್ನು ದಾಖಲಿಸುವ ಮೂಲಕ ಪಟ್ಟಿಯಲ್ಲಿ ವೈಭವ್ ಅಗ್ರ ಸ್ಥಾನಕ್ಕೂ ಏರಿದರು. ಈ ಮಧ್ಯೆ, ವೆಸ್ಟ್ ಇಂಡೀಸ್ ದಂತಕಥೆ ಇಯಾನ್ ಬಿಶಾಪ್ ಶಾಕಿಂಗ್ ಹೇಳಿಕೆ ನೀಡಿದ್ದಾರೆ.